ಚಿರತೆ ಕಾರ್ಯ ಪಡೆಯಿಂದ ಗ್ರಾಮಸ್ಥರಿಗೆ ಅರಿವು: ಗಂಗನ ದೊಡ್ಡಿ ಹಾಗೂ ಬಸಪ್ಪನ ದೊಡ್ಡಿ ಮತ್ತು ಉಡುತೊರೆ ಜಲಾಶಯ ಸುತ್ತ ಮುತ್ತಲಿನ ಹಳ್ಳದ ಸಮೀಪದಲ್ಲಿಯೇ ರೈತರ ಕಬ್ಬಿನ ತೋಟಗಳ ಬಳಿಯೇ ಚಿರತೆ ಪದೇಪದೇ ಕಾಣಿಸಿಕೊಳ್ಳುತ್ತಿದ್ದು, ರೈತರ ಜಮೀನುಗಳಲ್ಲಿ ಸಾಕುಪ್ರಾಣಿಗಳಾದ ನಾಯಿ, ಮೇಕೆ, ಕುರಿ ಗುರಿಯಾಗಿಸಿಕೊಂಡು ಚಿರತೆ ಕೊಂದು ತಿನ್ನುತ್ತಿರುವುದು ರೈತರ ನಿದ್ದೆಗೆಡಿಸಿದೆ.
ಹನೂರು(ಡಿ.29): ಸಾಕುಪ್ರಾಣಿಗಳ ಭಕ್ಷಕ ಚಿರತೆ ಸೆರೆಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ತಂಡ ರಚನೆ ಮಾಡಿ ಡೋನ್ ಕ್ಯಾಮೆರಾ ಬಳಸಿ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ. ಹನೂರು ತಾಲೂಕಿನ ಮಲೆಮಹದೇಶ್ವರ ವನ್ಯ ಜೀವಿ ವಿಭಾಗದ ವ್ಯಾಪ್ತಿಗೆ ಬರುವ ಬಫರ್ ಜೋನ್ ವಲಯದ ಗಂಗನ ದೊಡ್ಡಿ, ಬಸಪ್ಪನ ದೊಡ್ಡಿ, ಉಡುತೊರೆ ಜಲಾಶಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾಕುಪ್ರಾಣಿಗಳ ಭಕ್ಷಕ ಚಿರತೆಯನ್ನು ಸರಿ ಹಿಡಿಯಲು ರೈತ ಸಂಘಟ ನೆಯ ಒತ್ತಾಯದ ಮೇರೆಗೆ ಹಗಲು ರಾತ್ರಿ ಎನ್ನದೆ ಅರಣ್ಯ ಇಲಾಖೆ ಸಿಬ್ಬಂದಿ ತಂಡ ರಚಿಸಿ ಚಿರತೆ ಸೆರೆಗೆ ಬಲೆ ಬೀಸಲಾಗಿದೆ.
ಚಿರತೆ ಕಾರ್ಯ ಪಡೆಯಿಂದ ಗ್ರಾಮಸ್ಥರಿಗೆ ಅರಿವು: ಗಂಗನ ದೊಡ್ಡಿ ಹಾಗೂ ಬಸಪ್ಪನ ದೊಡ್ಡಿ ಮತ್ತು ಉಡುತೊರೆ ಜಲಾಶಯ ಸುತ್ತ ಮುತ್ತಲಿನ ಹಳ್ಳದ ಸಮೀಪದಲ್ಲಿಯೇ ರೈತರ ಕಬ್ಬಿನ ತೋಟಗಳ ಬಳಿಯೇ ಚಿರತೆ ಪದೇಪದೇ ಕಾಣಿಸಿಕೊಳ್ಳುತ್ತಿದ್ದು, ರೈತರ ಜಮೀನುಗಳಲ್ಲಿ ಸಾಕುಪ್ರಾಣಿಗಳಾದ ನಾಯಿ, ಮೇಕೆ, ಕುರಿ ಗುರಿಯಾಗಿಸಿಕೊಂಡು ಚಿರತೆ ಕೊಂದು ತಿನ್ನುತ್ತಿ ರುವುದು ರೈತರ ನಿದ್ದೆಗೆಡಿಸಿದೆ. ಹೀಗಾಗಿ ಚಿರತೆ ಸೆರೆಗೆ ಕಾರ್ಯಪಡೆಯಿಂದ ಗ್ರಾಮಸ್ಥರಿಗೆ ರಾತ್ರಿ ವೇಳೆ ಸಾಕು ಪ್ರಾಣಿಗಳನ್ನು ಸುರಕ್ಷಿತ ಸ್ಥಳದಲ್ಲಿ ಕಟ್ಟಿ ಹಾಕಬೇಕು. ಜೊತೆಗೆ ಒಬ್ಬೊಬ್ಬರೇ ಓಡಾಡುವುದನ್ನು ಬಿಟ್ಟು ಸಣ್ಣ ಮಕ್ಕಳು, ಹಿರಿಯ ನಾಗರಿಕರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮ ಸ್ಥರಿಗೆ ಮನವಿ ಮಾಡಿದ್ದಾರೆ.
ಲಿಂಗಾಯತರು ಹಿಂದೂಗಳು ಅಲ್ಲ, ವೀರಶೈವರು ಅಲ್ಲ: ಹಿಮ್ಮಡಿ ಮುರುಘರಾಜೇಂದ್ರ ಶ್ರೀ
ಚಿರತೆ ಸೆರೆಗೆ ಅರಣ್ಯಾಧಿಕಾರಿಗಳ ಹರಸಾಹಸ:
ಕಳೆದ ಹಲವಾರು ತಿಂಗಳುಗಳಿಂದ ಗಂಗನ ದೊಡ್ಡಿ ಮತ್ತೆ ಸುತ್ತಮುತ್ತಲಿನ ಐದಾರು ಕಿ.ಮೀ ವ್ಯಾಪ್ತಿಯಲ್ಲಿ ಚಿರತೆ ಸಾಕುಪ್ರಾಣಿಗಳನ್ನು ಕೊಂದು ತಿನ್ನುವುದರ ಜೊತೆಗೆ ಗ್ರಾಮಸ್ಥರಿಗೂ ಪದೇ ಪದೇ ಕಾಣಿಸಿಕೊಂಡು ಭಯಭೀತರಾ ಗಿದ್ದು, ಆತಂಕ ದೂರ ಮಾಡಲು ಚಿರತೆ ಸೆರೆಗೆ ಹಗಲು ರಾತ್ರಿ ಎನ್ನದೆ ಅರಣ್ಯ ಇಲಾಖೆ ಸಿಬ್ಬಂದಿ ತಂಡ ರಚಿಸಿ ಕಾರ್ಯಾಚರಣೆ ನಡೆಸಿದ್ದಾರೆ.
ಈಗಾಗಲೇ ಗಂಗನ ದೊಡ್ಡಿ ಗ್ರಾಮದಲ್ಲಿ ಬೋನ್ ಇಡಲಾಗಿದೆ. ಚಿರತೆ ಬೋನಿಗೆ ಬೀಳುತ್ತಿಲ್ಲ. ಚಿರತೆ ಪತ್ತೆಗೆ ಫೈಬರ್‌ಗೇಜ್ ಹಾಗೂ ತುಮಕೂರು ಗೇಜ್ ಪಂಜರವನ್ನು ಅಳವಡಿಸಲು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕ್ರಮ ಕೈಗೊಳ್ಳಲು ಮುಂದಾಗಿದ್ದೇವೆ. ಇಲಾಖೆ ಸಿಬ್ಬಂದಿ ರಾತ್ರಿ ಹಗಲು ತಂಡ ರಚನೆ ಮಾಡಿಕೊಂಡು ಗ್ರಾಮಗಳಲ್ಲಿ ಕಾವಲು ಕಾಯುತ್ತಿದ್ದಾರೆ ಎಂದು ಬಫರ್‌ಜೋನ್ ವಲಯ ಅರಣ್ಯಾಧಿಕಾರಿ ಪ್ರವೀಣ್ ತಿಳಿಸಿದ್ದಾರೆ.
ಕ್ರಿಸ್ಮಸ್ ಹಬ್ಬದಂದೇ ಹರಿದ ನೆತ್ತರು: ಚರ್ಚ್‌ಗೆ ಹೋಗಬೇಕಿದ್ದ ಪತ್ನಿಯನ್ನ ಕೊಂದ ಕುಡುಕ ಗಂಡ!
ಮಿಣ್ಯಂ ಬಳಿ ರಸ್ತೆ ದಾಟಿದ ಚಿರತೆ
ಹನೂರು: ಮಿಣ್ಯಂ ಗ್ರಾಮದ ಬಳಿ ಚಿರತೆ ಯೊಂದು ಹಾಡು ಹಾಗಲೇ ರಸ್ತೆ ದಾಟುತ್ತಿ ರುವುದನ್ನು ಸಾರ್ವ ಜನಿಕರು ಮೊಬೈಲ್ ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಎಚ್ಚರಿಕೆಯಿಂದ ವಾಹನ ಸವಾರರು ತೆರಳುವಂತೆ ಮನವಿ ಮಾಡಿದ್ದಾರೆ.
ಮಿಣ್ಯಂ ಅರಣ್ಯ ಪ್ರದೇಶದಲ್ಲಿ ರಸ್ತೆ ದಾಟುತ್ತಿ ರುವ ಚಿರತೆ. ರಾಮಪುರದಿಂದ ಮಿಣ್ಯಂ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯೆ ಸಿಗುವ ಮಲೆ ಮಹದೇಶ್ವರ ವನ್ಯಧಾಮ ಅರಣ್ಯ ಪ್ರದೇಶದಲ್ಲಿ ಬರುವ ರಸ್ತೆಯಲ್ಲಿ ಕಾರಿನಲ್ಲಿ ತೆರಳುತ್ತಿದ್ದ ಸಾರ್ವಜನಿಕರಿಗೆ ದಿಢೀರನೆ ಚಿರತೆ ರಸ್ತೆ ದಾಟುತ್ತಿರುವುದು ಪ್ರತ್ಯಕ್ಷವಾಗಿದೆ. ಇದನ್ನು ಕಂಡ ವಾಹನ ಸವಾರರು ಮೊಬೈಲ್ ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುವ ಮೂಲಕ ವಲಯ ಅರಣ್ಯ ಅಧಿಕಾರಿಗಳಿಗೆ ಈ ಭಾಗದಲ್ಲಿ ಚಿರತೆ ಇರುವ ಬಗ್ಗೆ ಕಾಡಂಚಿನ ಗ್ರಾಮಗಳ ಜನತೆಗೆ ಎಚ್ಚರಿಕೆಯಿಂದ ಇರುವಂತೆ ತಿಳಿಸಲು ಮನವಿ ಮಾಡಿದ್ದಾರೆ.