'ಸಂಸದ ಪ್ರತಾಪ್ ಸಿಂಹ ಹನುಮಂತನಿಗೆ ಹುಟ್ಟಿದವರಾ?'

By Web Desk  |  First Published Sep 27, 2019, 12:21 PM IST

ಮಹಿಷಾ ದಸರಾ ಆಚರಿಸಲು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಹಾಕಲಾದ ಶಾಮಿಯಾನ ತೆರವುಗೊಳಿಸುವಂತೆ ಹೇಳಿ, ಮೈಸೂರು ಸಂಸದ ಪೊಲೀಸರ ವಿರುದ್ಧ ಹರಿಹಾಯ್ದಿದ್ದಾರೆ. ಮಹಿಷನಿಗೆ ಹುಟ್ಟಿದವರು ಇಂಥ ಕಾರ್ಯಕ್ರಮಗಳನ್ನು ಮನೆಯಲ್ಲಿ ಆಚರಿಸಿಕೊಳ್ಳಿ ಎಂದು ಹೇಳಿದ್ದು, ಇದೀಗ ಇದಕ್ಕೆ ಪ್ರತಿ ಹೇಳಿಕೆ ನೀಡಿದ್ದಾರೆ ಸ್ವಾಮೀಜಿಯೊಬ್ಬರು.


ಮೈಸೂರು (ಸೆ.27): ನವರಾತ್ರಿ ಆರಂಭವಾಗಲು ಇನೇನು ದಿನವಿದೆ ಎನ್ನುವಷ್ಟರ್ಲಿಲಮ ಮೈಸೂರಿನಲ್ಲಿ ಮಹಿಷಾ ದಸರಾ ಆಚರಿಸುವ ವಿಷಯವಾಗಿ ಮಾತಿನ ವಾಗ್ಯುದ್ಧ ಜೋರಾಗುತ್ತಿದೆ. ಚಾಮುಂಡಿ ಬೆಟ್ಟದಲ್ಲಿ ಮಹಿಷಾ ದಸರಾ ಆಚರಿಸಲು ಶಾಮಿಯಾನ ಹಾಕಲು ಅನುಮತಿ ನೀಡಿದ್ದು ಏಕೆಂದು ಡಿಸಿಪಿ ವಿರುದ್ಧ ಸಂಸದ ಪ್ರತಾಪ್ ಸಿಂಹ ಹರಿಹಾಯ್ದಿದ್ದು, ಮಹಿಷನಿಗೆ ಹುಟ್ಟಿದವರು ಇಂಥ ಕಾರ್ಯಕ್ರಮವನ್ನು ಬೇಕಾದರೆ ಮನೆಯಲ್ಲಿ ಆಚರಿಸಿಕೊಳ್ಳಲಿ ಎಂದಿದ್ದಾರೆ. 

ಈ ಬೆನ್ನಲ್ಲೇ ಸಿಂಹ ವಿರುದ್ಧ ಉರಿ ಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮಿ ತಿರುಗೇಟು ನೀಡಿದ್ದು, 'ಪ್ರತಾಪ್ ಸಿಂಹ ನಮ್ಮನ್ನು ಮಹುಷಾಸುರನಿಗೆ ಹುಟ್ಟಿದವರು ಅಂತ ಕರೆದಿದ್ದಾರೆ. ಇತಿಹಾಸ ಪ್ರಸಿದ್ಧ ಮಹಿಷನಿಗೆ ಹುಟ್ಟಿದವರು ಎನ್ನಿಸಿಕೊಳ್ಳಲು ನಮಗೆ ಸಂತೋಷ. ಹಾಗಾದರೆ ಸಂಸದ ಪ್ರತಾಪ್ ಸಿಂಹ ಹನುಮಂತನಿಗೆ ಹುಟ್ಟಿದವರಾ?' ಎಂದು ಪ್ರಶ್ನಿಸಿದ್ದಾರೆ. ಆ ಮೂಲಕ ಈ ವಿಷಯವಾಗಿ ನಡೆಯುತ್ತಿರುವ ವಾದ ವಿವಾದಗಳು ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುವಂತೆ ಕಾಣಿಸುತ್ತಿದೆ.

Tap to resize

Latest Videos

undefined

ಪೊಲೀಸರಿಂದ ಈ ಷಂಡತನ ನಿರೀಕ್ಷಿಸಿರಲಿಲ್ಲ: ಸಿಂಹ

ಮೈಸೂರಿನ ಅಂಬೇಡ್ಕರ್ ಉದ್ಯಾನವನದಲ್ಲಿ ಮಹಿಷ ದಸರಾ ಆಚರಿಸುತ್ತಿದ್ದೇವೆ. ಕಳೆದ ಏಳು ವರ್ಷಗಳಿಂದಲೂ ಈ ಹಬ್ಬವನ್ನು ಆಚರಿಸುತ್ತಿದ್ದೇವೆ. ಆಗೊಂದು ಸಂವಿಧಾನ, ಈಗೊಂದು ಸಂವಿಧಾನವೇನಾದ್ರೂ ಇದ್ಯಾ?  ಈ ಹಬ್ಬವನ್ನು ಸಂಭ್ರಮಿಸಲು ನಮಗೆ ರಾತ್ರಿ ಒಂಬತ್ತು ಗಂಟೆಗೆ ಅವಕಾಶ ಕೊಡ್ತಿವಿ ಎಂದು ಹೇಳಿ, 144 ಸೆಕ್ಷನ್ ಜಾರಿ ಮಾಡಲು ಮುಂದಾಗಿದ್ದಾರೆ, ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

'ಸಂಸದ ವಿ.ಶ್ರೀನಿವಾಸ್ ಪ್ರಸಾದ್  ಅವರನ್ನು ದಸರಾಗೆ ಕರೆತರಲು ಪ್ರತಾಪ್ ಸಿಂಹರಿಗೆ ಆಗಿಲ್ಲ. ಜಿಲ್ಲಾಡಳಿತ ಮಾಡ್ತಿರೋದು ಕುಣಿದು ಕುಪ್ಪಳಿಸುವ ದಸರಾ. ನೆರೆಗಳಲ್ಲಿ ಬರ ಬಂದು ಜನ ನರಳಾಡುತಿದ್ದಾರೆ. ನೀವು ಕೊಟ್ಟಿರುವ ಹತ್ತು ಸಾವಿರ ಚೆಕ್‌ಗಳು ವಾಪಾಸ್ ಬಂದಿವೆ. ನಿಮ್ಮ ಜಿಲ್ಲಾಡಳಿತ, ಸರ್ಕಾರಗಳಿಗೆ ನಾಚಿಕೆ ಆಗಬೇಕು. 144 ಸೆಕ್ಷನ್ ಜಾರಿಯಿದ್ದಾಗ ನೀವು ಹನುಮಂತನ ಉತ್ಸವ ಮಾಡ್ತಿರಿ. ನೀವು ಯಾವ ಸಂವಿಧಾನ ಅಡಯಲ್ಲಿದ್ದಿರಿ? ನಾವು ಮುಂದಿನ ದಿನಗಳಲ್ಲಿ ಈ ಬಗ್ಗೆ ಚರ್ಚಿಸಿ, ತೀರ್ಮಾನಕ್ಕೆ ಬರ್ತಿವಿ. ಮೈಸೂರಿಗೆ ಮಹಿಷನಿಂದ ಮಹಿಷಪುರ, ಮಹಿಷ ಮಂಡಲ ಅಂತ ಹೆಸರು ಬಂದಿದೆ.  ಬೆಟ್ಟದಲ್ಲಿ ಮಹಿಷ ದಸರಾಗೆ ಅಡ್ಡಿ ಮಾಡಿ ಸಂಸದರು ದಬ್ಬಾಳಿಕೆ ನಡೆಸಿದ್ದಾರೆ. ಪ್ರತೀವರ್ಷ ಮೈಸೂರು ದಸರಾ ಆಚರಣೆಗೆ ಮೊದಲೇ ಮಹಿಷ ದಸರಾ ಆಚರಣೆ ಮಾಡ್ತಿದ್ವಿ.ನೆನ್ನೆಯಷ್ಟೇ ಚಾಮುಂಡೇಶ್ವರಿ ಬೆಟ್ಟದಲ್ಲಿ ಹಾಕಿದ್ದ ವೇದಿಕೆ ತೆರುವುಗೊಳಿಸಿ ದಬ್ಬಾಳಿಕೆ ನಡೆಸಿದ್ದಾರೆ. ಸಂವಿಧಾನದಲ್ಲಿ ಎಲ್ಲರಿಗೂ ಅವರದ್ದೇ ಆದ ಆಚರಣೆಗೆ ಅವಕಾಶ ಇದೆ. ಸಂಸದರಾಗಿ ನಮ್ಮ ಹಕ್ಕುಗಳಿಗೆ ಧಕ್ಕೆ ತರೋದು ಸರಿಯಲ್ಲ,' ಎಂದು ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ ಬಳಿಕ ಜ್ಞಾಪ್ರಕಾಶ್ ಸ್ವಾಮೀಜಿ ಕಿಡಿಕಾರಿದ್ದಾರೆ.

ದಸರಾ ಹೊಸ್ತಿಲಲ್ಲಿ ಭಗವಾನ್ ಹೊಸ ವಿವಾದ

ಮಹಿಷ ದಸರಾ ಆಚರಿಸಲು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಶಾಮಿಯಾನ ಹಾಕಲಾಗಿತ್ತು. ಇದಕ್ಕೆ ಅನುಮತಿ ನೀಡಿದ್ದ ಪೊಲೀಸ್ ಇಲಾಖೆ ವಿರುದ್ದ ಸಂಸದರು ಹರಿಹಾಯ್ದಿದ್ದರು. ಅಲ್ಲದೇ ವೇದಿಕೆ ತೆರವುಗೊಳಿಸುವಂತೆಯೂ ಹೇಳಿದ್ದರು. ಅಲ್ಲದೇ ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾಸುರ ಪ್ರತಿಮೆಯಂಥ ಪ್ರತಿಮೆ ಜಗತ್ತಿನಲ್ಲಿ ಎಲ್ಲಿಯೂ ಇಲ್ಲ. ಅದನ್ನು ನೋಡಿದರೆ ಮಕ್ಕಳು ಹೆದರುತ್ತಾರೆ. ಆದ್ದರಿಂದ ಅದನ್ನು ತೆರವುಗೊಳಿಸಬೇಕೆಂದು ಸರ್ಕಾರವನ್ನು ಆಗ್ರಹಿಸುವ ಮೂಲಕ ಚಿಂತಕ ಕೆ.ಎಸ್. ಭಗವಾನ್ ಇತ್ತೀಚೆಗೆ ಹೊಸ ವಿವಾದವನ್ನು ಸೃಷ್ಟಿಸಿದ್ದರು. 

ಒಟ್ಟಿನಲ್ಲಿ ದಸರಾ ವಿಷಯವಾಗಿ ಈ ರೀತಿ ಬೆಳವಣಿಗೆ ನಡೆಯುತ್ತಿರುವುದು ನಾಡಹಬ್ಬ ಆಚರಿಸುವ ಸಂಭ್ರಮದಲ್ಲಿ ಇರುವ ಕರುನಾಡ ಮಂದಿಗೆ ನೋವಾಗುತ್ತಿರುವುದು ಮಾತ್ರ ಸುಳ್ಳಲ್ಲ. 

"

 

ಮೈಸೂರು ದಸರಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!