ಕೋಟ್ಯಂತರ ಹಿಂದೂಗಳ ಆರಾಧ್ಯ ದೈವ ಶ್ರೀರಾಮನ ದರ್ಶನಕ್ಕೆ ಹೋಗುವ ಬೆಳಗಾವಿ ಜಿಲ್ಲಾ ಸುತ್ತಮುತ್ತಲಿನ ಭಾಗದ ಜನರಿಗೆ ಅನುಕೂಲವಾಗುವಂತೆ ರೈಲು ವ್ಯವಸ್ಥೆ ಕಲ್ಪಿಸಲು ಶ್ರಮಿಸುವುದಾಗಿ ಭರವಸೆ ನೀಡಿದ ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ
ಬೆಳಗಾವಿ(ಆ.24): ಹಿಂದೂಗಳ ಆರಾಧ್ಯ ದೈವವಾಗಿರುವ ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಹೋಗಿ ಬರಲು ಮುಂಬರುವ ದಿನಗಳಲ್ಲಿ ರೈಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ ಭರವಸೆ ನೀಡಿದರು.
ನಗರದ ರಾಮದೇವ ಗಲ್ಲಿಯ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಿರುವ ಶ್ರೀ ವಿನಾಯಕನಿಗೆ ಭಾನುವಾರ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದು ಮಾತನಾಡಿದ ಅವರು, ಕೋಟ್ಯಂತರ ಹಿಂದೂಗಳ ಆರಾಧ್ಯ ದೈವ ಶ್ರೀರಾಮನ ದರ್ಶನಕ್ಕೆ ಹೋಗುವ ಬೆಳಗಾವಿ ಜಿಲ್ಲಾ ಸುತ್ತಮುತ್ತಲಿನ ಭಾಗದ ಜನರಿಗೆ ಅನುಕೂಲವಾಗುವಂತೆ ರೈಲು ವ್ಯವಸ್ಥೆ ಕಲ್ಪಿಸಲು ಶ್ರಮಿಸುವುದಾಗಿ ಭರವಸೆ ನೀಡಿದರು.
undefined
ನಮಗೂ ಒಂದು 'ಭಾಗ್ಯ' ಕೊಡಿ; ಅವಿವಾಹಿತ ಯುವರೈತರಿಂದ ಸರ್ಕಾರಕ್ಕೆ ಮನವಿ!
ಇದೇ ವೇಳೆ ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಭವ್ಯ ಶ್ರೀರಾಮ ಮಂದಿರಕ್ಕೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ನೆರವೇರಿಸಿದ್ದು, ಮುಂಬರುವ ದಿನಗಳಲ್ಲಿ ಶ್ರೀರಾಮನ ದರ್ಶನಕ್ಕಾಗಿ ಅನುಕೂಲವಾಗುವಂತೆ ಬೆಳಗಾವಿಯಿಂದ ಅಯೋಧ್ಯೆಗೆ ಒಂದು ರೈಲು ವ್ಯವಸ್ಥೆ ಕಲ್ಪಿಸಿಕೊಡುವಂತೆ ದೇವಸ್ಥಾನ ಮಂಡಳಿಯ ಸದಸ್ಯರು ಮತ್ತು ಸ್ಥಳೀಯರು ರೈಲ್ವೆ ಸಚಿವ ಸುರೇಶ ಅಂಗಡಿ ಅವರಿಗೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಗ್ರಾಮೀಣ ಬಿಜೆಪಿ ಮಂಡಳದ ಅಧ್ಯಕ್ಷ ಧನಂಜಯ ಜಾಧವ, ಮಾಜಿ ಮೇಯರ್‌ಗಳಾದ ಅಶೋಕ ಪೋತದಾರ, ಶಿವಾಜಿ ಸುಂಟಕರ, ಗಣೇಶ ಮಂಡಳ ಅಧ್ಯಕ್ಷ ರಾಜಶೇಖರ ಹಂಡೆ, ಬಾಳಾಸಾಹೇಬ ಕಾಕತ್ಕರ ಸೇರಿದಂತೆ ಇನ್ನಿತರರು ಇದ್ದರು.