ಮೋದಿ ವಿಶ್ವಮಾನ್ಯ ನಾಯಕ, ದೇಶದಲ್ಲಿ ಹೊಸ ಮನ್ವಂತರ ತಂದ ಲೀಡರ್‌: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್

By Girish Goudar  |  First Published Sep 17, 2023, 12:46 PM IST

ಮೋದಿ ಸರ್ಕಾರ ವೃತ್ತಿ ಕೌಶಲ್ಯ ಹೊಂದಿದವರಿಗೆ ಸಾಕಷ್ಟು ಅವಕಾಶಗಳನ್ನ ಕಲ್ಪಸಿದೆ. ಪಿಎಂ ವಿಶ್ವಕರ್ಮ ಯೋಜನೆ ಸಂಪ್ರದಾಯಿಕ ಕುಶಲಕರ್ಮಿಗಳಿಗೆ ನೆರವು ನೀಡುವ ಯೋಜಯೆಯಾಗಿದೆ. ವಿಶ್ವಕರ್ಮ ಜಯಂತಿ ಹಾಗೂ ಮೋದಿಯವರ ಹುಟ್ಟುಹಬ್ಬ ಎರಡು ಒಂದೇ ದಿನ ಆಚರಿಸುತ್ತಿರುವ ನಮ್ಮ‌ ಹೆಮ್ಮೆಯಾಗಿದೆ: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ 


ಹುಬ್ಬಳ್ಳಿ(ಸೆ.17):  ಪ್ರಧಾನಿ ನರೇಂದ್ರ ಅವರು ಮೋದಿ ವಿಶ್ವಮಾನ್ಯ ನಾಯಕ, ದೇಶದಲ್ಲಿ ಹೊಸ ಮನ್ವಂತರ ತಂದಿರುವ ನಾಯಕರಾಗಿದ್ದಾರೆ. ಭ್ರಷ್ಟಾಚಾರ ಮುಕ್ತ, ಆಡಳಿತ ಮೋದಿ ಸರ್ಕಾರ ದೊಡ್ಡ ಕೊಡುಗೆಯಾಗಿದೆ. ಭಾರತ ವಿಶ್ವದ 5 ನೇ ಅತಿ ದೊಡ್ಡ ಅರ್ಥಿಕ ಶಕ್ತಿಯಾಗಿ ಬೆಳೆದ್ದಿದ್ದು ಮೋದಿ ಅವರ‌ ನಾಯಕತ್ವದಲ್ಲಿ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ. 

ಇಂದು(ಭಾನುವಾರ) ನಗರದ ಹುಬ್ಬಳ್ಳಿಯ ರೈಲ್ವೆಯ ಚಾಣಕ್ಯ ಸಭಾಂಗಣದಲ್ಲಿ ನಡೆದ ಪಿಎಂ ವಿಶ್ವಕರ್ಮ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಸಚಿವ ರಾಜೀವ್ ಚಂದ್ರಶೇಖರ್ ಅವರು, ಮೊದಲಿಗೆ ವಿಶ್ವಕರ್ಮ ಜಯಂತಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನ ಕೋರಿದ್ದಾರೆ.  

Tap to resize

Latest Videos

ಸಿದ್ದು ಸರ್ಕಾರದ ಸ್ವಾವಲಂಬಿ ಸಾರಥಿ ಯೋಜನೆ ಬಣ್ಣ ಬಯಲು ಮಾಡಿದ ರಾಜೀವ್ ಚಂದ್ರಶೇಖರ್!

ಮೋದಿ ಸರ್ಕಾರ ವೃತ್ತಿ ಕೌಶಲ್ಯ ಹೊಂದಿದವರಿಗೆ ಸಾಕಷ್ಟು ಅವಕಾಶಗಳನ್ನ ಕಲ್ಪಸಿದೆ. ಪಿಎಂ ವಿಶ್ವಕರ್ಮ ಯೋಜನೆ ಸಂಪ್ರದಾಯಿಕ ಕುಶಲಕರ್ಮಿಗಳಿಗೆ ನೆರವು ನೀಡುವ ಯೋಜಯೆಯಾಗಿದೆ. ವಿಶ್ವಕರ್ಮ ಜಯಂತಿ ಹಾಗೂ ಮೋದಿಯವರ ಹುಟ್ಟುಹಬ್ಬ ಎರಡು ಒಂದೇ ದಿನ ಆಚರಿಸುತ್ತಿರುವ ನಮ್ಮ‌ ಹೆಮ್ಮೆಯಾಗಿದೆ ಎಂದು ಹೇಳಿದ್ದಾರೆ.

ಒಟ್ಟು 18 ಸಾಂಪ್ರದಾಯಿಕ ವೃತ್ತಿ ನಿರತ ಸಮುದಾಯ ಜನತೆಗೆ ಈ ಯೋಜನೆಯ ಲಾಭ ಸಿಗಲಿದೆ. ಕಮ್ಮಾರ, ಅಕ್ಕಸಾಲಿಗರು, ಮೇಸ್ತ್ರಿ, ಅಗಸರು, ಕುಂಬಾರ, ಹೂಮಾಲೆ ತಯಾರಕರು ಒಟ್ಟು18  ಸಮುದಾಯಗಳಿಗೆ ಯೋಜನೆಯ ಲಾಭ ಸಿಲಗಲಿದೆ ಎಂದು ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ಮಹೇಶ್ ಟೆಂಗಿನಕಾಯಿ, ಅರವಿಂದ್ ಬೆಲ್ಲದ ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು. 

click me!