ಬಂಟ ಸಮಾಜದವರು ಶಿಸ್ತಿನ ಸಂಕೇತ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

By Govindaraj S  |  First Published Jan 16, 2023, 9:06 PM IST

ಜಗತ್ತಿನ ಬಹುತೇಕ ಪ್ರದೇಶದಲ್ಲಿರುವ ಬಂಟ ಸಮುದಾಯದ ಜನರಿಂದ ಭಾರತೀಯ ಆಹಾರ ಪದ್ಧತಿ ಬೆಳೆದಿದೆ. ಬಂಟರು ಕೃಷಿ, ಸಂಘಟನೆ, ಸಾಮಾಜಿಕ ಸೇವೆ ಮೂಲಕ ಶಿಸ್ತಿನ ಸಂಕೇತವಾಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು


ಹುಬ್ಬಳ್ಳಿ (ಜ.16): ಜಗತ್ತಿನ ಬಹುತೇಕ ಪ್ರದೇಶದಲ್ಲಿರುವ ಬಂಟ ಸಮುದಾಯದ ಜನರಿಂದ ಭಾರತೀಯ ಆಹಾರ ಪದ್ಧತಿ ಬೆಳೆದಿದೆ. ಬಂಟರು ಕೃಷಿ, ಸಂಘಟನೆ, ಸಾಮಾಜಿಕ ಸೇವೆ ಮೂಲಕ ಶಿಸ್ತಿನ ಸಂಕೇತವಾಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಹುಬ್ಬಳ್ಳಿ-ಧಾರವಾಡ ಬಂಟರ ಸಂಘದ ವತಿಯಿಂದ ನಗರದ ಆರ್‌.ಎನ್‌. ಶೆಟ್ಟಿಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ನಿಮಿತ್ತ ಕೀರ್ತಿ ಶೇಷ ಬಿ. ಶೀನಪ್ಪ ಶೆಟ್ಟಿವೇದಿಕೆಯಲ್ಲಿ ಕಲ್ಯಾಣ ಮಂಟಪದ ಆವರಣದಲ್ಲಿ ನಡೆಯುತ್ತಿರುವ 3ನೇ ದಿನದ ಧಾರ್ಮಿಕ ಸಭೆ ಉದ್ಘಾಟಿಸಿ ಭಾನುವಾರ ಅವರು ಮಾತನಾಡಿದರು.

ಬಂಟರು ಸ್ವರ್ಗದಲ್ಲಿಯೂ ಹೋಟೆಲ್‌ ತೆರೆಯುವ ಸಾಮರ್ಥ್ಯ ಉಳ್ಳವರಾಗಿದ್ದಾರೆ. ಉತ್ತಮ ಸೇವೆ ನೀಡುವವರಿಗೆ ದೇಶ ಅಷ್ಟೆಅಲ್ಲದೆ ಇಡೀ ವಿಶ್ವದಲ್ಲಿ ಹೆಚ್ಚು ಅವಕಾಶ ಇದೆ. ಸಮಾಜದಲ್ಲಿ ಸಾಮಾಜಿಕ, ಧಾರ್ಮಿಕ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ. ಬಂಟರ ಸಹಭಾಗಿತ್ವ ಇಲ್ಲದೆ ಬಿಜೆಪಿ ಅಥವಾ ಸಂಘ ಪರಿವಾರದಲ್ಲಿ ಯಾವುದೇ ಕಾರ್ಯ ನಡೆಯಲ್ಲ ಎನ್ನುವ ಪರಿಸ್ಥಿತಿ ಇದೆ ಎಂದರು. ಸಚಿವ ವಿ. ಸುನೀಲಕುಮಾರ ಮಾತನಾಡಿ, ಬಂಟ ಸಮಾಜ ಹೋಟೆಲ್‌ ಉದ್ಯಮದಲ್ಲಿ ಅತ್ಯಂತ ಯಶಸ್ಸು ಕಂಡಿದೆ. ದೇವಸ್ಥಾನ, ಬಸ್‌, ಹೋಟೆಲ್‌ ನಿರ್ವಹಣೆಯಲ್ಲಿ ಪ್ರಾಬಲ್ಯ ಮೆರೆಯಲಾಗಿದೆ. ದ.ಕ. ಜನ ಮಾತ್ರ ಇಂತಹ ಕೆಲಸ ಮಾಡಲು ಸಾಧ್ಯ. ಹಾಗಾಗಿ, ದಕ್ಷಿಣ ಕನ್ನಡ ಬುದ್ಧಿವಂತರ ಜಿಲ್ಲೆ ಎಂದು ಖ್ಯಾತಿ ಗಳಿಸಿದೆ ಎಂದರು.

Latest Videos

undefined

ಕುಸ್ತಿ ಗ್ರಾಮೀಣ ಸೊಗಡನ್ನು ಪ್ರತಿಬಿಂಬಿಸುವ ಪ್ರಾಚೀನ ಕಲೆ: ಸಿ.ಟಿ.ರವಿ

ಎಂಜಿನಿಯರ್‌ ಬಿ. ಪ್ರೇಮಾನಂದ ಶೆಟ್ಟಿ ಧಾರ್ಮಿಕ ಉಪನ್ಯಾಸ ನೀಡಿದರು. ಪ್ರದೀಪ ಪಕ್ಕಳ ಸ್ವಾಗತಿಸಿದರು. ಮಂಗಳೂರಿನ ಗುರುಪುರದ ವಜ್ರದೇಹಿಮಠದ ರಾಜಶೇಖರಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಷ್ಟ್ರೀಯ ಕಬಡ್ಡಿ ತಂಡದ ಮಾಜಿ ನಾಯಕಿ ಮಮತಾ ಪೂಜಾರಿ, ಮಹಾನಗರ ಪಾಲಿಕೆ ಮೇಯರ್‌ ಈರೇಶ ಅಂಚಟಗೇರಿ, ಚಿಂತಕ ಡಾ. ಕೆ.ಪಿ. ಪುತ್ತೂರಾಯ, ಪಾಲಿಕೆ ಸದಸ್ಯ ವಿಜಯಾನಂದ ಶೆಟ್ಟಿ, ಬೆಂಗಳೂರಿನ ಎಂ.ಆರ್‌.ಜಿ. ಗ್ರೂಪ್‌ನ ಚೇರ್‌ಮನ್‌ ಕೆ. ಪ್ರಕಾಶ ಶೆಟ್ಟಿ, ಎಸ್‌ಎಸ್‌ಕೆ ಸಮಾಜದ ಹುಬ್ಬಳ್ಳಿ-ಧಾರವಾಡದ ಅಧ್ಯಕ್ಷ ಸತೀಶ ಮೆಹರವಾಡೆ, ಸಂಘದ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ, ಉಪಾಧ್ಯಕ್ಷ ಬಿ. ಶಾಂತಾರಾಮ ಶೆಟ್ಟಿ, ಪ್ರಮುಖರಾದ ವಿಠ್ಠಲ ಹೆಗಡೆ, ಅಶೋಕಕುಮಾರ ಶೆಟ್ಟಿ, ಭುಜಂಗ ಶೆಟ್ಟಿ, ಎನ್‌.ಡಿ. ಶೆಟ್ಟಿ, ಸುಜನ್‌ ಕೆ. ಶೆಟ್ಟಿ, ಅಣ್ಣಪ್ಪ ಶೆಟ್ಟಿಮತ್ತಿತರರು ಉಪಸ್ಥಿತರಿದ್ದರು.

ಬಿಜೆಪಿ ಸರ್ಕಾರವಿದ್ದರೂ ಅಭಿವೃದ್ಧಿಗೆ ಶಾಸಕನಾಗಿ ದುಡಿದಿದ್ದೇನೆ: ಟಿ.ಡಿ.ರಾಜೇಗೌಡ

ಉಚಿತ ವಿದ್ಯುತ್ತಿಗೆ 23000 ಕೋಟಿ ಬೇಕು: ಕಾಂಗ್ರೆಸ್‌ ಬೇಜವಾಬ್ದಾರಿ ಪಕ್ಷ. ಸುಳ್ಳು ಹೇಳೋದು ಅವರ ಸ್ವಭಾವ. ಕಾಂಗ್ರೆಸ್‌ನವರು ಯಾವಾಗಲೂ ಅಸಾಧ್ಯವಾಗುವುದನ್ನೇ ಹೇಳುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಕ್ಕೆ ಬಂದರೆ 200 ಯುನಿಟ್‌ ಉಚಿತ ವಿದ್ಯುತ್‌ ನೀಡುತ್ತೇವೆಂಬ ಕಾಂಗ್ರೆಸ್‌ ಹೇಳಿಕೆಗೆ ಪ್ರತಿಕ್ರಿಯಿಸಿ, ನನ್ನ ಮಾಹಿತಿ ಪ್ರಕಾರ ಪ್ರತಿ ವರ್ಷಕ್ಕೆ ಉಚಿತ ವಿದ್ಯುತ್‌ ನೀಡಿದರೆ .23 ಸಾವಿರ ಕೋಟಿ ಬೇಕಾಗುತ್ತದೆ. ಜನ ಬಯಸುವುದು ಗುಣಮಟ್ಟದ ವಿದ್ಯುತ್ತನ್ನೇ ಹೊರತು, ಉಚಿತ ವಿದ್ಯುತ್‌ ಅಲ್ಲ ಎಂದರು.

click me!