'ಮೋದಿ ಸರ್ಕಾರ 30 ಕ್ಕೂ ಹೆಚ್ಚು ಬೆಳೆಗಳಿಗೆ ಬೆಂಬಲ ಬೆಲೆ ನೀಡಲು ನಿರ್ಧರಿಸಿದೆ'

By Suvarna NewsFirst Published Jan 18, 2020, 3:01 PM IST
Highlights

ಕೃಷಿ ಮೇಳ ಉದ್ಘಾಟಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ| ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಮೂರು ದಿನಗಳ ಕೃಷಿ ಮೇಳ| ಗ್ರಾಮೀಣಾಭಿವೃದ್ಧಿಗೆ ಭಾರತ ಸರ್ಕಾರ ಶೇ.400 ರಷ್ಟು ಹಣ ತೆಗೆದಿಟ್ಟಿದೆ|

ಧಾರವಾಡ(ಜ.18): ಒಂದು ಕುಟುಂಬದಲ್ಲಿ ಒಬ್ಬ ವ್ಯಕ್ತಿ ಮಾತ್ರ ಕೃಷಿಯಲ್ಲಿ ಇರಬೇಕು ಉಳಿದವರು ಬೇರೆ ಬೇರೆ ಕೆಲಸ ಮಾಡಬೇಕು ಎನ್ನುವ ದೃಷ್ಟಿಯಿಂದ ಕೆಲಸ ಮಾಡಲಾಗುತ್ತಿದೆ. ಗ್ರಾಮೀಣಾಭಿವೃದ್ಧಿಗೆ ಶೇ.400 ರಷ್ಟು ಹಣವನ್ನು ಭಾರತ ಸರ್ಕಾರ ತೆಗೆದಿಟ್ಟಿದೆ. ಸ್ವಾಮಿನಾಥನ್ ವರದಿಯನ್ನು ಹಂತ ಹಂತವಾಗಿ ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ . ಈ ನಿಟ್ಟಿನಲ್ಲಿ 30 ಕ್ಕೂ ಹೆಚ್ಚು ಬೆಳೆಗಳಿಗೆ ಬೆಂಬಲ ಬೆಲೆ ಕೊಡಲು ನಿರ್ಧಾರ ಮಾಡಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ. 

ಶನಿವಾರ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜನೆಯಾಗಿದ್ದ ಮೂರು ದಿನಗಳ ಕೃಷಿ ಮೇಳವನ್ನು ಸಚಿವ ಪ್ರಹ್ಲಾದ ಜೋಶಿ ಉದ್ಘಾಟಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಳಿಕ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು, ಹನ್ನೆರಡು ಸಾವಿರ ಕೋಟಿ ಹಣವನ್ನು ಜಾನುವಾರುಗಳಿಗೆ ಬರುವ ಕಾಲು ಬೇನೆ ರೋಗವನ್ನು ನಿಯಂತ್ರಣ ಮಾಡಲು ತೆಗೆದಿಡಲಾಗಿದೆ. ಈ ಹಿಂದೆ ದೇಶದಲ್ಲಿ ಯೂರಿಯಾ ಗೊಬ್ಬರವನ್ನು ಸ್ಮಗ್ಲಿಂಗ್ ಮಾಡಿ ಬಾಂಗ್ಲಾದೇಶಕ್ಕೆ ಹೋಗುತ್ತಿತ್ತು. ಇದರಿಂದ 80 ಸಾವಿರ ಕೋಟಿ ಉಳಿತಾಯವಾಗಿದೆ ಎಂದು ಹೇಳಿದ್ದಾರೆ. ದೇಶದಲ್ಲಿ ಆಧಾರ ಕಾರ್ಡ್ ಮಾಡಿದಾಗಿನಿಂದ ಒಂದು ಲಕ್ಷ 25 ಸಾವಿರ ಕೋಟಿ ರು. ಹಣ ಮಧ್ಯವರ್ತಿಗಳಿಗೆ ಹೋಗುವುದು ತಪ್ಪಿದೆ ಎಂದು ಹೇಳಿದ್ದಾರೆ. 
 

click me!