ಜಾತ್ರೆಯ ಘಟನೆ ಬಗ್ಗೆ ನಾಡಿನ ಜನ, ಮಠಾಧೀಶರು ವಿಷಾದ ವ್ಯಕ್ತಪಡಿಸಿದ್ದಾರೆ| ಇಂಥವರಿಗೇ ಸಚಿವ ಸ್ಥಾನ ನೀಡಬೇಕು ಎಂದು ಸ್ವಾಮೀಜಿಗಳು ಹೇಳಿದ್ದು ತಪ್ಪು| ಮುರುಗೇಶ್ ನೀರಾಣಿ ಕ್ಷಮೆ ಕೇಳಿದ್ದು ಸರಿಯಾಗಿಯೇ ಇದೆ| ತಪ್ಪು ಮಾಡಿದವರು ಕ್ಷಮೆ ಕೇಳುವುದು ಧರ್ಮ ಎಂದ ಯತ್ನಾಳ|
ಯಾದಗಿರಿ(ಜ.18): ವಚನಾನಂದ ಶ್ರೀಗಳು ತಮ್ಮ ಕಾರ್ಯವೈಖರಿ ಬದಲಾಯಿಸಿಕೊಳ್ಳಬೇಕು ಇಲ್ಲದಿದ್ರೆ ಎರಡ್ಮೂರು ತಿಂಗಳಲ್ಲಿ ಇದರ ಪರಿಣಾಮ ಅನುಭವಿಸಬೇಕಾಗುತ್ತದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.
ಶನಿವಾರ ಜಿಲ್ಲೆಯ ಸುರಪುರದಲ್ಲಿ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಜಾತ್ರೆಯ ಘಟನೆ ಬಗ್ಗೆ ನಾಡಿನ ಜನ, ಮಠಾಧೀಶರು ವಿಷಾದ ವ್ಯಕ್ತಪಡಿಸಿದ್ದಾರೆ. ಇಂಥವರಿಗೇ ಸಚಿವ ಸ್ಥಾನ ನೀಡಬೇಕು ಎಂದು ಸ್ವಾಮೀಜಿಗಳು ಹೇಳಿದ್ದು ತಪ್ಪು, ಬಾಗಲಕೋಟೆ ಜಿಲ್ಲೆಯ ಬೀಳಗಿ ಕ್ಷೇತ್ರದ ಶಾಸಕ ಮುರುಗೇಶ್ ನೀರಾಣಿ ಕ್ಷಮೆ ಕೇಳಿದ್ದು ಸರಿಯಾಗಿಯೇ ಇದೆ. ತಪ್ಪು ಮಾಡಿದವರು ಕ್ಷಮೆ ಕೇಳುವುದು ಧರ್ಮ ಎಂದು ಹೇಳಿದ್ದಾರೆ.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸ್ವಾಮೀಜಿಗಳು ಬಡವರ ಪರವಾಗಿ ಮಾತಾಡಲಿ, ಯಾರಿಗೂ ಸಮಾಜವನ್ನ ನೀಡಿಲ್ಲ, ಘಟನೆ ಬಗ್ಗೆ ಯಾರೇ ಸಮರ್ಥನೆ ನೀಡಿದರೂ ಸಮಾಜ ಇಂಥದ್ದನ್ನ ಒಪ್ಪುವುದಿಲ್ಲ ಎಂದು ವಚನಾನಂದ ಶ್ರೀಗಳು ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.
ಈಗಿನ ಕಾಂಗ್ರೆಸ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಲ್ಲ, ಪಾಕಿಸ್ತಾನ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವಾಗಿದೆ.ದೇಶ ವಿರೋಧಿ ಚಟುವಟಿಕೆಯಲ್ಲಿರುವ ಸಂಘಟನೆಗಳನ್ನ ನಿಷೇಧಿಸಬೇಕು. ಇಂಥ ನಡೆಸುವ ಸಂಘಟನೆಗಳ ಮೇಲೆ ಗುಪ್ತಚರ ಇಲಾಖೆ ನಿಗಾ ಇಡಬೇಕು. ದೇಶ ವಿರೋಧಿ ಸಂಘಟನೆಗಳಿಗೆ ಬೆಂಬಲಿಸುವ ರಾಜಕಾರಣಿಗಳ ಚಲನವಲನಗಳ ಮೇಲೂ ಕಣ್ಣಿಡಬೇಕು. ಇಂಥವರಿಗೆ ದೇಶ ಬೇಕಿಲ್ಲ ವೋಟ್ ಬ್ಯಾಂಕ್‌ಗಾಗಿ ದೇಶ ಮಾರಾಟವಾದ್ರೂ ಅವರಿಗೆ ಚಿಂತೆ ಇಲ್ಲ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಎಸ್‌ಡಿಪಿಐ ಸಂಘಟನೆ ಬೆಂಬಲಿಸಿ ಮಾತನಾಡಿದ ನಾಯಕರಿಗೆ ಟಾಂಗ್ ಕೊಟ್ಟ ಯತ್ನಾಳ್ ಅವರು, ಎಸ್‌ಡಿಪಿಐ ಸಂಘಟನೆ ಪಾಕಿಸ್ತಾನದ ಪರವಾಗಿ ಕೆಲಸ ಮಾಡುತ್ತದೆ. ಐಎಸ್‌ಐ ಜೊತೆಗೆ ಎಸ್‌ಡಿಪಿಐ ಸಂಘನೆ ಸಂಪರ್ಕದಲ್ಲಿದೆ. ಎಲ್ಲ ಕಡೆ ಕೋಮು ಗಲಭೆ ಎಬ್ಬಿಸುವ ಕೆಲಸ ಮಾಡುತ್ತಿವೆ. ಸೂಲಿಬೆಲೆ, ಸಂಸದ ತೇಜಸ್ವಿ ಸೂರ್ಯ ಕೊಲೆ ಸಂಚು ಪ್ರಕರಣ ಇದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.