2025ರ ಜ. 8 ರಂದು ನವದೆಹಲಿಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಸುಮಾರು 223 ಕೋಟಿ ರೂ. ಮೊತ್ತದ ಅತ್ಯವಶ್ಯಕವಾಗಿರುವ ಈ ಎರಡೂ ಕಾಮಗಾರಿಗಳ ಮಹತ್ವ ವಿವರಿಸಿ, ಸಚಿವರಿಂದ ಒಪ್ಪಿಗೆ ಕೊಡಿಸಿದ್ದೇನೆ ಎಂದು ತಿಳಿಸಿದ ಮಾಜಿ ಸಂಸದ ಪ್ರತಾಪ ಸಿಂಹ
ಮೈಸೂರು(ಜ.09): ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಪಂಚಮುಖಿ ಗಣೇಶ ದೇವಾಲಯ ಬಳಿ ರಸ್ತೆ ವಿಸ್ತ್ರತೀಕರಣ ಮತ್ತು ರೆಸ್ಟ್ ಏರಿಯಾ ನಿರ್ಮಾಣದ 223 ಕೋಟಿ ರೂ. ಮೊತ್ತದ ಕಾಮಗಾರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಂದ ಮಾಜಿ ಸಂಸದ ಪ್ರತಾಪ ಸಿಂಹ ಪಡೆದಿದ್ದಾರೆ.
ಅನುಮೋದನೆ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಕೆಲವು ಕಡೆ ಸೂಕ್ತವಾದ ಪ್ರವೇಶ ಮತ್ತು ನಿರ್ಗಮನದ ಕಾಮಗಾರಿ ಹಾಗೂ ಇತರೆ ಕಾಮಗಾರಿ ಕೈಗೊಳ್ಳದಿದ್ದರೂ, ರಸ್ತೆ ಉದ್ಘಾಟನೆಗೆ ರಾಜಕಾರಣಿ ಅಡೆ-ತಡೆ ಹೆಚ್ಚಿದ್ದರಿಂದ ಮೊದಲು ರಸ್ತೆಯನ್ನು ಉದ್ಘಾಟಿಸಿ, ಆದಷ್ಟು ಬೇಗ ಸಾರ್ವಜನಿಕರ ಉಪಯೋಗಕ್ಕೆ ನೀಡುವ ಸಲುವಾಗಿ ಈ ರಸ್ತೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಂದ 2023ರ ಮಾ. 11 ರಂದು ಮಂಡ್ಯ ಜಿಲ್ಲೆಯ ಗೆಜ್ಜಲಗೆರೆಯಲ್ಲಿ ಸಾರ್ವಜನಿಕರ ಕಾರ್ಯಕ್ರಮದ ಮೂಲಕ ತರಾತುರಿಯಲ್ಲಿ ಉದ್ಘಾಟಿಸಲಾಯಿತು.
Mysuru: ಕೆಆರ್ ನಗರದಲ್ಲಿ ರೈಲ್ವೆ ರಕ್ಷಣಾ ಪಡೆ ತರಬೇತಿ ಕೇಂದ್ರ, ಎಚ್‌ಡಿಕೆ ಮನವಿಗೆ ರೈಲ್ವೆ ಸಚಿವ ಅಸ್ತು!
ನಂತರ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯುದ್ದಕ್ಕೂ ಸೂಕ್ತವಾದ ಪ್ರವೇಶಾತಿ ಹಾಗೂ ನಿರ್ಗಮನದ ಕಾಮಗಾರಿಗಳು, ಕೆಲವೆಡೆ ಕೆಳ ಸೇತುವೆಗಳು ಮತ್ತು ಫೂಟ್ ಓವರ್‌ಬ್ರಿಡ್ಜ್ ನಿರ್ಮಾಣ ಸೇರಿದಂತೆ 1251 ಕೋಟಿ ರೂ. ಮೊತ್ತದ ಹೆಚ್ಚುವರಿ ಕಾಮಗಾರಿಗಳಿಗೆ ಒಪಿಗೆ ಕೋರಿ ನಾನು ಸಂಸದನಾಗಿದ್ದಾಗಲೇ ಯೋಜನೆ ಪಟ್ಟಿಯನ್ನು ಕೇಂದ್ರಕ್ಕೆ ಕಳುಹಿಸಿದ್ದೆವು. ನಿತಿನ್ ಗಡ್ಕರಿ ಅವರು ಮೈಸೂರು & ಬೆಂಗಳೂರು ದಶಪಥ ಹೆದ್ದಾರಿ ಕಾಮಗಾರಿಯ ವಿಕ್ಷಣೆಗೆ ಬಂದಾಗ ಮತ್ತು 2024 ಮಾರ್ಚ್ ನಲ್ಲಿ ಈ ಮೊತ್ತದ ಹೆಚ್ಚುವರಿ ಕಾಮಗಾರಿ ಕೈಗೊಳ್ಳಲು ಅನುಮೋದನೆ ನೀಡಬೇಕೆಂದು ತಮ್ಮ ಕಾರ್ಯದರ್ಶಿಗಳಿಗೆ ಸೂಚಿಸಿಲಾಗಿತ್ತು. ಬಳಿಕ ನನಗೆ ಟೆಕೆಟ್ ಕೈತಪ್ಪಿದ್ದರಿಂದ, ಫಾಲೋ ಅಪ್ ಮಾಡಲು ಸಾಧ್ಯವಾಗಿರಲಿಲ್ಲ.
ಪ್ರಸ್ತುತ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಕೈಗೊಳ್ಳಬೇಕಾದ ಈ ಪ್ರಸ್ತಾವನೆಯ 1251 ಕೋಟಿ ರೂ.ಗಳ ಹೆಚ್ಚುವರಿ ಕಾಮಗಾರಿಯಲ್ಲಿ ಬಹುಮುಖ್ಯವಾದ ಪಂಚಮುಖಿ ಗಣೇಶ ದೇವಾಲಯ ಬಳಿ ರಸ್ತೆ ವಿಸ್ತ್ರತೀಕರಣ ಮತ್ತು ರೆಸ್ಟ್ ಏರಿಯಾ ಯೋಜನೆಗಳನ್ನು ಕೈಬಿಟ್ಟು ಯೋಜನಾ ವೆಚ್ಚವನ್ನು 711 ಕೋಟಿ ರೂ.ಗೆ ಇಳಿಸಿ ಕಳೆದ 2023ರ ಡಿಸೆಂಬರ್‌ನಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಅಂಗೀಕಾರ ನೀಡಿತ್ತು. 2025ರ ಜ. 8 ರಂದು ನವದೆಹಲಿಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಸುಮಾರು 223 ಕೋಟಿ ರೂ. ಮೊತ್ತದ ಅತ್ಯವಶ್ಯಕವಾಗಿರುವ ಈ ಎರಡೂ ಕಾಮಗಾರಿಗಳ ಮಹತ್ವ ವಿವರಿಸಿ, ಸಚಿವರಿಂದ ಒಪ್ಪಿಗೆ ಕೊಡಿಸಿದ್ದೇನೆ ಎಂದು ಪ್ರತಾಪ ಸಿಂಹ ತಿಳಿಸಿದ್ದಾರೆ.