ನರೇಂದ್ರ ಮೋದಿಯಂಥ ಕೆಲಸ ಮಾಡುವವರನ್ನು ನೋಡಿಯೇ ಇಲ್ಲ: ಕೇಂದ್ರ ಸಚಿವ ಜೈಶಂಕರ

By Kannadaprabha News  |  First Published Feb 29, 2024, 1:27 PM IST

ಮೋದಿ ಅವರ ಕಾರ್ಯವೈಖರಿ ಬಗ್ಗೆ ಹೇಳಬೇಕೆಂದರೆ ಸಮಯವೇ ಸಾಕಾಗುವುದಿಲ್ಲ. ನಾನು 40 ವರ್ಷಗಳ ಕಾಲ ವಿದೇಶಾಂಗ ಸಚಿವಾಲಯದ ಕಾರ್ಯನಿರ್ವಹಿಸಿದ್ದೇನೆ. ಇದೀಗ ಸಚಿವನಾಗಿದ್ದೇನೆ. ಆದರೆ ಇಷ್ಟೊಂದು ಕೆಲಸ ಮಾಡುವ ಮತ್ತೊಬ್ಬ ವ್ಯಕ್ತಿಯನ್ನು ನಾನು ನೋಡಿಯೇ ಇಲ್ಲ ಎಂದರು. ಬೇರೆ ಬೇರೆ ದೇಶಗಳಿಗೆ ಪ್ರಯಾಣ ಮಾಡುವಾಗ ವಿಮಾನದಲ್ಲೇ ಹಗಲು ರಾತ್ರಿ ಎನ್ನದೇ ಕೆಲಸ ಮಾಡಿದ್ದನ್ನು ಕಂಡಿದ್ದೇನೆ ಎಂದು ನುಡಿದ ವಿದೇಶಾಂಗ ಸಚಿವ ಜೈಶಂಕರ 


ಹುಬ್ಬಳ್ಳಿ(ಫೆ.29):  ಪ್ರಧಾನಿ ನರೇಂದ್ರ ಮೋದಿ ಅವರಂತೆ ಕೆಲಸ ಮಾಡುವ ವ್ಯಕ್ತಿಯನ್ನು ನಾನು ನೋಡಿಯೇ ಇಲ್ಲ. ಅವರ ಕಾರ್ಯವೈಖರಿ ಬಗ್ಗೆ ಹೇಳಲು ಶುರು ಮಾಡಿದರೆ ಸಮಯವೇ ..! ಇದು ಇಲ್ಲಿನ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಬುಧವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆದ ವೇಳೆ ವಿದೇಶಾಂಗ ಸಚಿವ ಜೈಶಂಕರ ಹೇಳಿದ ಮಾತು. ಸಂವಾದದಲ್ಲಿ ವಿದ್ಯಾರ್ಥಿನಿಯೊಬ್ಬಳು ಪ್ರಧಾನಿ ಮೋದಿ ಅವರ ಕಾರ್ಯವೈಖರಿ ಬಗ್ಗೆ ಪ್ರಶ್ನೆ ಕೇಳಿದಳು. ಇದಕ್ಕೆ ನಿಮಗೆ ಕೇಳಲು ಎಷ್ಟು ಸಮಯವಿದೆ ಎಂದು ನಗುತ್ತಲೇ ತಮ್ಮ ಮಾತನ್ನು ಆರಂಭಿಸಿದರು.

ಅವರ ಕಾರ್ಯವೈಖರಿ ಬಗ್ಗೆ ಹೇಳಬೇಕೆಂದರೆ ಸಮಯವೇ ಸಾಕಾಗುವುದಿಲ್ಲ. ನಾನು 40 ವರ್ಷಗಳ ಕಾಲ ವಿದೇಶಾಂಗ ಸಚಿವಾಲಯದ ಕಾರ್ಯನಿರ್ವಹಿಸಿದ್ದೇನೆ. ಇದೀಗ ಸಚಿವನಾಗಿದ್ದೇನೆ. ಆದರೆ ಇಷ್ಟೊಂದು ಕೆಲಸ ಮಾಡುವ ಮತ್ತೊಬ್ಬ ವ್ಯಕ್ತಿಯನ್ನು ನಾನು ನೋಡಿಯೇ ಇಲ್ಲ ಎಂದರು. ಬೇರೆ ಬೇರೆ ದೇಶಗಳಿಗೆ ಪ್ರಯಾಣ ಮಾಡುವಾಗ ವಿಮಾನದಲ್ಲೇ ಹಗಲು ರಾತ್ರಿ ಎನ್ನದೇ ಕೆಲಸ ಮಾಡಿದ್ದನ್ನು ಕಂಡಿದ್ದೇನೆ ಎಂದು ನುಡಿದರು.

Tap to resize

Latest Videos

ಸಾವಿನ ಕುಣಿಕೆಯಿಂದ 8 ಮಂದಿ ಪಾರಾಗಿದ್ದು ಹೇಗೆ, ಮೋದಿ-ಧೋವಲ್‌-ಜೈಶಂಕರ್‌ ರೆಡಿ ಮಾಡಿದ್ರು ಪ್ಲ್ಯಾನ್‌ A & B!

ಉಕ್ರೇನ್‌ನಲ್ಲಿ ಭಾರತೀಯರು ಸಿಲುಕಿದ ವೇಳೆ ದೇಶದ ಕೆಲ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆದಿತ್ತು. ಆಗಲೂ ದಿನವಿಡೀ ಪ್ರಚಾರಗಳಲ್ಲಿ ತೊಡಗುತ್ತಿದ್ದ ಮೋದಿ, ರಾತ್ರಿ ಯಾವುದೇ ಸಮಯಕ್ಕೂ ಬಂದರೂ ಅಧಿಕಾರಿಗಳ ಸಭೆ ನಡೆಸಿ ಆಪರೇಷನ್ ಗಂಗಾ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದರು ಎಂದು ನುಡಿದರು.

ಮತ್ತೊಬ್ಬ ವಿದ್ಯಾರ್ಥಿನಿಯೊಬ್ಬಳು ದೇಶದ ಬಡತನದ ಸೂಚ್ಯಂಕ ಪಾಕಿಸ್ತಾನ. ಬಾಂಗ್ಲಾದೇಶಗಳಿಂದ ಕಡಿಮೆ ಇದೆಯಲ್ಲ ಎಂದು ಪ್ರಶ್ನಿಸಿದಳು. ಇದಕ್ಕೆ ಉತ್ತರಿಸಿದ ಅವರು, ಅಧ್ಯಯನ ವರದಿಗಳನ್ನು ಲೆಕ್ಕಾಚಾರ ಒಮ್ಮೊಮ್ಮೆ ಗೊತ್ತಾಗುವುದಿಲ್ಲ. ಇನ್ನೊಂದು ವರದಿಯಲ್ಲಿ ಪಾಕಿಸ್ತಾನದಲ್ಲಿನ ಪ್ರೆಸ್ ಫ್ರೀಡಂಗಿಂತ ಭಾರತದ ಫ್ರೀಡಂ ಕಡಿಮೆ ಎಂದು ಹೇಳಿತ್ತು. ಇದನ್ನು ನಾವು ನಂಬಲು ಸಾಧ್ಯವಾ? ಎಂದು ಉತ್ತರಿಸಿದರಿ. ಅಲ್ಲದೇ, ದೇಶದಲ್ಲಿ ಆಹಾರ ಉತ್ಪಾದನೆ ದೊಡ್ಡ ಪ್ರಮಾಣದಲ್ಲಿ ಆಗುತ್ತಿದೆ. ನಾವೇ ಬೇರೆ ಬೇರೆ ದೇಶಗಳಿಗೆ ಆಹಾರ ರಫ್ತು ಮಾಡುತ್ತಿದ್ದೇವೆ. ಹೀಗಿದ್ದರೂ ನೆರೆ ಹೊರೆ ದೇಶದಲ್ಲಿನ ಬಡತನ ರೇಖೆಗಿಂತ ಭಾರತ ಅದ್ದೇಗೆ ಬಡತನದ ರೇಖೆಯಲ್ಲಿ ಕೆಳಗಿರಲು ಸಾಧ್ಯ ಪ್ರಶ್ನಿಸಿದರು. ಅಧಿಕಾರಿಯಾಗಿ ರಾಜಕಾರಣಕ್ಕೆ ಹೇಗೆ ಒಗ್ಗಿಕೊಂಡಿದ್ದೀರಿ ಸೇರಿದಂತೆ ಇನ್ನೂ ಅನೇಕ ಪ್ರಶ್ನೆಗಳಿಗೆ ಸಚಿವ ಜೈಶಂಕರ ಉತ್ತರಿಸಿದರು.

click me!