ನಾಡಿನ ಮುಖ್ಯಮಂತ್ರಿಗಳು ಜಲ ಪ್ರೇಮದಲ್ಲಿ ಹಿಂದಿನಿಂದಲೂ ಇಬ್ಬಗೆಯ ನೀತಿ ಅನುಸರಿಸುತ್ತಲ್ಲಿದ್ದಾರೆಂಬ ಭಾವ ವ್ಯಕ್ತವಾಗುತ್ತಲ್ಲಿದೆ. ಅತ್ತ ಒಲವು ಇತ್ತ ನಿರ್ಲಕ್ಷ್ಯದ ಭಾವ ನಮ್ಮ ಸಿಎಂಗಳಲ್ಲಿ ಏಕೆ ಮೂಡುತ್ತವೆ ಎಂದು ಬೇಸರ ವ್ಯಕ್ತಪಡಿಸಿದ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ
ಆಲಮಟ್ಟಿ(ಆ.08): ಮುಂಗಾರಿನ ಋುತುವಿನಲ್ಲಿ ಜಲಾಶಯಗಳು ಮೈದುಂಬಿದಾಗ ಜನನಿಧಿಗೆ ಬಾಗಿನ ಅರ್ಪಿಸುವ ಸಂಪ್ರದಾಯ. ಕೆಆರ್‌ಎಸ್ ಬಗ್ಗೆ ಮುಖ್ಯಮಂತ್ರಿ ಹೊಂದಿರುವ ಅಪಾರ ಪ್ರೀತಿಯುಳ್ಳ ಒಲವು ಇತ್ತ ಉತ್ತರ ಕರ್ನಾಟಕ ಜನತೆಯ ಜೀವನಾಡಿ ಕೃಷ್ಣೆಯ ಬಗ್ಗೆ ತೋರದಿರುವುದೇ ದುರದೃಷ್ಟಕರ. ಬಾಗಿನ ಸಲ್ಲಿಕೆ ವಿಷಯ ಕುರಿತು ಇಬ್ಬಗೆಯ ನೀತಿ ಅನುಸರಿಸುತ್ತಲ್ಲಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಇದು ವಿಷಾದನೀಯ ಎಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ದೂರಿದರು.
ನಾಡಿನ ಮುಖ್ಯಮಂತ್ರಿಗಳು ಜಲ ಪ್ರೇಮದಲ್ಲಿ ಹಿಂದಿನಿಂದಲೂ ಇಬ್ಬಗೆಯ ನೀತಿ ಅನುಸರಿಸುತ್ತಲ್ಲಿದ್ದಾರೆಂಬ ಭಾವ ವ್ಯಕ್ತವಾಗುತ್ತಲ್ಲಿದೆ. ಅತ್ತ ಒಲವು ಇತ್ತ ನಿರ್ಲಕ್ಷ್ಯದ ಭಾವ ನಮ್ಮ ಸಿಎಂಗಳಲ್ಲಿ ಏಕೆ ಮೂಡುತ್ತವೆ ಎಂದು ಬೇಸರ ವ್ಯಕ್ತಪಡಿಸಿದರು.
ಆಲಮಟ್ಟಿ ಡ್ಯಾಂ ಭರ್ತಿಗೆ ಒಂದೇ ದಿನ ಬಾಕಿ: ಸಿಎಂ ಬಾಗಿನ ಅರ್ಪಿಸುವ ಸಾಧ್ಯತೆ!
ಈ ಬಾರಿ ಮುಂಗಾರು ಹಂಗಾಮಿನ ಮಳೆ ಜಿಲ್ಲೆಯಲ್ಲಿ ಸಮರ್ಪಕವಾಗಿ ಆಗದಿದ್ದರೂ ಮಹಾರಾಷ್ಟ್ರ ವ್ಯಾಪ್ತಿಯಲ್ಲಿ ತಡವಾಗಿ ಮಳೆ ಪ್ರಾರಂಭವಾಗಿ ಕೊಯ್ನಾ ಜಲಾಶಯದಿಂದ ಕ್ರಮೇಣವಾಗಿ ನೀರು ಹರಿದು ಬಂದ ಪರಿಣಾಮ ಆಲಮಟ್ಟಿಯ ಲಾಲ್ ಬಹಾದ್ದೂರ್ ಶಾಸ್ತ್ರೀ ಜಲಾಶಯ ಬಹುತೇಕ ಭರ್ತಿಯ ಹಂತದಲ್ಲಿದೆ. ಡ್ಯಾಂ 123.081 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದಲ್ಲಿ ಒಂದೇ ಟಿಎಂಸಿ ಬಾಕಿ ಇದೆ. ಹೀಗಿದ್ದರೂ ರಾಜ್ಯದ ಮುಖ್ಯಮಂತ್ರಿ ಇನ್ನೂ ಕೃಷ್ಣೆಗೆ ಬಾಗಿನ ಅರ್ಪಿಸಲು ಮನಸ್ಸು ಮಾಡುತ್ತಿಲ್ಲ ಎಂದು ದೂರಿದರು.