ಚಿಕ್ಕಮಗಳೂರು ಎಸ್‌ಪಿಯಿಂದ ಹೊಸ ಪ್ರಯತ್ನ: ಜನರ ಸಮಸ್ಯೆ ಕೇಳಲು ಫೋನ್ ಇನ್ ಕಾರ್ಯಕ್ರಮ

By Girish Goudar  |  First Published Aug 8, 2023, 8:53 PM IST

ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳ ಫೋನ್ ಇನ್ ಕಾರ್ಯಕ್ರಮದಲ್ಲಿ ಹೆಚ್ಚಿನ ದೂರುಗಳು ನಗರದ ಟ್ರಾಫಿಕ್ ನಿಯಂತ್ರಣ ಹಾಗೂ ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಬಂದವು. ಜೊತೆಗೆ ಜಿಲ್ಲೆಯಲ್ಲಿ ನಡೆಯುವ ಮನೆಗಳ್ಳತನ ಬಗ್ಗೆಯೂ ಹೆಚ್ಚಿನ ದೂರುಗಳು ಕೇಳಿಬಂತು. 16ಕ್ಕೂ ಹೆಚ್ಚು ಮಂದಿ ಸಂವಾದದಲ್ಲಿ ಪಾಲ್ಗೊಂಡು ಸಮಸ್ಯೆಗಳನ್ನು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳ ಗಮನಕ್ಕೆ ತಂದರು. 
 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಆ.08):  ಚಿಕ್ಕಮಗಳೂರು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೊಸ ಪ್ರಯತ್ನವನ್ನು ಆರಂಭಿಸಿದ್ದಾರೆ. ಜನರ ಸಮಸ್ಯೆಯನ್ನು ಕೇಳಲು ವಾರದಲ್ಲಿ ಒಂದು ದಿನ ಫೋನ್ ಇನ್ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ. ಪ್ರತಿ ಮಂಗಳವಾರ ಒಂದು ಗಂಟೆಗಳ ಕಾಲ ಜನರ ದೂರುಗಳು ಹಾಗೂ ಪೊಲೀಸ್ ಕ್ರಮದ ಬಗ್ಗೆ ಸಂವಾದ ನಡೆಸುತ್ತಿದ್ದಾರೆ. ಇಂದು(ಮಂಗಳವಾರ) ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ದೂರಿನ ಸುರಿಮಳೆಯೇ ಹರಿದುಬಂದಿದೆ. 

Tap to resize

Latest Videos

undefined

ಪಾರ್ಕಿಂಗ್ ವ್ಯವಸ್ಥೆಯ ಬಗ್ಗೆ ಹೆಚ್ಚಿನ ದೂರು : 

ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳ ಫೋನ್ ಇನ್ ಕಾರ್ಯಕ್ರಮದಲ್ಲಿ ಹೆಚ್ಚಿನ ದೂರುಗಳು ನಗರದ ಟ್ರಾಫಿಕ್ ನಿಯಂತ್ರಣ ಹಾಗೂ ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಬಂದವು. ಜೊತೆಗೆ ಜಿಲ್ಲೆಯಲ್ಲಿ ನಡೆಯುವ ಮನೆಗಳ್ಳತನ ಬಗ್ಗೆಯೂ ಹೆಚ್ಚಿನ ದೂರುಗಳು ಕೇಳಿಬಂತು. 16ಕ್ಕೂ ಹೆಚ್ಚು ಮಂದಿ ಸಂವಾದದಲ್ಲಿ ಪಾಲ್ಗೊಂಡು ಸಮಸ್ಯೆಗಳನ್ನು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳ ಗಮನಕ್ಕೆ ತಂದರು. ಈ ಸಂವಾದದಲ್ಲಿ ಮೊದಲು ದೂರು ಲಕ್ಕವಳ್ಳಿಯ ದೇವರಾಜು ಅವರದಾಗಿದ್ದು,  ಮನೆಗಳ್ಳತನದ ಬಗ್ಗೆ ಪೊಲೀಸರು ಗಮನಹರಿಸುತ್ತಿಲ್ಲ ತಕ್ಷಣ ಅವರು ಈ ಕುರಿತು ಗಮನಹರಿಸಬೇಕೆಂದು ಮಾಡಿದ ಮನವಿಗೆ ತಕ್ಷಣ ಗಮನಹರಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಮೆದುಳು ನಿಷ್ಕ್ರಿಯತೆ: ಸಮಾಜ ಸೇವಕಿ ಸಹನಾ ಜೋನ್ಸ್ ರೂಬೆನ್ ಅವರ ಅಂಗಾಗಗಳ ದಾನ

ನಗರದ ನಿವಾಸಿ ಚೌಡಪ್ಪ ದೂರವಾಣಿ ಮೂಲಕ ದೂರು ಸಲ್ಲಿಸಿ, ನಗರದ ಇಂದಿರಾಗಾಂಧಿ ರಸ್ತೆ, ಮಹಾತ್ಮ ಗಾಂಧಿ ರಸ್ತೆಯಲ್ಲಿ ಜನ ಓಡಾಡುವ ಪಾದಚಾರಿಗಳ ರಸ್ತೆಯಲ್ಲಿಯೂ ಅನೇಕ ಅಂಗಡಿಗಳವರು ತಮ್ಮ ವಸ್ತು ಹಾಗೂ ಸಣ್ಣ ಫಲಕಗಳನ್ನು ಇಟ್ಟು, ಜನರ ಓಡಾಡಕ್ಕೆ ತೊಡಕುಂಟು ಮಾಡಿದ್ದಾರೆ. ಈ ಎರಡು ರಸ್ತೆಗಳಲ್ಲಿ ಜನ ಓಡಾಡುವ ಜಾಗದಲ್ಲಿ ಗುಂಡಿಗಳಾಗಿದ್ದು, ಅವುಗಳನ್ನು ಮುಚ್ಚುವಂತೆ ನಗರಸಭೆಗೆ ಸೂಚನೆ ನೀಡಬೇಕೆಂದು ನಗರದ ನಿವಾಸಿ ಚೌಡಪ್ಪ ಮನವಿ ಮಾಡಿದರು. ಆಗ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವ ಭರವಸೆಯನ್ನು ಅವರಿಗೆ ನೀಡಲಾಯಿತು.

ಗೋವುಗಳ ಕಳ್ಳತನದ ಬಗ್ಗೆ ದೂರು : 

ಚಿಕ್ಕಮಗಳೂರಿನ ಜಯರಾಮ ರವರು ಮಾತನಾಡಿ ನಗರಕ್ಕೆ ರಾತ್ರಿ ವೇಳೆ ಕೇರಳ ಸೇರಿದಂತೆ, ಅನೇಕ ಕಡೆಗಳಿಂದ ಆಗುಂತಕರು ಆಗಮಿಸುತ್ತಿದ್ದು, ಅವರ ಮಾಹಿತಿಯನ್ನು ಪೊಲೀಸರು ಪಡೆಯುತ್ತಿಲ್ಲ. ಜೊತೆಗೆ ನಗರದಲ್ಲಿ ನಗರದಲ್ಲಿ ರಾತ್ರಿ ವೇಳೆ ಗೋವುಗಳನ್ನು ಅಕ್ರಮವಾಗಿ ವಾಹನದಲ್ಲಿ ಸಾಗಿಸಲಾಗುತ್ತಿದೆ. ಇವುಗಳಿಗೆ ತಡೆವೊಡ್ಡಬೇಕೆಂದು ಮನವಿ ಮಾಡಿದಾಗ, ಬಗ್ಗೆ ತಮಗೆ ನೇರವಾಗಿ ಸುಳಿವು ನೀಡಿದಲ್ಲಿ ತಕ್ಷಣ ಕ್ರಮ ಕೈಗೊಳ್ಳಲಾಗುವುದೆಂದು ಮುಖ್ಯಾಧಿಕಾರಿಗಳು ಹೇಳಿದರು.

ಚಿಕ್ಕಮಗಳೂರಿನ ಬಯಲುಸೀಮೆಯ ಜೀವನಾಡಿ ಅಯ್ಯನಕೆರೆ ಭರ್ತಿ: ರೈತರ ಮೊಗದಲ್ಲಿ ಮಂದಹಾಸ

ಯುವಕರಿಂದ ವ್ಹೀಲಿಂಗ್ : 

ನಗರದಲ್ಲಿ ಇತ್ತೀಚಿಗೆ ಪ್ರವಾಸಿಗರ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ, ವಾಹನ ದಟ್ಟಣೆ ಆಗದಂತೆ, ನಿಯಂತ್ರಿಸಬೇಕೆಂಬ ದೂರುಗಳು ಬಂದಿದ್ದು, ದ್ವಿಚಕ್ರ ವಾಹನದಲ್ಲಿ ಸೈಲೆಂನ್ಸರ್ ತೆಗೆದು ಹೆಚ್ಚಿನ ಶಬ್ಧ ಮಾಡುತ್ತಾ ವಾಹನ ಓಡಿಸುವುದು ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸಿ ಎಂಬ ಮನವಿ ಸಹ ಬಂತು ಈ ಬಗ್ಗೆ ತಕ್ಷಣ ಮಾಹಿತಿ ನೀಡಿದಲ್ಲಿ ಪೊಲೀಸರು ಕ್ರಮ ಕೈಗೊಳ್ಳುತ್ತಾರೆಂದು ಮುಖ್ಯಾಧಿಕಾರಿಗಳು ಹೇಳಿದರು. ರಾಜೇಶ್ ಎಂಬುವರು ಮಾತನಾಡಿ, ಕಾನೂನು ಉಲ್ಲಂಘಿಸುವ ವಾಹನ ಸವಾರರ ಮೇಲೆ ಹೆಚ್ಚಿನ ದಂಡ ವಿಧಿಸಬೇಕು. ಬೈಕ್ ಕಳ್ಳತನ, ವೀಲಿಂಗ್ ಹೆಚ್ಚಾಗುತ್ತಿದ್ದು, ನಿಯಂತ್ರಿಸಬೇಕೆಂದು ಹೇಳಿದರು. 

ಮಕ್ಕಳಿಗೆ ವಾಹನ ನೀಡಿ ನಗರದೊಳಗೆ ವಾಹನ ಓಡಿಸುತ್ತಿದ್ದು, ಈ ಬಗ್ಗೆ ಸಹ ಪೋಷಕರ ಮೇಲೆ ದೂರು ದಾಖಲಿಸಬೇಕೆಂದು ಒತ್ತಾಯಿಸಿದಾಗ, ಕ್ರಮ ಕೈಗೊಳ್ಳುವ ಭರವಸೆ ದೊರೆಯಿತು. ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳ ಮೊದಲ ಫೋನ್ ಇನ್ ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರತಿಸ್ಪಂದನ ಸಾರ್ವಜನಿಕರಿಂದ ದೊರೆತಿದ್ದು, ಮಾತನಾಡಿದ ಅನೇಕ ಮಂದಿ ಈ ರೀತಿ ನೇರವಾಗಿ ಸಾರ್ವಜನಿಕರೊಂದಿಗೆ ಮಾತನಾಡಿ ಸಮಸ್ಯೆ ಅರಿಯುವ ಜಿಲ್ಲಾ ಮುಖ್ಯಾಧಿಕಾರಿಗಳ ಕ್ರಮವನ್ನು ಶ್ಲಾಘಿಸಿದರು.

click me!