Udupi : ಮಾನಸಿಕ ಅಸ್ವಸ್ಥತೆಗೆ ಗುರಿಯಾಗಿ 2 ವರ್ಷಗಳ ಬಳಿಕ ಮರಳಿ ಗೂಡು ಸೇರಿದ ವ್ಯಕ್ತಿ

By Gowthami K  |  First Published Jul 16, 2023, 5:53 PM IST

ಉಡುಪಿಯ ಸಮಾಜ ಸೇವಕ ವಿಶು ಶೆಟ್ಟಿ ಅವರು ಕಾಪು ಪರಿಸರದಿಂದ ರಕ್ಷಿಸಿದ್ದ ವ್ಯಕ್ತಿ ಎರಡು ವರ್ಷಗಳ ಬಳಿಕ ತನ್ನ ಕುಟುಂಬವನ್ನು ಸೇರುವಲ್ಲಿ ಯಶಸ್ವಿಯಾಗಿದ್ದಾರೆ.


ಉಡುಪಿ (ಜು.16): ಉಡುಪಿಯ ಸಮಾಜ ಸೇವಕ ವಿಶು ಶೆಟ್ಟಿ ಅವರು ಕಾಪು ಪರಿಸರದಿಂದ ರಕ್ಷಿಸಿದ್ದ ಕೋಲಾರದ ಮಾನಸಿಕ ಅಸ್ವಸ್ಥ ಪ್ರಭಾಕರ (53) ಅವರು ಬಾಳಿಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದು, ಎರಡು ವರ್ಷಗಳ ಬಳಿಕ ತನ್ನ ಕುಟುಂಬವನ್ನು ಸೇರುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಭಾಕರ ಅವರು ನೀಡಿದ ಮಾಹಿತಿಯಂತೆ ಅವರ ಕುಟುಂಬದವರನ್ನು ಸಂಪರ್ಕಿಸಿದ ಸಮಾಜಸೇವಕ ವಿಶು ಶೆಟ್ಟಿ ಅವರು ಮಾಹಿತಿ ನೀಡಿದ್ದಾರೆ. ಅಂತೆಯೇ ಶನಿವಾರ ಉಡುಪಿಗೆ ಆಗಮಿಸಿದ ಪತ್ನಿ, ಸಹೋದರ ಹಾಗೂ ಮಗ ಅವರು ಪ್ರಭಾಕರ ಅವರನ್ನು ಕಂಡು ಕಣ್ಣೀರಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಇವರನ್ನು ಹುಡುಕುತ್ತಿದ್ದೇವೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

Tap to resize

Latest Videos

undefined

ದೂದ್ ಸಾಗರ ನೋಡಲು ಹೋದವರಿಗೆ ಬಸ್ಕಿ ಹೊಡೆಸಿದ ಗೋವಾ ಪೊಲೀಸ್, ಪ್ರವಾಸಿಗರ

ಪದವೀಧರ ಹಾಗೂ ಮಾಜಿ ಪಂಚಾಯಿತಿ ಅಧ್ಯಕ್ಷ:
ಪ್ರಭಾಕರ ಅವರು ಪದವೀಧರನಾಗಿದ್ದು, ಪಂಚಾಯಿತಿ ಒಂದರ ಮಾಜಿ ಅಧ್ಯಕ್ಷರಾಗಿದ್ದರು. ಉತ್ತಮ ಸಮಾಜ ಸೇವಕರಾಗಿದ್ದ ಇವರು ಅದಾವುದೋ ಕಾರಣಕ್ಕೆ ಮಾನಸಿಕ ಅಸ್ವಸ್ಥೆಗೆ ಗುರಿಯಾಗಿ, ಬೀದಿ ಪಾಲಾಗಿದ್ದರು ಎಂಬ ಮಾಹಿತಿಯನ್ನು ಅವರ ಪತ್ನಿ ನೀಡಿದ್ದಾರೆ. ಪ್ರಭಾಕರ ಅವರನ್ನು ಬಾಳಿಗಾ ಆಸ್ಪತ್ರೆ ದಾಖಲಿಸಿದ ವಿಶು ಶೆಟ್ಡಿ, ಉತ್ತಮ ಚಿಕಿತ್ಸೆ ನೀಡಿದ ವೈದ್ಯರು, ಸಿಬಂದಿಗಳಿಗೆ ಹಾಗೂ ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದ ಕಾಪು ಪೊಲೀಸರ ನೆರವಿಗೆ ಕುಟುಂಬ ತುಂಬು  ಕೃತಜ್ಞತೆಯನ್ನು ಸಲ್ಲಿಸಿದೆ.

ಪ್ರಭಾಕರ ಅವರಿಗೆ 13 ವರ್ಷದ ಮಗಳು ಹಾಗೂ 11ವರ್ಷದ ಮಗ ಇದ್ದಾರೆ. ಪ್ರಭಾಕರ ಅವರು ಕಾಪು ಪರಿಸರದಲ್ಲಿ ಮಳೆಗೆ ಒದ್ದೆಯಾಗಿ ತಿರುಗಾಡುತ್ತಾ,ಅಸಹಾಯಕ ಜೀವನ ಸಾಗಿಸುತ್ತಿರುವುದನ್ನು ಕಂಡು ಅವರನ್ನು ರಕ್ಷಿಸಿ ಬಾಳಿಗಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಶಿವಮೊಗ್ಗಕ್ಕೆ ಆ.11 ರಿಂದ ವಿಮಾನ ಹಾರಾಟ, 78 ಆಸನದ ಇಂಡಿಗೋ ವಿಮಾನಕ್ಕೆ ಟಿಕೆಟ್‌ 

ಅಲ್ಲಿನ ಚಿಕಿತ್ಸೆಗೆ ಸ್ಪಂದಿಸಿದ ಅವರು ತಮ್ಮ ಕುಟುಂಬದ ವಿಳಾಸವನ್ನು ನೀಡಲು ಶಕ್ತರಾದರು. ಈ ಮೂಲಕ ಅವರ ಕುಟುಂಬದವರನ್ನು ಸಂಪರ್ಕಿಸಿ ಉಡುಪಿಗೆ ಕರೆಯಿಸಿ ರೋಗಿಯನ್ನು ಹಸ್ತಾಂತರಿಸಲಾಗಿದೆ. ಪ್ರಭಾಕರ ಅವರು ಎರಡು ವರ್ಷಗಳ ಬಳಿಕ ತನ್ನ ಕುಟುಂಬವನ್ನು ಸೇರಿರುವುದು ಸಂತಸ ತಂದಿದೆ ಎಂದು ವಿಶು ಶೆಟ್ಟಿ ತಿಳಿಸಿದ್ದಾರೆ.

click me!