ಕಡಿಮೆಯಾಗಿಲ್ಲ ಮದ್ಯಪ್ರೇಮಿಗಳ ಖರೀದಿ ಉತ್ಸಾಹ

By Kannadaprabha News  |  First Published May 7, 2020, 9:43 AM IST

ಜಿಲ್ಲೆಯಲ್ಲಿ ಮದ್ಯ ಮಾರಾಟದ ಮೂರನೇ ದಿನವೂ ಮದ್ಯ ಖರೀದಿಗೆ ಮದ್ಯ ಪ್ರೇಮಿಗಳ ಉತ್ಸಾಹ ಕಡಿಮೆಯಾಗಿರಲಿಲ್ಲ. ಮೊದಲೆರಡು ದಿನಗಳಿಗೆ ಹೋಲಿಸಿದರೆ ಬುಧವಾರ ಮದ್ಯದಂಗಡಿಗಳ ಮುಂದೆ ಸರದಿ ಸಾಲು ಚಿಕ್ಕದಿತ್ತು. ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯವಾಗಿರುವುದರಿಂದ ಸಂಜೆವರೆಗೂ ಮದ್ಯದಂಗಡಿಗಳ ಮುಂದೆ ಐದಾರು ಮಂದಿಯ ಸರದಿ ಕಾಣುತಿತ್ತು.


ಉಡುಪಿ(ಮೇ.07): ಜಿಲ್ಲೆಯಲ್ಲಿ ಮದ್ಯ ಮಾರಾಟದ ಮೂರನೇ ದಿನವೂ ಮದ್ಯ ಖರೀದಿಗೆ ಮದ್ಯ ಪ್ರೇಮಿಗಳ ಉತ್ಸಾಹ ಕಡಿಮೆಯಾಗಿರಲಿಲ್ಲ. ಮೊದಲೆರಡು ದಿನಗಳಿಗೆ ಹೋಲಿಸಿದರೆ ಬುಧವಾರ ಮದ್ಯದಂಗಡಿಗಳ ಮುಂದೆ ಸರದಿ ಸಾಲು ಚಿಕ್ಕದಿತ್ತು. ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯವಾಗಿರುವುದರಿಂದ ಸಂಜೆವರೆಗೂ ಮದ್ಯದಂಗಡಿಗಳ ಮುಂದೆ ಐದಾರು ಮಂದಿಯ ಸರದಿ ಕಾಣುತಿತ್ತು.

ಈ ನಡುವೆ ರಾಜ್ಯ ಸರ್ಕಾರ ಮದ್ಯದ ಮೇಲಿನ ತೆರಿಗೆಯನ್ನು ಶೇ.17ರಷ್ಟುಹೆಚ್ಚಿಸಿರುವ ಬಗ್ಗೆ ಮದ್ಯಪ್ರೆಮಿಗಳು ತುಂಬಾ ತಲೆಕೆಡಿಸಿಕೊಂಡಂತಿರಲಿಲ್ಲ. ಈ ಬಗ್ಗೆ ಒಂದಿಬ್ಬರನ್ನು ಮಾತನಾಡಿಸಿದಾಗ, ಲಾಕ್‌ಡೌನ್‌ ಸಂದರ್ಭ 10 ಪಟ್ಟು ಹೆಚ್ಚು ಬೆಲೆ ನೀಡಿ ಮದ್ಯ ಕುಡಿದಿದ್ದೆವು, ಈಗ ಸ್ವಲ್ಪ ಹೆಚ್ಚಿಸಿದ್ದಾರೆ. ನಮಗೆ ಗೊತ್ತೇ ಇತ್ತು, ಹೆಚ್ಚಿಸಲಿ, ಸರ್ಕಾರ ನಡೀಬೇಕಲ್ಲ ಸರ್‌ ಎಂದು ಸರ್ಕಾರದ ಪರವಾಗಿ ಉದಾರತೆ ತೋರಿದರು.

Latest Videos

undefined

ಕೊರೋನಾ ನಡುವೆಯೇ ಹೆಚ್ಚುತ್ತಿದೆ ಡೆಂಘೀ, ಮಲೇರಿಯಾ ಭೀತಿ

ಆದರೆ ಮದ್ಯದಂಗಡಿ ಮಾಲೀಕರಿಗೆ ಮಾತ್ರ ಬೆಲೆ ಏರಿಕೆಯಿಂದ ಗೊಂದಲ ಉಂಟಾಗಿತ್ತು. ಯಾವ ಬ್ರ್ಯಾಂಡಿನ ಮದ್ಯವನ್ನು ಎಷ್ಟುಬೆಲೆ ಏರಿಸಿ ಮಾರಬೇಕು ಎಂಬ ಮಾಹಿತಿ ಬಂದಿರಲಿಲ್ಲ. ಜತೆಗೆ ಹೊಸ ಬೆಲೆಗೆ ಬಿಲ್‌ ಮಾಡುವ ತೊಂದರೆ, ಬಾಟಲಿಗಳಿಗೆ ಹೊಸ ಬೆಲೆಯ ಲೇಬಲ್‌ ಹಚ್ಚುವ ಕಷ್ಟಗಳನ್ನು ಮಾಲೀಕರು ಹೇಳಿಕೊಂಡರು.

click me!