ನಾಲ್ವರ ರಕ್ಷಿಸಿ, ಅಪಾಯಕ್ಕೆ ಸಿಲುಕಿದ ಉಡುಪಿ ನಗರಸಭೆ ಸದಸ್ಯ..!

By Kannadaprabha News  |  First Published Jul 9, 2024, 10:56 AM IST

ದಡಕ್ಕೆ ತೆರಳಿ ಮರಕ್ಕೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿ, ಇನ್ನೇನೂ ಈಚೆ ದಡಕ್ಕೆ ಬರುವಷ್ಟರಲ್ಲಿ ಪ್ರವಾಹದ ಸೆಳೆತಕ್ಕೆ ಸಿಲುಕಿ ನೀರಲ್ಲಿ ಮುಳುಗಿ ಕೊಚ್ಚಿಕೊಂಡು ಹೋದರು. ಅದೃಷ್ಟವಶಾತ್, ವಿಜಯ ಅವರ ಕೈಗೆ ನೀರಿನಲ್ಲಿ ಕೊಚ್ಚಿಕೊಂಡು ಬಂದ ಹಗ್ಗ ಸಿಲುಕಿತು. ತಕ್ಷಣ ಅದನ್ನು ಗಟ್ಟಿಯಾಗಿ ಹಿಡಿದು ಹರಸಾಹಸ ಪಟ್ಟು ದಡ ಸೇರಿದರು.
 


ಉಡುಪಿ(ಜು.09): ಒಂದು ಕುಟುಂಬದ ನಾಲ್ವರನ್ನು ಹಗ್ಗದ ಸಹಾಯದಿಂದ ರಕ್ಷಿಸಿ ಜೀವವುಳಿಸಿದ ನಗರಸಭಾ ಸದಸ್ಯನೇ ಹೊಳೆಯಲ್ಲಿ ಕೊಚ್ಚಿಕೊಂಡು ಹೋಗಿ ಪ್ರಾಣಾಪಾಯಕ್ಕೆ ಸಿಲುಕಿದ ಘಟನೆ ಭಾನುವಾರ ಸಂಜೆ ಕೊಡವೂರಿನಲ್ಲಿ ನಡೆದಿದೆ. 

ಬಾಚನಬೈಲಿನ ಕುಟುಂಬದ ಮನೆ ಸುತ್ತ ಪ್ರವಾಹ ಏರಿದ್ದು, ಮಕ್ಕಳು ಜೀವಭಯದಿಂದ ಕೂಗುತ್ತಿದ್ದಾರೆ ಎಂಬ ಮಾಹಿತಿ ತಿಳಿದು ನಗರಸಭಾ ಸದಸ್ಯ ವಿಜಯ ಕೊಡವೂರು ಸ್ಥಳಕ್ಕೆ ಧಾವಿಸಿದರು. ಹಗ್ಗವೊಂದನ್ನು ವ್ಯವಸ್ಥೆ ಮಾಡಿ ಸ್ವತಃ ವಿಜಯ ಅವರೇ ಹೊಳೆಗಿಳಿದರು. ಮೊದಲಿಬ್ಬರು ಮಕ್ಕಳನ್ನು ನಂತರ ಗಂಡ, ಹೆಂಡತಿಯನ್ನು ಈಚೆ ದಡಕ್ಕೆ ಕರೆ ತಂದರು. 

Tap to resize

Latest Videos

undefined

ಕರ್ನಾಟಕದಲ್ಲಿ ವಾಡಿಕೆಗಿಂತ ಶೇ.8 ಹೆಚ್ಚು ಮಳೆ: ಮಲೆನಾಡಲ್ಲಿ ಕಮ್ಮಿ..!

ನಂತರ ಮತ್ತೆ ಆಚೆ ದಡಕ್ಕೆ ತೆರಳಿ ಮರಕ್ಕೆ ಕಟ್ಟಿದ್ದ ಹಗ್ಗವನ್ನು ಬಿಚ್ಚಿ, ಇನ್ನೇನೂ ಈಚೆ ದಡಕ್ಕೆ ಬರುವಷ್ಟರಲ್ಲಿ ಪ್ರವಾಹದ ಸೆಳೆತಕ್ಕೆ ಸಿಲುಕಿ ನೀರಲ್ಲಿ ಮುಳುಗಿ ಕೊಚ್ಚಿಕೊಂಡು ಹೋದರು. ಅದೃಷ್ಟವಶಾತ್, ವಿಜಯ ಅವರ ಕೈಗೆ ನೀರಿನಲ್ಲಿ ಕೊಚ್ಚಿಕೊಂಡು ಬಂದ ಹಗ್ಗ ಸಿಲುಕಿತು. ತಕ್ಷಣ ಅದನ್ನು ಗಟ್ಟಿಯಾಗಿ ಹಿಡಿದು ಹರಸಾಹಸ ಪಟ್ಟು ದಡ ಸೇರಿದರು.

click me!