ಆತ ಆತ್ಮಹತ್ಯೆ ಮಾಡಿಕೊಂಡಿರೋ ಕಾರಣ ದೇವರಿಗೆ ಗೊತ್ತು..' ಅಳಿಯ ಪ್ರತಾಪ್ ನೆನೆದು ಕಣ್ಣೀರಾದ ಬಿಸಿ ಪಾಟೀಲ್

By Ravi Janekal  |  First Published Jul 9, 2024, 12:12 AM IST

ನಾನು ಸ್ಪರ್ಧಿಸಿದ ಎಲ್ಲಾ ಚುನಾವಣೆಯಲ್ಲೂ ನನಗೆ ಬಲಗೈ ಬಂಟನಾಗಿ ಕೆಲಸ ಮಾಡುತ್ತಿದ್ದ ಆತ ನನ್ನ ಅಳಿಯ ಅಲ್ಲ, ಮಗನಾಗಿ ಕೆಲಸ ಮಾಡುತ್ತಿದ್ದ ಎಂದು ಆತ್ಮಹತ್ಯೆ ಮಾಡಿಕೊಂಡ ಅಳಿಯ ಪ್ರತಾಪ್ ನೆನೆದು ಕಣ್ಣೀರಾದರು.


ದಾವಣಗೆರೆ (ಜು.8): ನಾನು ಸ್ಪರ್ಧಿಸಿದ ಎಲ್ಲಾ ಚುನಾವಣೆಯಲ್ಲೂ ನನಗೆ ಬಲಗೈ ಬಂಟನಾಗಿ ಕೆಲಸ ಮಾಡುತ್ತಿದ್ದ ಆತ ನನ್ನ ಅಳಿಯ ಅಲ್ಲ, ಮಗನಾಗಿ ಕೆಲಸ ಮಾಡುತ್ತಿದ್ದ ಎಂದು ಆತ್ಮಹತ್ಯೆ ಮಾಡಿಕೊಂಡ ಅಳಿಯ ಪ್ರತಾಪ್ ನೆನೆದು ಕಣ್ಣೀರಾದರು.

ಪ್ರತಾಪ್ ಕುಮಾರ್ ಅವರ ಮೃತದೇಹ ಕತ್ತಲೆಗೆರೆ ಗ್ರಾಮದ ನಿವಾಸಕ್ಕೆ ತರಲಾಯಿತು ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ರಾಜಕೀಯ, ನನ್ನ ವ್ಯವಹಾರ ಎಲ್ಲವನ್ನೂ ಆತನೇ ನೋಡಿಕೊಳ್ಳುತ್ತಿದ್ದ. ಯಾವ ಕಾರಣಕ್ಕೆ ಅತ ಅತ್ಮಹತ್ಯೆ ಮಾಡಿಕೊಂಡಿರೋ ಕಾರಣ ದೇವರಿಗೆ ಗೊತ್ತು ಮಕ್ಕಳಿಲ್ಲ ಅನ್ನೋ ಕೊರಗು ಇತ್ತು. ದೈಹಿಕವಾಗಿ ಆರೋಗ್ಯವಾಗಿದ್ದರು. ಯಾವುದೇ ಕಾಯಿಲೆ ಇರಲಿಲ್ಲ. ಬಾಡಿಗೆ ತಾಯಿ ಮೂಲಕ ಮಕ್ಕಳನ್ನು ಪಡೆಯಲು ಮಾತುಕತೆ ನಡೆದಿತ್ತು. ಈ ಬಗ್ಗೆ ವಕೀಲರು ಜೊತೆಗೂ ಮಾತನಾಡಿದ್ವಿ, ಕೋರ್ಟ್ ನಲ್ಲಿ ಹೋಗಿ ಗಂಡ ಹೆಂಡತಿ ಸ್ಟೇಟ್ ಮೆಂಟ್ ಕೊಡಬೇಕಿತ್ತು. ಆದರೆ ಈ ರೀತಿ ಆಗಿಹೋಗಿದೆ ಎಂದು ಭಾವುಕರಾದರು ಎಂದರು.

Tap to resize

Latest Videos

ಮಾಜಿ ಸಚಿವ BC Patil ಅಳಿಯ ವಿಷ ಸೇವಿಸಿ ಆತ್ಮಹತ್ಯೆ!

ನಾಳೆ ಮಧ್ಯಾಹ್ನ ಒಂದು ಗಂಟೆಗೆ ತಂದೆಯ ಸಮಾಧಿ ಪಕ್ಕದಲ್ಲಿ ವೀರಶೈವ ವಿಧಿ ವಿಧಾನಗಳ ಮೂಲಕ ಅಂತ್ಯ ಸಂಸ್ಕಾರ ಈಗಾಗಲೇ ಶಿವಮೊಗ್ಗದಿಂದ ಆಂಬುಲೆನ್ಸ್ ಮೂಲಕ ಮೃತ ದೇಹ ಕತ್ತಲೆಗೆರೆ ಗ್ರಾಮದ ನಿವಾಸಕ್ಕೆ ತರಲಾಗಿದೆ. ಪಾರ್ಥಿವ ಶರೀರ ನೋಡಲು ಆಗಮಿಸಿದ ಆಪಾರ ಬಂಧುಗಳು.

click me!