ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾಂತರ! ಉಡುಪಿ ಕೃಷ್ಣ ಮಠದ 'ಅಷ್ಟಮಂಗಲ ಪ್ರಶ್ನೆ'ಯಲ್ಲಿ ಕಾಳಸರ್ಪ ದೋಷದ ಭವಿಷ್ಯ

Published : Aug 29, 2026, 01:06 PM IST
Udupi Sri Krishna Mutt Ashtamangala Prashne

ಸಾರಾಂಶ

ಉಡುಪಿ ಶ್ರೀ ಕೃಷ್ಣ ಮಠದ ಅಷ್ಟಮಂಗಲ ಪ್ರಶ್ನೆಯಲ್ಲಿ, ಕಾಳಸರ್ಪ ಯೋಗದಿಂದಾಗಿ ಡಿಸೆಂಬರ್ ಒಳಗೆ ಜಗತ್ತಿಗೆ ಭೀಕರ ಗಂಡಾಂತರ ಎದುರಾಗಲಿದೆ ಎಂಬ ದೈವಿಕ ಮುನ್ಸೂಚನೆ ವ್ಯಕ್ತವಾಗಿದೆ. ಈ ಜಾಗತಿಕ ಸಂಕಷ್ಟ ನಿವಾರಣೆಗಾಗಿ 18 ಕೋಟಿ ರಾಮ ಮಂತ್ರ ಹಾಗೂ 1 ಕೋಟಿ ಕೃಷ್ಣ ಮಂತ್ರ ಜಪ ಸೇರಿದಂತೆ ಬೃಹತ್ ಧಾರ್ಮಿಕ ಕಾರ್ಯಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ.

ಉಡುಪಿ (ಆ.29): ಐತಿಹಾಸಿಕ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಇತ್ತೀಚೆಗೆ ಮಠದ ಆಡಳಿತ ಮತ್ತು ವ್ಯವಸ್ಥೆಯ ಸುಧಾರಣೆ ದೃಷ್ಟಿಯಿಂದ ನಡೆಸಲಾದ ‘ಅಷ್ಟಮಂಗಲ ಪ್ರಶ್ನೆ’ಯ (Ashtamangala Prashne) ಚಿಂತನೆಯಲ್ಲಿ ಇಡೀ ದೇಶ ಹಾಗೂ ಪ್ರಪಂಚಕ್ಕೇ ಕಾಳಸರ್ಪ ಯೋಗದ (Kala Sarpa Yoga) ಭೀಕರ ಗಂಡಾಂತರ ಕಾದಿದೆ ಎಂಬ ಆಘಾತಕಾರಿ ದೈವಿಕ ಮುನ್ಸೂಚನೆ ಬೆಳಕಿಗೆ ಬಂದಿದೆ.

ಈ ಜಾಗತಿಕ ಸಂಕಷ್ಟ ನಿವಾರಣೆಗಾಗಿ ಉಡುಪಿ ಕೃಷ್ಣ ಮಠ ಸೇರಿದಂತೆ ದೇಶದ ಪ್ರಮುಖ ಪುಣ್ಯಕ್ಷೇತ್ರಗಳಲ್ಲಿ ಬೃಹತ್ ಪ್ರಮಾಣದ ಧಾರ್ಮಿಕ ಪರಿಹಾರ ಕಾರ್ಯಗಳನ್ನು ಹಾಗೂ ಜಪ ಯಜ್ಞಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ.

ಡಿಸೆಂಬರ್ ಒಳಗೆ ಜಗತ್ತಿಗೆ ಆಪತ್ತು? ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡಿದ್ದೇನು?

ಖಗೋಳಶಾಸ್ತ್ರ ಮತ್ತು ಜ್ಯೋತಿಷ್ಯದ ಪ್ರಕಾರ, ರಾಹು ಮತ್ತು ಕೇತುಗಳ ಮಧ್ಯೆ ಉಳಿದ ಎಲ್ಲಾ ಗ್ರಹಗಳು ಬಂದಾಗ 'ಕಾಳಸರ್ಪ ಯೋಗ' ಸೃಷ್ಟಿಯಾಗುತ್ತದೆ. ಇದರ ದುಷ್ಪರಿಣಾಮ ಕೇವಲ ವ್ಯಕ್ತಿಗಳಿಗಷ್ಟೇ ಅಲ್ಲದೆ ಇಡೀ ಭೂಮಂಡಲಕ್ಕೆ ತಟ್ಟಲಿದೆ ಎಂದು ಪ್ರಶ್ನಾಚಿಂತನೆಯಲ್ಲಿ ತಿಳಿದುಬಂದಿದೆ.

ಪ್ರಾಕೃತಿಕ ವಿಕೋಪಗಳು: ಸುನಾಮಿ, ಭೂಕಂಪ, ಅತಿವೃಷ್ಟಿ ಅಥವಾ ಭೀಕರ ಬರಗಾಲದಂತಹ ನೈಸರ್ಗಿಕ ದುರಂತಗಳ ಸಾಧ್ಯತೆ.

ಮಹಾಮಾರಿಗಳ ಭೀತಿ: ಕರೋನಾದಂತಹ ಹೊಸ ಮಾದರಿಯ ಸಾಂಕ್ರಾಮಿಕ ರೋಗರುಜಿನಗಳು ಹರಡುವ ಆತಂಕ.

ರಾಜಕೀಯ & ಯುದ್ಧದ ಕಾರ್ಮೋಡ: ಆಡಳಿತ ವ್ಯವಸ್ಥೆಗಳಲ್ಲಿ ಕ್ಷೋಭೆ, ದೇಶ-ವಿದೇಶಗಳಲ್ಲಿ ಆಂತರಿಕ ಗಲಭೆಗಳು ಹಾಗೂ ಉಕ್ರೇನ್ ಯುದ್ಧದಂತಹ ಪರಿಸ್ಥಿತಿಗಳು ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ.

ಈ ಎಲ್ಲಾ ದುಷ್ಪರಿಣಾಮಗಳು ಮುಂದಿನ ಡಿಸೆಂಬರ್ ತಿಂಗಳ ಒಳಗಾಗಿಯೇ ಜಗತ್ತಿನ ಮೇಲೆ ಗೋಚರಿಸಲಿವೆ ಎಂದು ಎಚ್ಚರಿಸಲಾಗಿದೆ.

ದೋಷ ನಿವಾರಣೆಗೆ 18 ಕೋಟಿ ರಾಮ ಮಂತ್ರ, 1 ಕೋಟಿ ಕೃಷ್ಣ ಮಂತ್ರ ಜಪ!

ಲೋಕ ಕಲ್ಯಾಣಕ್ಕಾಗಿ ಹಾಗೂ ಸಂಭವನೀಯ ಗಂಡಾಂತರಗಳನ್ನು ತಡೆಯಲು ದೈವಜ್ಞರು ಸೂಚಿಸಿರುವ ಪರಿಹಾರಗಳನ್ನು ಉಡುಪಿ ಶ್ರೀಕೃಷ್ಣ ಮಠದ ದಿವಾಣರಾದ ಉದಯ ಸರಳತ್ತಾಯ ಅವರು ಹಂಚಿಕೊಂಡಿದ್ದಾರೆ:

18 ಕೋಟಿ ‘ಶ್ರೀರಾಮ’ ಮಂತ್ರ ಜಪ

1 ಕೋಟಿ ‘ಶ್ರೀಕೃಷ್ಣ’ ಮಂತ್ರ ಜಪ

1 ಲಕ್ಷ ‘ವಿಷ್ಣು ಸಹಸ್ರನಾಮ’ ಪಾರಾಯಣ

ಈ ಜಪಾನುಷ್ಠಾನಗಳನ್ನು ಕೇವಲ ಮಠದ ಪುರೋಹಿತರಷ್ಟೇ ಅಲ್ಲದೆ, ಪ್ರಪಂಚದಾದ್ಯಂತ ಇರುವ ಕೋಟ್ಯಂತರ ಭಕ್ತರು ತಮ್ಮ ಮನೆಗಳಲ್ಲೇ ಕುಳಿತು ಸಾಮೂಹಿಕವಾಗಿ ಜಪಿಸಬೇಕೆಂದು ಕರೆ ನೀಡಲಾಗಿದೆ.

ಅಷ್ಟಮಿ ಮುಗಿದ ಬೆನ್ನಲ್ಲೇ ಕೃಷ್ಣ ಮಠದಲ್ಲಿ ಮಹಾಪೂಜೆ:

ಈ ಕುರಿತು ಮಾಹಿತಿ ನೀಡಿರುವ ಪರ್ಯಾಯ ಶ್ರೀ ಪುತ್ತಿಗೆ/ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ, 'ಶ್ರೀಕೃಷ್ಣ ಜನ್ಮಾಷ್ಟಮಿ ಮುಗಿದ ತಕ್ಷಣವೇ ಕೃಷ್ಣ ಮಠದಲ್ಲಿ ಲೋಕ ಕಲ್ಯಾಣಾರ್ಥವಾಗಿ ವಿಶೇಷ ತುಳಸಿ ಅರ್ಚನೆ, ಕೃಷ್ಣ ಮಂತ್ರ ಪಠಣ ಹಾಗೂ ಹೋಮ-ಹವನಾದಿ ಪ್ರಾಯಶ್ಚಿತ್ತ ಧಾರ್ಮಿಕ ಕಾರ್ಯಗಳನ್ನು ಅತ್ಯಂತ ಶೀಘ್ರವಾಗಿ ಆರಂಭಿಸಲಾಗುವುದು' ಎಂದು ತಿಳಿಸಿದ್ದಾರೆ.

PREV
Read more Articles on
click me!

Recommended Stories

ದುಡ್ಡಿದ್ರೆ ದಸರಾ, ಇಲ್ದಿದ್ರೆ ಹರೋಹರ; ಅರಮನೆ ಆವರಣದ ಗಜಪಡೆ ನೋಡೋಕು ಅರಣ್ಯ ಇಲಾಖೆಯಿಂದ ಹಣ ವಸೂಲಿ!
'ಏಯ್ ನಾಗೇಂದ್ರ, ನಿನ್ನದು ಕರ್ಮದ ಕಣ್ಣೀರು ಕಣೋ..' ವಾಲ್ಮೀಕಿ ಹಗರಣ, ಚಾರ್ಜ್‌ಶೀಟ್ ಇಟ್ಟುಕೊಂಡು ರೆಡ್ಡಿ ವಾಗ್ದಾಳಿ!