Udupi ಬರಗಾಲದಲ್ಲೂ ಎಂದೂ ಬತ್ತದ ಕೆರೆಯ ವಿಸ್ಮಯ!

Published : May 03, 2022, 05:21 PM IST
Udupi ಬರಗಾಲದಲ್ಲೂ ಎಂದೂ ಬತ್ತದ ಕೆರೆಯ ವಿಸ್ಮಯ!

ಸಾರಾಂಶ

ಉಡುಪಿಯಲ್ಲಿದೆ ಎಂದೂ ಬತ್ತದ ದೇವಕೆರೆ ಹರಿಹರ ತೀರ್ಥವೆಂಬ ಬೇಸಗೆಯ ಚಿಲುಮೆ! ಕೀಳಿಂಜೆಯ ಜನರಿಗೆ ಇದು ಪ್ರಕೃತಿಕೊಟ್ಟ ವರ ಬರಗಾಲದಲ್ಲೂ ನೀರು ಬತ್ತದೆ ವಿಸ್ಮಯ!

ವರದಿ: ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ(ಮೇ.3): ನೀರಿಲ್ಲ, ನೀರಿಲ್ಲ! ಕಡು ಬೇಸಿಗೆ ಬಂದರೆ ಎಲ್ಲಿಗೆ ಹೋದ್ರೂ ನೀರಿಲ್ಲ. ಕರಾವಳಿಯಲ್ಲಿ (costal) ಮಳೆಯೂ ಕರುಣೆ ತೋರುತ್ತಿಲ್ಲ. ಕಳೆದ ವರ್ಷದ ಎಪ್ರಿಲ್ ತಿಂಗಳಿಗೆ ಹೋಲಿಸಿದರೆ ಈ ಬಾರಿ ಮಳೆಯ (Rain) ಪ್ರಮಾಣ ಸಂಪೂರ್ಣ .ಆದ್ರೆ ಪವಾಡವೋ ಎಂಬಂತೆ ಕೀಳಿಂಜೆ ಗ್ರಾಮದ ಹರಿಹರ ತೀರ್ಥ (Hari Hara teertha) ಈಗಲೂ ತುಂಬಿ ತುಳುಕುತ್ತಿದೆ. ನಮ್ಮ ಪ್ರಾಚೀನರು ಸಾಕಷ್ಟು ವೈಜ್ಞಾನಿಕ ಚಿಂತನೆ ನಡೆಸಿ ದೇವಾಲಯಗಳನ್ನು ಕಟ್ಟುತ್ತಿದ್ದರು ಅನ್ನೋದಕ್ಕೆ ಈ ಕ್ಷೇತ್ರವೇ ಸಾಕ್ಷಿ.

ತನ್ನನ್ನು ರಕ್ಷಿಸಿದವರಿಗೆ ಪ್ರಕೃತಿ ಎಂದೂ ಮೋಸ ಮಾಡೋಲ್ಲ ಅನ್ನೋದಕ್ಕೆ ಇಲ್ಲಿದೆ ನಿದರ್ಶನ. ಮರುಭೂಮಿಯಲ್ಲಿ ಓಯಸೀಸ್ ನಂತಿರುವ ಈ ನೀರಿನ ಸೆಲೆಯನ್ನು ನೋಡಿ ಎಲ್ಲರೂ ಅಚ್ಚರಿ ಪಡಬೇಕು. ಶುಭ್ರ ಸ್ಪಟಿಕದಂತಹಾ ನೀರು, ಬಾಯಿಗಿಟ್ಟರೆ ಕಬ್ಬಿನ ಹಾಲು ಕುಡಿದಷ್ಟು ಖುಷಿ! ಕಡು ಬೇಸಗೆಯಲ್ಲಿ ಈ ನೀರು ನಿಜಕ್ಕೂ ಅಮೃತ ಸಮಾನ!

Vijayapura Basava Jayanti 2022 ಜನ್ಮಸ್ಥಳದಲ್ಲಿ ಸರ್ಕಾರದಿಂದ ಕಾಟಾಚಾರದ ಬಸವ ಜಯಂತಿ!

ಉಡುಪಿಯ (Udupi) ಮಣಿಪಾಲಕ್ಕೆ (Manipal) ಹೊಂದಿಕೊಂಡಿರುವ ಈ ಕೆರೆಯು ಬತ್ತಿರೋದ್ದನ್ನು ಯಾರೂ ಕಂಡಿಲ್ಲ. ಉಡುಪಿ ಜಿಲ್ಲೆಯ ಕೀಳಿಂಜೆ ಎಂಬ ಗ್ರಾಮದಲ್ಲಿ ಈ ದೇವರ ಕೊಳ ಇದೆ. ಕೀಳಿಂಜೆಯಲ್ಲಿರುವ ಈ ಪುರಾತನ ದೇವಸ್ಥಾನದಲ್ಲಿ ಹರಿ ಮತ್ತು ಹರರ ಆರಾಧನೆ ನಡೆಯುತ್ತೆ. ಅದಕ್ಕೂ ಮುಖ್ಯವಾಗಿ ಮರ ಗಿಡಗಳು, ಹಸಿರು ರಾಶಿ, ಪ್ರಾಣಿ ಪಕ್ಷಿಗಳಿಗೆ ಈ ಭಾಗದಲ್ಲಿ ಯಾವುದೇ ಹಾನಿ ಮಾಡಿಲ್ಲ. ಉಡುಪಿ-ಮಣಿಪಾಲದಲ್ಲಿ ನೀರೆಲ್ಲಾ ಬತ್ತಿಹೋಗಿ ಬರಗಾಲ ಬಂದರೂ, ಪಕ್ಕದಲ್ಲೇ ಇರುವ ಕೀಳಿಂಜೆ ಕೆರೆಯಲ್ಲಿ ಮಾತ್ರ ನಿರಂತರ ನೀರು ಒಸರುತ್ತಿದೆ.

ಕೀಳಿಂಜೆಯ ಬೆಟ್ಟ ಪ್ರದೇಶದಲ್ಲಿ ಸಾಕಷ್ಟು ಮರಗಳು ಇನ್ನೂ ಹಸನಾಗಿದೆ. ಈ ಮರಗಳು ಹಿಡಿದಿಟ್ಟ ನೀರು ಸೆಖೆಗಾಲದಲ್ಲಿ ಅಂತರ್ಜಲವಾಗಿ ಚಿಮ್ಮುತ್ತಿದೆ. ಬೆಟ್ಟದಿಂದ ಪುಟ್ಟ ಕೊಳ್ಳಕ್ಕೆ ಹರಿದು, ಅಲ್ಲಿಂದ ಮುಂದೆ ನಾಗ ಸನ್ನಿಧಿಯಲ್ಲಿರುವ ಕೆರೆತುಂಬಿ, ಮುಂದೆ ಊರ ಜನರು ಬಳಸುವ ದೊಡ್ಡ ಕೆರೆಗೆ ಇಲ್ಲಿನ ನೀರು ಹರಿದುಹೋಗುತ್ತೆ. ಕಡುಬೇಸಗೆಯಲ್ಲೂ ಈ ತುಂಬಿದ ಕೊಳ ನೋಡುವುದು ಕಣ್ಣಿಗೆ ಹಬ್ಬವೇ ಸರಿ. ಅಂತಯೇ ಈ ಕ್ಷೇತ್ರದ ಕಾರಣಿಕದ ಬಗೆಗೂ ಜನರಿಗೆ ವಿಶೇಷವಾದ ಶೃದ್ಧೆ ಇದೆ.

ಕಲ್ಯಾಣ ಕರ್ನಾಟಕದಲ್ಲಿ ಎರಡನೇ Forensic Science Laboratory ಕೇಂದ್ರ ಸ್ಥಾಪನೆ

ಈ ನೀರು ಜನಬಳಕೆಗೆ ಉಪಯೋಗವಾಗಬೇಕು, ಸರ್ಕಾರ ಮನಸ್ಸು ಮಾಡಿದರೆ ಈ ಅಂತರ್ಜಲವನ್ನು ಸಂಗ್ರಹಿಸಿ ಜನರ ನೀರಿನ ಬರ ನೀಗಿಸಬಹುದು.ಈ ದೇವಸ್ಥಾನಕ್ಕೆ ಮಣಿಪಾಲ ಶ್ರೀಂಬ್ರ. ಹೊಸ ಸೇತುವೆ ಮೂಲಕವೂ ಬರಬಹುದು, ಕೊಳಲಗಿರಿ ಹಾವಂಜೆ ಕೀಳಂಜೆಯ ಮೂಲಕವೂ ಹರಿಹರ ಸನ್ನಿಧಿಯನ್ನು ಸಂಪರ್ಕಿಸಲು ಮೂರು ಕೋಟಿ 40 ಲಕ್ಷ ವೆಚ್ಚದಲ್ಲಿ ನೂತನ ರಿಂಗ್ ರಸ್ತೆ ರಚನೆಯಾಗಿದ್ದು, ಈ ರಸ್ತೆಯಲ್ಲಿ ಸಂಚರಿಸಿ ಈ ದೇವಸ್ಥಾನವನ್ನು ನೋಡಬಹುದು.ಒಟ್ಟಿನಲ್ಲಿ 365 ದಿನವೂ ನಿತ್ಯ ನೀರು ಹರಿಯುವುದು,, ಪ್ರಕೃತಿ ಪ್ರಿಯರಲ್ಲಿ ಸಂತಸ ಮೂಡಿದೆ,

PREV
Read more Articles on
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ