ರಾಜ್ಯದ ದ್ವಿತೀಯ ಪಿಯು ಪರೀಕ್ಷೆಯ ಫಲಿತಾಂಶದಲ್ಲಿ ಕಳೆದ ವರ್ಷ ಪ್ರಥಮ ಸ್ಥಾನಿಯಾಗಿದ್ದ ಉಡುಪಿ ಜಿಲ್ಲೆ ಈ ಬಾರಿ ಪ್ರಥಮ ಸ್ಥಾನವನ್ನು ನೆರೆಯ ದಕ್ಷಿಣಕನ್ನಡ ಜಿಲ್ಲೆಯೊಂದಿಗೆ ಹಂಚಿಕೊಂಡಿದೆ.
ಉಡುಪಿ(ಜು.15): ರಾಜ್ಯದ ದ್ವಿತೀಯ ಪಿಯು ಪರೀಕ್ಷೆಯ ಫಲಿತಾಂಶದಲ್ಲಿ ಕಳೆದ ವರ್ಷ ಪ್ರಥಮ ಸ್ಥಾನಿಯಾಗಿದ್ದ ಉಡುಪಿ ಜಿಲ್ಲೆ ಈ ಬಾರಿ ಪ್ರಥಮ ಸ್ಥಾನವನ್ನು ನೆರೆಯ ದಕ್ಷಿಣಕನ್ನಡ ಜಿಲ್ಲೆಯೊಂದಿಗೆ ಹಂಚಿಕೊಂಡಿದೆ.
ಈ ಬಾರಿ ಉಡುಪಿ ಜಿಲ್ಲೆಯ ಶೇಕಡವಾರು ಸಾಧನೆಯಲ್ಲಿ ಹಿನ್ನಡೆಯಾಗಿದೆ. ಕಳೆದ ವರ್ಷ ಶೇ.92.20 ಫಲಿತಾಂಶ ಸಾಧಿಸಿದ್ದ ಉಡುಪಿ ಜಿಲ್ಲೆ ಈ ಬಾರಿ ಶೇ 90.71ರಷ್ಟುಸಾಧನೆ ಮಾಡಿದೆ. ಜಿಲ್ಲೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಅತ್ಯುತ್ತಮ ಶೇ 95.80ರಷ್ಟುಫಲಿತಾಂಶ ಬಂದಿದ್ದರೆ, ವಾಣಿಜ್ಯ ವಿಭಾಗದಲ್ಲಿ ಶೇ 91.56 ಮತ್ತು ಕಲಾ ವಿಭಾಗದಲ್ಲಿ ಶೇ 68.87 ಫಲಿತಾಂಶ ಸಾಧನೆಯಾಗಿದೆ.
undefined
ಪ್ರವಾಹದ ನೀರಿಗಿಳಿದು ನೂರಾರು ಜೀವ ರಕ್ಷಿಸಿದ ಬಿಜೆಪಿ ಶಾಸಕ
ಈ ವರ್ಷ ಒಟ್ಟು 13775 ಹೊಸ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅವರಲ್ಲಿ 12495 (ಶೇ 90.71) ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಪ್ರತಿವರ್ಷದಂತೆ ಬಾಲಕರಿಗಿಂತ ಶೇ (81.44) ಬಾಲಕರಿಯರೇ (ಶೇ 90.32) ಮೇಲುಗೈ ಸಾಧಿಸಿದ್ದಾರೆ. ಅಲ್ಲದೆ ನಗರ ಭಾಗದ (ಶೇ 84.55) ವಿದ್ಯಾರ್ಥಿಗಳಿಗಿಂತ ಗ್ರಾಮೀಣ ಭಾಗದ (ಶೇ 87.39) ವಿದ್ಯಾರ್ಥಿಗಳು ಒಳ್ಳೆಯ ಸಾಧನೆ ತೋರಿಸಿದ್ದಾರೆ. ಇಂಗ್ಲೀಷ್ ಮಾಧ್ಯಮದಲ್ಲಿ ಪರೀಕ್ಷೆ ಬರೆದ ಶೇ 91.17 ವಿದ್ಯಾರ್ಥಿಗಳು ಪಾಸಾಗಿದ್ದರೆ, ಕನ್ನಡ ಮಾಧ್ಯಮದಲ್ಲಿ ಬರೆದ ಶೇ 66.23 ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ಜಿಲ್ಲೆಯ ಹೆಮ್ಮೆಯ ಸಾಧಕರಿವರು
ಉಡುಪಿಯ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಅಭಿಜ್ಞಾ ರಾವ್ 596 (ಶೇ 99.33) ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾರೆ. ವಿದ್ಯೋದಯ ಕಾಲೇಜಿನ ಗ್ರೀಷ್ಮಾ ಕೆ. ಮತ್ತು ಉಡುಪಿಯ ಎಂ.ಜಿ.ಎಂ. ಕಾಲೇಜಿನ ಮೇಧಾ ಎನ್. ಭಟ್ 593 ಅಂಕಗಳನ್ನು ಗಳಿಸಿ ರಾಜ್ಯಕ್ಕೆ 4ನೇ ಸ್ಥಾನ ಮತ್ತು ವಿದ್ಯೋದಯದ ಪದ್ಮಿಕಾ ಶೆಟ್ಟಿ592 ಅಂಕಗಳೊಂದಿಗೆ 5ನೇ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಕಾರ್ಕಳದ ಜ್ಞಾನಸುಧಾ ಪಪೂ ಕಾಲೇಜಿನ ರಿತಿಕಾ ಕಾಮತ್ ಮತ್ತು ಕುಂದಾಪುರದ ಶ್ರೀ ೕವೆಂಕಟರಮಣ ಪಪೂ ಕಾಲೇಜಿನ ಸ್ವಾತಿ ಪೈ 594 ಅಂಕಗಳೊಂದಿಗೆ ರಾಜ್ಯಕ್ಕೆ 4ನೇ ಸ್ಥಾನ ಪಡೆದಿದ್ದಾರೆ.