ಉಡುಪಿ: ಮತ್ತೆ 3 ಕೊರೋನಾ ಶಂಕಿತರು ಆಸ್ಪತ್ರೆಗೆ ದಾಖಲು

By Kannadaprabha News  |  First Published Mar 20, 2020, 1:15 PM IST

ಜಿಲ್ಲೆಯಲ್ಲಿ ಗುರುವಾರ ಮತ್ತೆ 3 ಮಂದಿ ಕೊರೋನಾ ಸೋಂಕು ಶಂಕಿತರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರೊಂದಿಗೆ ದಾಖಲಾದ ಶಂಕಿತರ ಸಂಖ್ಯೆ 24ಕ್ಕೇರಿದೆ. ಆದರೆ, ಇದುವರೆಗೆ ಯಾರಿಗೂ ಕೊರೋನಾ ಸೋಂಕು ಇರುವುದು ಸಾಬೀತಾಗಿಲ್ಲ.


ಉಡುಪಿ(ಮಾ.20): ಜಿಲ್ಲೆಯಲ್ಲಿ ಗುರುವಾರ ಮತ್ತೆ 3 ಮಂದಿ ಕೊರೋನಾ ಸೋಂಕು ಶಂಕಿತರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರೊಂದಿಗೆ ದಾಖಲಾದ ಶಂಕಿತರ ಸಂಖ್ಯೆ 24ಕ್ಕೇರಿದೆ. ಆದರೆ, ಇದುವರೆಗೆ ಯಾರಿಗೂ ಕೊರೋನಾ ಸೋಂಕು ಇರುವುದು ಸಾಬೀತಾಗಿಲ್ಲ.

ಗುರುವಾರ ಕುಂದಾಪುರ ತಾಲೂಕು ಆಸ್ಪತ್ರೆಗೆ ದಾಖಲಾದ ವ್ಯಕ್ತಿ ಯುಎಇ ದೇಶದಿಂದ ಮಾ.10ಕ್ಕೆ ಬಂದವರು. ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಾದವರು ಮಾ.11ಕ್ಕೆ ಜರ್ಮನಿಯಿಂದ ಬಂದವರು ಮತ್ತು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾದವರು ಮಾ.10ರಂದು ದುಬೈಯಿಂದ ಬಂದವರಾಗಿದ್ದಾರೆ.

Latest Videos

undefined

ಚಿಕ್ಕಮಗಳೂರಿಗೆ ಮೆಡಿಕಲ್‌ ಕಾಲೇಜು ಮಂಜೂರು

ಬುಧವಾರ 5 ಮಂದಿ ದಾಖಲಾಗಿದ್ದು, ಅವರ ಗಂಟಲ ದ್ರವದ ಮಾದರಿಯನ್ನು ಶಿವಮೊಗ್ಗ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಇನ್ನೂ ವರದಿ ಬಂದಿಲ್ಲ. ಗುರುವಾರ ದಾಖಲಾದವರ ಗಂಟಲ ದ್ರವನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇದೀಗ ಒಟ್ಟು 8 ಮಂದಿಯ ಪ್ರಯೋಗಾಲಯದ ಪರೀಕ್ಷೆಯ ವರದಿ ಬರುವುದಕ್ಕೆ ಬಾಕಿಇದೆ. ಇದಕ್ಕೆ ಮೊದಲು ದಾಖಲಾದ 16 ಮಂದಿಯ ಪ್ರಯೋಗಾಲಯದ ವರದಿ ಬಂದಿದ್ದು, ಯಾರಿಗೂ ಕೊರೋನಾ ಸೊಂಕು ಇಲ್ಲ ಎಂದು ವರದಿ ಬಂದಿದೆ.

13 ಜನ ಅದೇ ವಿಮಾನದಲ್ಲಿದ್ದರು !

ಕಾಸರಗೋಡಿನ ಒಬ್ಬ ವ್ಯಕ್ತಿಗೆ ಕೊರೋನಾ ಸೋಂಕು ಇರುವುದು ಪತ್ತೆಯಾಗಿದ್ದು, ಅವರು ವಿದೇಶದಿಂದ ಬಂದ ವಿಮಾನದಲ್ಲಿದ್ದ ಎಲ್ಲರೂ ಈಗ ಕೊರೋನಾ ಶಂಕಿತರಾಗಿದ್ದಾರೆ. ಅವರಲ್ಲಿ 13 ಮಂದಿ ಉಡುಪಿ ಜಿಲ್ಲೆಯವರೂ ಆಗಿದ್ದಾರೆ. ಅವರಿಗೆ ಇದುವರೆಗೆ ಕೊರೋನಾದ ಲಕ್ಷಣಗಳು ಕಂಡು ಬಂದಿಲ್ಲ. ಆದರೂ ಅವರ ಮೇಲೆ ನಿಗಾ ಇಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುಧೀರ್‌ ಚಂದ್ರ ಸೂಡಾ ಹೇಳಿದ್ದಾರೆ.

click me!