* ಬೆಳಗಾವಿ ತಾಲೂಕಿನ ಕಾಕತಿ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದ ಘಟನೆ
* ತಡರಾತ್ರಿ ದಾಬಾವೊಂದಕ್ಕೆ ಊಟ ಮಾಡಲು ತೆರಳಿದ್ದ ಯುವಕರು
* ಈ ಸಂಬಂಧ ಬೆಳಗಾವಿಯ ಉತ್ತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲು
ಬೆಳಗಾವಿ(ಸೆ.09): ರಸ್ತೆ ಬದಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾನ ಯುವಕರಿಬ್ಬರು ಮೃತಪಟ್ಟ ಘಟನೆ ತಾಲೂಕಿನ ಕಾಕತಿ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಿನ್ನೆ(ಬುಧವಾರ) ತಡರಾತ್ರಿ ನಡೆದಿದೆ. ಚವಾಟ್ ಗಲ್ಲಿಯ ಶ್ರೀನಾಥ ಪವಾರ್(21), ಸದಾಶಿವ ನಗರದ ರಚಿತ್ ಡುಮಾವತ್ (21) ಮೃತ ಯುವಕರಾಗಿದ್ದಾರೆ.
ಇಬ್ಬರು ಯುವಕರು ತಡರಾತ್ರಿ ದಾಬಾವೊಂದಕ್ಕೆ ಊಟ ಮಾಡಲು ತೆರಳಿದ್ದರು. ಊಟ ಮುಗಿಸಿ ತಡರಾತ್ರಿ ಮನೆಗೆ ಮರಳುತ್ತಿದ್ದ ವೇಳೆ ರಸ್ತೆ ಬದಿ ನಿಂತಿದ್ದ ಲಾರಿಗೆ ರಭಸವಾಗಿ ಬೈಕ್ ಗುದ್ದಿದ ಪರಿಣಾಮ ಈ ಅವಘಡ ಸಂಭವಿಸಿದೆ.
ಕೋರಮಂಗಲ ಅಪಘಾತ: ತಪ್ಪಿತ್ತು 2 ದುರಂತ, ತನಿಖೆಯಲ್ಲಿ ಸ್ಫೋಟಕ ಸತ್ಯ ಬಯಲು!
ರಭಸವಾಗಿ ಬೈಕ್ ಗುದ್ದಿದ ಪರಿಣಾಮ ಬೈಕ್ ಮೇಲಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರಿಬ್ಬರೂ ಖಾಸಗಿ ಕಾಲೇಜಿನ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಈ ಸಂಬಂಧ ಬೆಳಗಾವಿಯ ಉತ್ತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.