ಕೋಟಾದಲ್ಲಿ ನಡೆದ ಡಬಲ್ ಮರ್ಡರ್ ಪ್ರಕರಣದಲ್ಲಿ ಇಬ್ಬರು ಪೊಲೀಸರೇ ಶಾಮೀಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ. ಕೊಲೆ ಆರೋಪಿಗಳು ಪರಾರಿಯಾಗಲು ಸಹಕರಿಸಿದ್ದರಿಂದ ಬಂಧನಕ್ಕೊಳಪಡಿಸಲಾಗಿದೆ.
ಉಡುಪಿ : ಕೊಲೆ ಆರೋಪಿಗಳೊಂದಿಗೆ ಶಾಮೀಲಾಗಿದ್ದ ಪೊಲೀಸ್ ಪೇದೆಗಳಿಬ್ಬರನ್ನು ಬಂಧಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಕೋಟಾ ಡಬಲ್ ಮರ್ಡರ್ ಪ್ರಕರಣದಲ್ಲಿ ಶಾಮೀಲಾಗಿ, ರೌಡಿಗಳೊಂದಿಗೆ ಒಡನಾಟ ಹೊಂದಿದ್ದ ಇಬ್ಬರು ಡಿಎಆರ್ ಪೇದೆಗಳಾದ ಪವನ್ ಅಮಿನ್ ಹಾಗೂ ವಿರೇಂದ್ರ ಅಚಾರ್ಯರನ್ನು ಬಂಧಿಸಲಾಗಿದೆ.
undefined
ಉಡುಪಿಯಲ್ಲಿ ಪೇದೆಗಳಾಗಿದ್ದ ಇಬ್ಬರು ಸುಮಾರು ವರ್ಷ ಗಳಿಂದ ಕೋಟಾ ಠಾಣೆ ವ್ಯಾಪ್ತಿಯ ರೌಡಿಗಳಾದ ಹರೀಶ್ ರೆಡ್ದಿ, ರಾಜಶೇಖರ ರೆಡ್ದಿ, ಮಹೇಶ ಗಾಣಿಗ, ಸಂತೋಷ ಕುಂದರ್ ಮುಂತಾದವರೊಂದಿಗೆ ಒಡನಾಟ ಹೊಂದಿದ್ದರು.
ಕಳೆದ ಜನವರಿ 29 ರಂದು ಕೋಟಾದ ಮಣೂರಲ್ಲಿ ರಾಜಶೇಖ ರೆಡ್ಡಿ ಹಾಗೂ ಆತನ ಸಹಚರರು ಸೇರಿ ಭರತ್ ಕುಮಾರ್ ಮತ್ತು ಯತೀಶ್ ಎಂಬಿಬ್ಬರ ಹತ್ಯೆ ಮಾಡಿದ್ದು, ಈ ಕೊಲೆ ಆರೋಪಿಗಳಿಗೆ ಪವನ್ ಅಮೀನ್ ಆಶ್ರಯ ನೀಡಿದ್ದರು. ಅಲ್ಲದೇ ಕೊಲೆ ಆರೋಪಿಗಳಿಗೆ ಹಣ ಹಾಗೂ ಮೊಬೈಲ್ ನ್ನೂ ಕೊಟ್ಟು ಪರಾರಿಯಾಗಲು ಸಹಕರಿಸಿದ್ದರು.
ಕಾರಿನ ವ್ಯವಸ್ಥೆ ಮಾಡಿ ಅರೋಪಿಗಳನ್ನು ಅಗುಂಬೆ, ಎನ್ ಅರ್ ಪುರ, ಮಲ್ಲಂದೂರಿನ ತಮ್ಮ ಸಂಬಂದಿಕರ ಮನೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದರು.
ಪೊಲೀಸ್ ಇಲಾಖೆಯಲ್ಲಿಯೇ ಇದ್ದು ಬೇಲಿಯೇ ಎದ್ದು ಹೊಲ ಮೇಯ್ದಂತೆ ಕೊಲೆ ಆರೋಪಿಗಳ ಬೆನ್ನಿಗೆ ನಿಂತಿದ್ದ ಇಬ್ಬರು ಪೇದೆಗಳನ್ನು ಸೇವೆಯಿಂದ ಅಮಾನತು ಮಾಡಿದ್ದು, ಫೆಬ್ರವರಿ 15ರವರೆಗೆ ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ.