ಬಳ್ಳಾರಿ: 2 ಕಡೆ ಪ್ರತ್ಯೇಕ ಅಪಘಾತ, ಇಬ್ಬರ ದುರ್ಮರಣ

By Kannadaprabha News  |  First Published Sep 10, 2020, 10:51 AM IST

ಕಾರು ಡಿಕ್ಕಿ, ಬೈಕ್‌ನಲ್ಲಿದ್ದ ಓರ್ವ ಸಾವು, ಇನ್ನೊಬ್ಬ​ನಿ​ಗೆ ಗಾಯ| ಮಿನಿಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮಹಿಳೆ ಸಾವು| ತನ್ನ ಮಗಳನ್ನು ಊರಿಗೆ ಕಳಿಸಿಕೊಡಲು ಬಸ್‌ ತಂಗುದಾಣಕ್ಕೆ ಬಂದು ನಿಂತಿದ್ದ ಮಹಿಳೆ| 


ಕೂಡ್ಲಿಗಿ(ಸೆ.10): ತಾಲೂಕಿನ ಅಮರದೇವರಗುಡ್ಡದ ಗೊಲ್ಲರಹಟ್ಟಿಯಿಂದ ಮೊರಬನಹಳ್ಳಿಗೆ ಬೈಕ್‌ನಲ್ಲಿ ಹೋಗುತ್ತಿರುವಾಗ ಕೂಡ್ಲಿಗಿ ಕಡೆಯಿಂದ ಮೊರಬನಹಳ್ಳಿ ಕಡೆಗೆ ಯು ಟರ್ನ್‌ ಮಾಡುವ ಸಂದರ್ಭದಲ್ಲಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಗಾಯಗೊಂಡು ಹಿಂಬದಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬುಧವಾರ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಮೊರಬನಹಳ್ಳಿ ಕ್ರಾಸ್‌ ಬಳಿ ನಡೆದಿದೆ.

ಕೂಡ್ಲಿಗಿ ಸಮೀಪದ ಅಮರದೇವರಗುಡ್ಡ ಗೊಲ್ಲರಹಟ್ಟಿಯ ಸಣ್ಣಪ್ಪ (50) ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ದೈವಿ. ಬೈಕ್‌ ಸವಾರ ಚಿತ್ತಪ್ಪ (25) ತೀವ್ರ ಗಾಯಗೊಂಡು ಕೂಡ್ಲಿಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.  ಮಾರೆಮ್ಮನ ಹಬ್ಬದ ಊಟಕ್ಕೆಂದು ಇಬ್ಬರು ಅಮರದೇವರಗುಡ್ಡ ಗೊಲ್ಲರಹಟಿಯಿಂದ ಮೊರಬನಹಳ್ಳಿಗೆ ಹೋಗುವಾಗ ಈ ಘಟನೆ ಸಂಭವಿಸಿದ್ದು ಡಿಕ್ಕಿ ಹೊಡಿಸಿದ ಕಾರಿನ ಚಾಲಕ ಕಾರು ಸಮೇತ ಹಳ್ಳಿ ರಸ್ತೆಗಳಲ್ಲಿ ಪರಾರಿಯಾಗಲು ಯತ್ನಿಸಿದ್ದು ಅಪಘಾತ ನೋಡಿದ ಜನತೆ ಪೊಲೀಸರ ಗಮನಕ್ಕೆ ತಂದಿದ್ದಾರೆ. ಕಾರಿನ ಚಾಲಕ ದಾರಿಕಾಣದೆ ವಾಪಸ್ಸು ಮತ್ತೆ ಹೈವೇ ಕಡೆಗೆ ಬರುತ್ತಿದ್ದಾಗ ಡಿಕ್ಕಿ ಹೊಡಿಸಿದ ಕಾರನ್ನು ಪೊಲೀಸ್‌ ಹೈವೇ ಪೆಟ್ರೋಲಿಂಗ್‌ ವಾಹನದ ಸಿಬ್ಬಂದಿ ತಡೆದಿದ್ದಾರೆ. ಈ ಬಗ್ಗೆ ಕೂಡ್ಲಿಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tap to resize

Latest Videos

ಸಿರುಗುಪ್ಪ: ಮಡಿತೇರು ಮುರಿದು ಬಿದ್ದು ಏಳು ಜನರಿಗೆ ಗಾಯ

ಮಹಿಳೆಗೆ ಮಿನಿಲಾರಿ ಡಿಕ್ಕಿ ಸ್ಥಳದಲ್ಲೇ ಸಾವು

ಇನ್ನು ಹಗರಿಬೊಮ್ಮನಹಳ್ಳಿ ತಾಲೂಕಿನ ಉಲವತ್ತಿ ಗ್ರಾಮದ ನಿವಾಸಿ ಪಾರ್ವತಮ್ಮ (48)ಗೆ ಅಶೋಕ ಲೈಲ್ಯಾಂಡ್‌ ಮಿನಿಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮಹಿಳೆ ಸಾವನ್ನಪ್ಪಿದ ಘಟನೆ ಬುಧವಾರ ಮಧ್ಯಾಹ್ನ ಜರುಗಿದೆ.

ಪಾರ್ವತಮ್ಮ ತನ್ನ ಮಗಳನ್ನು ಊರಿಗೆ ಕಳಿಸಿಕೊಡಲು ಬಸ್‌ ತಂಗುದಾಣಕ್ಕೆ ಬಂದು ನಿಂತಿದ್ದಾಳೆ, ಮಗಳನ್ನು ಊರಿಗೆ ವಾಹನದಲ್ಲಿ ಕಳಿಸಿಕೊಡುತ್ತಿದ್ದಂತಿಯೇ ಅದೇ ಸಂದರ್ಭದಲ್ಲಿ, ಹೊಸಪೇಟೆಯಿಂದ ಕಿರಾಣಿ ತೆಗೆದುಕೊಂಡು ಹೂವಿನ ಹಡಗಲಿಗೆ ಪೂರೈಸಲು, ವೇಗವಾಗಿ ಹೊರಟಿದ್ದ ಮಿನಿಲಾರಿ ಆಯಾತಪ್ಪಿ ರಸ್ತೆಯ ಪಕ್ಕದಲ್ಲಿಯೇ ನಿಂತಿದ್ದ ಈ ಮಹಿಳೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲಿಯೇ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ಇಲ್ಲಿಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ವರ್ಷ ಪಾರ್ವತಮ್ಮನ ಪತಿ ಇದೇ ಸ್ಥಳದಲ್ಲಿ ಬೈಕ್‌ಡಿಕ್ಕಿಯಿಂದ ಸಾವನ್ನಪ್ಪಿದ ಘಟನೆಯನ್ನು ಗ್ರಾಮಸ್ಥರು ನೆನಪಿಸಿಕೊಂಡು ಮರುಗಿದ ಪ್ರಸಂಗ ಜರುಗಿತು.
 

click me!