ʼಡಿಕೆ ಶಿವಕುಮಾರ್‌ ಸರ್ಕಾರದಲ್ಲಿ ಇನ್ನೂ ಎರಡು ವಿಕೆಟ್ ಪತನʼ ಆರ್‌ ಅಶೋಕ್‌ ಹೇಳಿದ ಸಚಿವರುಗಳು ಯಾರು?

Published : Sep 19, 2026, 08:52 PM IST
R Ashok on T Narasipur Ganeshotsav protest

ಸಾರಾಂಶ

ಕಾಂಗ್ರೆಸ್ ಸರ್ಕಾರದಲ್ಲಿ ಶೀಘ್ರದಲ್ಲೇ ಮತ್ತಷ್ಟು ರಾಜೀನಾಮೆಗಳು ಬರಲಿವೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಭವಿಷ್ಯ ನುಡಿದಿದ್ದಾರೆ. ಭ್ರಷ್ಟಾಚಾರ, ವಂದೇ ಮಾತರಂಗೆ ಅಗೌರವ ಮತ್ತು ಕಳಪೆ ಶೂ ವಿತರಣೆ ವಿಚಾರವಾಗಿ ಸರ್ಕಾರದ ವಿರುದ್ಧ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಚಿಕ್ಕೋಡಿ: ಕಾಂಗ್ರೆಸ್ ಸರ್ಕಾರದಲ್ಲಿ ಇನ್ನೂ ಎರಡು ವಿಕೆಟ್ ಪತನವಾಗಲಿದೆ ಎಂದು ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ವಿಪಕ್ಷ ನಾಯಕ ಆರ್.ಅಶೋಕ ಭವಿಷ್ಯ ನುಡಿದಿದ್ದಾರೆ. ಡಿಕೆ ಶಿವಕುಮಾರ್‌ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು.. ಕಾಂಗ್ರೆಸ್ ಬಡವರ ಹಣ ನುಂಗುವ ಸರ್ಕಾರ. ಆಸ್ಪತ್ರೆ ಹಿಡಿದು ಎಲ್ಲಾ ಕಡೆಯೂ ಲಂಚಾವತಾರ ನಡೆಯುತ್ತಿದೆ ಎಂದು ಕಿಡಿಕಾರಿದರು.

ಇನ್ನು, ಸರ್ಕಾರದಲ್ಲಿ ಇನ್ನೂ ಎರಡು ವಿಕೆಟ್‌ ಪತನವಾಗಲಿದೆ ಎಂದಿರೋದು ತೀವ್ರ ಚರ್ಚೆಗೆ ಕಾರಣವಾಗಿದೆ. ಈಗಾಗಲೇ ವಾಲ್ಮಿಕಿ ನಿಗಮ ಹಗರಣದಲ್ಲಿ ಬಿ.ನಾಗೇಂದ್ರ ಅವರು ರಾಜೀನಾಮೆ ನೀಡಿದ್ದಾರೆ. ಡಿಕೆ ಶಿವಕುಮಾರ್‌ ಸಿಎಂ ಆದ ಬೆನ್ನಲ್ಲೇ ಈ ಬೆಳವಣಿಗೆ ಆಗಿದೆ. ಸರ್ಕಾರಕ್ಕೆ ಈ ವಿಚಾರ ದೊಡ್ಡ ಮುಜುಗರ ತಂದಿದೆ. ಈಗ ಅಶೋಕ್‌ ಅವರು ಮತ್ತೆ ಹೊಸ ಬಾಂಬ್‌ ಹಾಕಿದ್ದಾರೆ. ಹಾಗಿದ್ದರೆ ಕಾಂಗ್ರೆಸ್‌ನಲ್ಲಿ ಮತ್ತೆ ಉದುರುವ ವಿಕೆಟ್‌ ಯಾವುದು ಎಂಬುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಆಗ್ತಿದೆ.

ಡಿಕೆ ಶಿವಕುಮಾರ್ ವಿರುದ್ಧ ಟೀಕಿಸಿರುವ ಅಶೋಕ್..‌ ರಿಯಲ್ ಎಸ್ಟೇಟ್ ಹಾಗೂ ಹಣಕ್ಕಾಗಿ ಎಲ್ಲಾ ಕಡೆಯು ಕ್ಯಾಬಿನೆಟ್ ಮಾಡುತ್ತಾ ಓಡಾಡುತ್ತಿದ್ದಾರೆ. ಈ ಸರ್ಕಾರ ಪಾಪರ್ ಆಗಿದೆ. ಇವರ ಬಳಿ ಹಣ ಇಲ್ಲ. ಸಿದ್ದರಾಮಯ್ಯರನ್ನ ಓಡಿಸಿದ್ದಾರೆ. ಪಾಪ ಇವಾಗ ಸಿದ್ದರಾಮಯ್ಯ ನಾಟಿ ಕೋಳಿ ತಿಂದು ತೃಪ್ತಿ ಪಡುತ್ತಿದ್ದಾರೆ. ಡಿಕೆ ಶಿವಕುಮಾರ್‌ ಅವರ ಆಡಳಿತ ಗುಂಡಾಗಿರಿ ಆಡಳಿತ ಆಗಿದೆ. ಬರಕ್ಕೆ ಇವರ ಬಳಿ ಹಣ ಇಲ್ಲ. ಎಲ್ಲೆಂದರಲ್ಲಿ ಹಣ ಕೊಡ್ತೀವಿ ಎಂದು ಹೋಳುತ್ತಿದ್ದಾರೆ. ಇವರ ಬಳಿ ಹಣವೇ ಇಲ್ಲ. ಎಲ್ಲಿಂದ ತಂದು ಕೊಡುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ.

ವಂದೇ ಮಾತರಂ ಹಾಡಿಗೆ ಅಗೌರವ

ವಂದೇ ಮಾತರಂ ಹಾಡಿಗೆ ಮೊಸ ಮಾಡುತ್ತಿದ್ದಾರೆ. ವಂದೇ ಮಾತರಂ ಎಂದರೆ ಇವರ ಬಾಯಿ ಕಟ್ಟೊಗುತ್ತಿದೆ, ಬಾಯಿ ಒಪನ್ ಆಗಲ್ಲ. ವಂದೇ ಮಾತರಂ ಪೂರ್ಣ ಹಾಡಿಲ್ಲ ಎಂದರೆ ವಿಧಾನಸೌಧಲ್ಲೇ ಗಲಾಟೆ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಅಷ್ಟೇ ಅಲ್ಲದೇ ನಮ್ಮ ಎಲ್ಲಾ ಶಾಸಕರು ಪೂರ್ಣವಾಗಿ ವಂದೇ ಮಾತರಂ ಹಾಡು ಹಾಡಿ ತೋರಿಸುತ್ತೇವೆ. ಬರ ವಿಚಾರದಲ್ಲಿ ಮೊದಲು ಹಣ ಬಿಡುಗಡೆ ಮಾಡಬೇಕು. ಹಣ ಬಿಡುಗಡೆ ಮಾಡದೆ ಕೇಂದ್ರ ನಿಯೋಗ ಬನ್ನಿ ಎಂದರೆ ನಾವು ಬರಲ್ಲ. ವಿದ್ಯಾರ್ಥಿಗಳಿಗೆ ಕಳಪೆ ಶೂ ವಿತರಣೆ ವಿಚಾರದ ಬಗ್ಗೆಯೂ ಪ್ರತಿಕ್ರಿಯಿಸಿದ ಆರ್‌ ಅಶೋಕ್‌, ಶೂಗಳನ್ನ ಬಿಡಿ ಇವರ ಚಪ್ಪಲಿ ಕೂಡ ಹರಿದು ಹೋಗುತ್ತಿದೆ. ಶೂಗಳ ಟೆಂಡರ್‌ನಲ್ಲಿ ಕಮಿಷನ್ ಹೊಡೆದಿದ್ದಾರೆ. ಶೂಗಳನ್ನ ಮಕ್ಕಳು ಕಾಲಲ್ಲಿ ಹಾಕುವ ಹಾಗಿಲ್ಲ, ಕೈಯಲ್ಲಿ ಹಿಡಿದುಕೊಂಡು ಹೋಗುವ ಸ್ಥಿತಿ ಇದೆ. ಕಾಲಲ್ಲಿ ಹಾಕಿದ್ರೆ ಶೂಗಳು ಹರಿಯುತ್ತೆ ಎನ್ನುವ ಭಯ ಮಕ್ಕಳಿಗೆ. ಅಂತಹ ಕ್ವಾಲಿಟಿ ಶೂಗಳನ್ನ ಸರ್ಕಾರ ಕೊಟ್ಟಿದೆ ಎಂದು ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

PREV
Read more Articles on
click me!

Recommended Stories

ಬೆಂಗಳೂರು ರಸ್ತೆಯಲ್ಲಿ ಎಲೆಕ್ಟ್ರಿಕ್ ಬೈಕ್ ರೈಡ್ ಮಾಡಿದ ಸಂಸದ ತೇಜಸ್ವಿ ಸೂರ್ಯ ಪತ್ನಿ ಶಿವಶ್ರೀ ಸ್ಕಂದಪ್ರಸಾದ್‌, ವಿಡಿಯೋ ವೈರಲ್‌
ವಂದೇ ಮಾತರಂ ಪೂರ್ಣ ಗೀತೆ ಬಗ್ಗೆ ಮಹತ್ವದ ನಿರ್ಧಾರ? ಸಚಿವ ತಂಗಡಗಿ ಕೊಟ್ಟ ಸುಳಿವೇನು?