ಬಳ್ಳಾರಿ: ಜವರಾಯನ ಅಟ್ಟಹಾಸ, ಮಸಣ ಸೇರಿದ ಮದುವೆಯಾಗಬೇಕಿದ್ದ ಜೋಡಿ

Suvarna News   | Asianet News
Published : Sep 10, 2021, 07:47 AM IST
ಬಳ್ಳಾರಿ: ಜವರಾಯನ ಅಟ್ಟಹಾಸ, ಮಸಣ ಸೇರಿದ ಮದುವೆಯಾಗಬೇಕಿದ್ದ ಜೋಡಿ

ಸಾರಾಂಶ

*  ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ರಾರಾವಿ ಬಳಿ ನಡೆದ ಘಟನೆ *  ಮಂತ್ರಾಲಯಕ್ಕೆ ತೆರಳಿದ್ದ ಜೋಡಿ  *  ಈ ಘಟನೆಯಿಂದ ಇಡೀ ಗ್ರಾಮವೇ ಕಣ್ಣಿರಿಟ್ಟಿದೆ  

ಬಳ್ಳಾರಿ(ಸೆ.10): ಮದುವೆಯಾಗಬೇಕಿದ್ದ ಜೋಡಿ ಅಪಘಾತಕ್ಕೀಡಾದ ಘಟನೆ ಜಿಲ್ಲೆಯ ಸಿರಗುಪ್ಪ ತಾಲೂಕಿನ ರಾರಾವಿ ಬಳಿ ನಿನ್ನೆ(ಗುರುವಾರ) ನಡೆದಿದೆ.  ವಿನಯ್ (28) ಹಾಗೂ ಸೌಜನ್ಯ(‌24) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.

ಕಳೆದ ವಾರವಷ್ಟೇ ಕುರುಗೋಡು ನಿವಾಸಿ ವಿನಯ್ ಹಾಗೂ ವೀರಾಪುರದ ಸೌಜನ್ಯ ಅವರ ನಿಶ್ಚಿತಾರ್ಥವಾಗಿತ್ತು. ನಿನ್ನೆ ಮಂತ್ರಾಲಯಕ್ಕೆ ತೆರಳಿದ್ದ ಜೋಡಿ ವಾಪಸ್ ಬರುವಾಗ ಈ ದುರ್ಘಟನೆ ಸಂಭವಿಸಿದೆ. 

7 ಜೀವ ಬಲಿಪಡೆದ ಅಪಘಾತ..ಪೊಲೀಸರ ಎಚ್ಚರಿಕೆ ಮಾತು ಕೇಳಲಿಲ್ಲ!

ರಾರಾವಿ ಬಳಿ ರೋಡ್ ಡಿವೈಡರ್‌ಗೆ ಕಾರ್ ಡಿಕ್ಕಿ ಹೊಡೆದು ಪರಿಣಾಮ ವಿನಯ್ ಹಾಗೂ ಸೌಜನ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಯಿಂದ ಇಡೀ ಗ್ರಾಮವೇ ಕಣ್ಣಿರಿಟ್ಟಿದೆ.  
 

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!