
ಕಡೂರು(ಡಿ.07): ವೇಗವಾಗಿ ಬರುತಿದ್ದ ಕಾರೊಂದು ಬೈಕಿಗೆ ಗುದ್ದಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಕಡೂರು ಸಮೀಪದ ಚಿಕ್ಕಪಟ್ಟಣಗೆರೆ ಗೇಟಿನ ಬಳಿ ನಡೆದಿದೆ
ಚಿಕ್ಕಗೌಜದ ಮನೋಜ್ (25) ಮತ್ತು ಪಾಂಡವಪುರದ ನಯನ (27) ಎಂಬುವರು ಮೃತಪಟ್ಟವರಾಗಿದ್ದಾರೆ, ಮಂಗಳವಾರ ರಾತ್ರಿ ಚಿಕ್ಕಮಗಳೂರಿನಲ್ಲಿ ಕೆಲಸ ಮುಗಿಸಿಕೊಂಡು ಮನೋಜ್ ತಮ್ಮ ಬೈಕಿನಲ್ಲಿ ಪಾಂಡವಪುರ ವಾಸಿ ನಯನ ಎಂಬುವರೊಂದಿಗೆ ಕಡೂರಿಗೆ ವಾಪಾಸ್ ಬರುತ್ತಿದ್ದರು, ಇತ್ತ ಕಡೂರು ಕಡೆಯಿಂದ ಬರುತ್ತಿದ್ದ ಮಾರುತಿ ಆಲ್ಟೊ ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬೈಕಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಮನೋಜ್ ಮತ್ತು ನಯನ ಬೈಕ್ ಸಮೇತ ಕಾರಿನ ಮೇಲೆ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದು, ನಯನ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಿಜಯಪುರ: ವಾಹನ ಪಲ್ಟಿ, ಕೂಲಿ ಕೆಲಸಕ್ಕೆ ತೆರಳುತ್ತಿದ್ದ ವಿದ್ಯಾರ್ಥಿನಿ ಸಾವು
ಕಾರಿನಲ್ಲಿದ್ದ ಪ್ರೀತಮ್ ಎಂಬುವವರಿಗೂ ಸಹ ಮುಖಕ್ಕೆ ಪೆಟ್ಟಾಗಿದೆ. ಚಿಕ್ಕಗೌಜದ ಮನೋಕ್‌ರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ಮನೋಜ್ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಸಬ್ಇನ್ಸ್‌ಪೆಕ್ಟರ್ ಧನಂಜಯ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.