ಹೂವಿನಹಿಪ್ಪರಗಿ ಕಡೆಯಿಂದ ಬಸವನಬಾಗೇವಾಡಿ ಕಡೆಗೆ ರಭಸವಾಗಿ ಬರುತ್ತಿದ್ದ ಕಬ್ಬು ತುಂಬಿದ ಲಾರಿ ಬಳಗಾನೂರ ಗ್ರಾಮದಲ್ಲಿ ಕೆಲಸ ಮುಗಿಸಿಕೊಂಡು ಬೈಕ್ ಮೇಲೆ ನಾಲ್ವರು ಪಟ್ಟಣದ ಕಡೆಗೆ ಹೊರಟಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಬಸವನಬಾಗೇವಾಡಿ(ಫೆ.22): ಲಾರಿ-ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಮೇಲಿದ್ದ ಇಬ್ಬರು ಸ್ಥಳದಲ್ಲೇ ಸಾವನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಪಟ್ಟಣದ ಬಸ್ ಡಿಪೋ ಹತ್ತಿರ ಮಂಗಳವಾರ ಸಂಜೆ ನಡೆದಿದೆ.
ಬಸವನಬಾಗೇವಾಡಿಯ ಶಿವಾನಂದ ಬಾಗೇವಾಡಿ (46) ಮೃತಪಟ್ಟಿದ್ದಾರೆ. ಮೃತ ಇನ್ನೊಬ್ಬರ ಹೆಸರು ತಿಳಿದು ಬಂದಿಲ್ಲ. ಗಂಭೀರವಾಗಿ ಗಾಯಗೊಂಡಿರುವ ಪರಶುರಾಮ ಉಕ್ಕಲಿ(35), ಅಂಬರೀಶ ಡೋಣೂರ. (34) ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.
ನಾಯಿಯನ್ನು ಉಳಿಸಲು ಹೋಗಿ ಜೀವ ಕಳೆದುಕೊಂಡ 28 ವರ್ಷದ ಯುವಕ
ಹೂವಿನಹಿಪ್ಪರಗಿ ಕಡೆಯಿಂದ ಬಸವನಬಾಗೇವಾಡಿ ಕಡೆಗೆ ರಭಸವಾಗಿ ಬರುತ್ತಿದ್ದ ಕಬ್ಬು ತುಂಬಿದ ಲಾರಿ ಬಳಗಾನೂರ ಗ್ರಾಮದಲ್ಲಿ ಕೆಲಸ ಮುಗಿಸಿಕೊಂಡು ಬೈಕ್ ಮೇಲೆ ನಾಲ್ವರು ಪಟ್ಟಣದ ಕಡೆಗೆ ಹೊರಟಿದ್ದ ವೇಳೆ ಈ ಘಟನೆ ಸಂಭವಿಸಿದೆ. ಲಾರಿ ಚಾಲಕ ಅಪಘಾತ ಸಂಭವಿಸಿದರೂ ಲಾರಿ ಚಲಾಯಿಸಿಕೊಂಡು ಹೋಗಿದ್ದಾನೆ. ನಂತರ ಸರ್ಕಾರಿ ಆಸ್ಪತ್ರೆಯ ಹತ್ತಿರ ಲಾರಿ ನಿಲ್ಲಿಸಿ ಚಾಲಕ ಪರಾರಿ ಆಗಿದ್ದಾನೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಕರುಣಕರಶೆಟ್ಟಿ, ಪಿಐ ಟಿ.ಐ. ಮಠಪತಿ ಭೇಟಿ ನೀಡಿ ಪರಿಶೀಲನೆ ಮಾಡಿದರು. ಪ್ರಕರಣ ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.