ಪುಟ್ಟರಾಜು, ಶಿವು ಮೃತರು| ಚಿಕ್ಕಮಗಳೂರಿನ ಆಲ್ದೂರು ವಲಯ ಅರಣ್ಯ ಹಾಗೂ ಹಾಸನ ಜಿಲ್ಲೆ ಬೇಲೂರಿನಲ್ಲಿ ಅನೆ ದಾಳಿ|
ಚಿಕ್ಕಮಗಳೂರು/ಹಾಸನ(ಮೇ.08): ರಾಜ್ಯದಲ್ಲಿ ಶುಕ್ರವಾರ ಸಂಭವಿಸಿದ ಪ್ರತ್ಯೇಕ ಘಟನೆಯಲ್ಲಿ ಆನೆ ದಾಳಿಯಲ್ಲಿ ಅರಣ್ಯ ರಕ್ಷಕ ಸೇರಿ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ಚಿಕ್ಕಮಗಳೂರಿನ ಆಲ್ದೂರು ವಲಯ ಅರಣ್ಯ ರಕ್ಷಕ ಪುಟ್ಟರಾಜು, ಹಾಸನ ಜಿಲ್ಲೆ ಬೇಲೂರಿನಲ್ಲಿ ಕೂಲಿಕಾರ್ಮಿಕ ಶಿವು(ಮೃತರು). ಪುಟ್ಟರಾಜು ಆಲ್ದೂರು ವಲಯದಲ್ಲಿ ಅರಣ್ಯ ರಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಇಲ್ಲಿಗೆ ಸಮೀಪದ ಕೆಳಗೂರು ಗ್ರಾಮದ ಬಳಿ ಕಾಡಾನೆ ಓಡಿಸುವ ವೇಳೆ ಎಡವಿಬಿದ್ದ ಪುಟ್ಟರಾಜು ಅವರನ್ನು ಆನೆ ತುಳಿದು ಹೋಗಿದೆ.
ಸಫಾರಿ ಹೋದ ಪ್ರವಾಸಿಗರಿಗೆ ಡಬಲ್ ಎಲಿಫೆಂಟ್ ಆಟ್ಯಾಕ್!
ಗಂಭೀರವಾಗಿ ಗಾಯಗೊಂಡ ಅವರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಇನ್ನು ಬೇಲೂರಿನ ಉದಯವಾರ ಗ್ರಾಮದ ಕಾಫಿ ತೋಟದಲ್ಲಿ ಕೆಲಸ ಮಾಡುವ ವೇಳೆ ಶಿವ ಮೇಲೆ ಆನೆ ದಾಳಿ ನಡೆಸಿದೆ.