ಗಂಗಾವತಿ: ಆಸ್ಪತ್ರೆಯಿಂದ ಹೊರಬಂದ ತಕ್ಷಣ ಮದ್ಯ ಸೇವಿಸಿ ಕುಸಿದು ಬಿದ್ದ!

Kannadaprabha News   | Asianet News
Published : May 08, 2021, 09:18 AM IST
ಗಂಗಾವತಿ: ಆಸ್ಪತ್ರೆಯಿಂದ ಹೊರಬಂದ ತಕ್ಷಣ ಮದ್ಯ ಸೇವಿಸಿ ಕುಸಿದು ಬಿದ್ದ!

ಸಾರಾಂಶ

ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ನಡೆದ ಘಟನೆ| ಎಣ್ಣೆಯೇಟಿಗೆ ರಸ್ತೆಯಲ್ಲೇ ಕುಸಿದು ಬಿದ್ದ| ಸುದ್ದಿ ತಿಳಿಯುತ್ತಲೇ ಆ್ಯಂಬುಲೆನ್ಸ್‌ ಮೂಲಕ ಗ್ರಾಮಕ್ಕೆ ಕಳಿಸಿಕೊಟ್ಟ ಆಸ್ಪತ್ರೆಯ ಸಿಬ್ಬಂದಿ| 

ಗಂಗಾವತಿ(ಮೇ.08): ಕೊವೀಡ್‌ ಸೊಂಕಿತ ವ್ಯಕ್ತಿ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ ತಕ್ಷಣ ಮದ್ಯಪಾನ ಮಾಡಿ ರಸ್ತೆಯಲ್ಲಿ ಕುಸಿದು ಬಿದ್ದ ಘಟನೆ ಗುರುವಾರ ಸಂಜೆ ಸಂಭವಿಸಿದೆ. 

ಭಟ್ಟರು ಹಂಚಿನಾಳ ಗ್ರಾಮದ 35 ವರ್ಷದ ವ್ಯಕ್ತಿಗೆ 4 ದಿನಗಳ ಹಿಂದೆ ಕೋವಿಡ್‌ ಸೋಂಕು ತಗಲಿತ್ತು. ಈ ವ್ಯಕ್ತಿಯನ್ನು ಆನೆಗೊಂದಿ ರಸ್ತೆಯಲ್ಲಿರುವ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

"

ಕೊಪ್ಪಳದಲ್ಲಿ ವೈರಸ್‌ ಅಟ್ಟಹಾಸ: ಕೊರೋನಾ ಸಂಕಷ್ಟಕ್ಕೆ ಮಿಡಿದ ಗವಿಸಿದ್ಧೇಶ್ವರ ಶ್ರೀ

ಗುರುವಾರ ಸಂಜೆ ಗುಣಮುಖರಾಗಿದ್ದರಿಂದ ಬಿಡುಗಡೆ ಮಾಡಲಾಗಿತ್ತು. ನಂತರ ನೇರವಾಗಿ ಆಸ್ಪತ್ರೆಯ ಪಕ್ಕದಲ್ಲಿರುವ ಬಾರ್‌ಗೆ ತೆರಳಿದ ವ್ಯಕ್ತಿ ಅಲ್ಲಿ ಮದ್ಯಪಾನ ಮಾಡಿ ರಸ್ತೆಯಲ್ಲಿ ಕುಸಿದು ಬಿದ್ದಿದ್ದಾನೆ. ಸುದ್ದಿ ತಿಳಿಯುತ್ತಲೇ ಆಸ್ಪತ್ರೆಯ ಸಿಬ್ಬಂದಿ ಆ್ಯಂಬುಲೆನ್ಸ್‌ ಮೂಲಕ ಭಟ್ಟರ ಹಂಚಿನಾಳ ಗ್ರಾಮಕ್ಕೆ ಕಳಿಸಿಕೊಟ್ಟಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV
click me!

Recommended Stories

ಬಟ್ಟೆ ತೊಳೆಯಲು ಹೋದ ನಾಲ್ವರು ನೀರು ಪಾಲು, ಅರೆಬಿಳಚಿ ಭದ್ರಾ ನಾಲೆಯಲ್ಲಿ ದುರ್ಘಟನೆ
ಭಟ್ಕಳ: ಸಂಭ್ರಮದಿಂದ‌‌ ನಡೆದ ಶ್ರೀ ಜಟಗಾ ಮಹಾಸತಿ ದೇವಿ ಜಾತ್ರೆ