ರಾಮನಗರ: ಬೈಕ್‌ಗೆ ಕಾರು ಡಿಕ್ಕಿ, ಇಬ್ಬರು ಸಾವು

By Kannadaprabha News  |  First Published Nov 18, 2023, 9:15 PM IST

ಸೋಲೂರು ಮಾರ್ಗವಾಗಿ ಕುಣಿಗಲ್ ಕಡೆಗೆ ಹೋಗುವಾಗ ನಾರಸಂದ್ರದ ಸೇತುವೆ ಬಳಿ ಬೆಂಗಳೂರು ಕಡೆಯಿಂದ ಅತಿವೇಗವಾಗಿ ಬಂದ ಇನ್ನೋವಾ ಕಾರು ಮೊದಲು ಗಂಗಾಧರಯ್ಯನವರ ಬೈಕಿಗೆ ಡಿಕ್ಕಿ ಹೊಡೆದಿದೆ. ಆನಂತರ ರಜೀಕ್ ಪಾಷಾ ಬೈಕಿಗೆ ಗುದ್ದಿದೆ. ಚಾಲಕ ಕಾರಿನೊಂದಿಗೆ ಪರಾರಿಯಾಗಿದ್ದಾನೆ. 


ಕುದೂರು(ನ.18):  ಕಾರೊಂದು ಎರಡು ಬೈಕ್ ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮರೂರು ಹ್ಯಾಂಡ್‌ಪೋಸ್ಟ್ ಬಳಿ ನಡೆದಿದೆ. ತಿಪ್ಪಸಂದ್ರ ಹೋಬಳಿ ಸಿಂಗ್ರೀಗೌಡನಪಾಳ್ಯದ ಗಂಗಾಧರಯ್ಯ (45) ಮತ್ತು ಕುಣಿಗಲ್ ನಿವಾಸಿ ರಜೀಕ್ ಪಾಷಾ(34) ಮೃತರು.

ಸೋಲೂರು ಮಾರ್ಗವಾಗಿ ಕುಣಿಗಲ್ ಕಡೆಗೆ ಹೋಗುವಾಗ ನಾರಸಂದ್ರದ ಸೇತುವೆ ಬಳಿ ಬೆಂಗಳೂರು ಕಡೆಯಿಂದ ಅತಿವೇಗವಾಗಿ ಬಂದ (ಕೆಎ 35 , ಎನ್ 4289) ಇನ್ನೋವಾ ಕಾರು ಮೊದಲು ಗಂಗಾಧರಯ್ಯನವರ ಬೈಕಿಗೆ ಡಿಕ್ಕಿ ಹೊಡೆದಿದೆ. ಆನಂತರ ರಜೀಕ್ ಪಾಷಾ ಬೈಕಿಗೆ ಗುದ್ದಿದೆ. ಚಾಲಕ ಕಾರಿನೊಂದಿಗೆ ಪರಾರಿಯಾಗಿದ್ದಾನೆ. 

Tap to resize

Latest Videos

TVS Excelಗೆ ಹಿಂದಿನಿಂದ ಬಸ್‌ ಡಿಕ್ಕಿ: ಬಸ್‌ ಚಕ್ರ ಹರಿದು ಮಹಿಳೆ ಸಾವು

ಕಾರು ಡಿಕ್ಕಿ ಹೊಡೆದ ರಭಸಕ್ಕೆ ಗಂಗಾಧರಯ್ಯ ರಸ್ತೆ ಪಕ್ಕದ ಕಂಬಕ್ಕೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದರು. ರಜೀಕ್ ಪಾಷಾ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಕುಣಿಗಲ್ ಗೆ ಕರೆದೊಯ್ಯುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಕುದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!