ತೆಲಂಗಾಣದ ಜಹಿರಾಬಾದ ನಗರಕ್ಕೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ನಡೆದ ದುರ್ಘಟನೆ| ಆಟೋ ಚಾಲಕರಾಗಿದ್ದ ಮೃತರು| ಇಬ್ಬರು ಗೆಳೆಯರ ಸಾವಿನಿಂದಗಿ ಇಡೀ ತಾಂಡಾದ ಜನರೇ ರೋಧನ ಮುಗಿಲುಮುಟ್ಟಿತ್ತು|
ಚಿಂಚೋಳಿ(ಮಾ.31): ತೆಲಂಗಾಣ ಗಡಿಭಾಗದ ಮೊಗಡಂಪಳ್ಳಿ(ಮೋತಿಯಾಡಿ)ದೇವಸ್ಥಾನ ರಸ್ತೆ ಮಾರ್ಗದಲ್ಲಿ ಕಾರು ಅಪಘಾತದಲ್ಲಿ ಚಿಂಚೋಳಿ ತಾಲೂಕಿನ ಕಲಭಾವಿ ತಾಂಡಾದ ಇಬ್ಬರು ಯುವಕರು ಸ್ಥಳದಲ್ಲಿಯೇ ಸಾವನಪ್ಪಿದ ಘಟನೆ ನಡೆದಿದೆ.
ತಾಲೂಕಿನ ಕಲಭಾವಿ ತಾಂಡಾದ ಗೆಳೆಯರಾದ ಚೇತನ ಧರ್ಮು ಜಾಧವ್(21) ಆನಂದ ರೂಪಸಿಂಗ ಜಾಧವ್(21)ಮೃತಪಟ್ಟವರು. ನೆರೆಯ ತೆಲಂಗಾಣದ ಜಹಿರಾಬಾದ ನಗರಕ್ಕೆ ಕಾರಿನಲ್ಲಿ ಇಬ್ಬರು ತೆರಳುತ್ತಿದ್ದಾಗ ಮೊಗಡಂಪಳ್ಳಿ (ಮೋತಿಯಾಡಿ) ರಸ್ತೆ ಮಾರ್ಗದಲ್ಲಿ ಕಾರು ಪಲ್ಟಿಯಾದ ಪರಿಣಾಮವಾಗಿ ಇಬ್ಬರು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಇಬ್ಬರು ಅಟೋ ಚಾಲಕರಾಗಿದ್ದರು.
ಚಿಂಚೋಳಿ: ಶವಸಂಸ್ಕಾರಕ್ಕೆ ಹೊರಟಿದ್ದ ಟ್ರ್ಯಾಕ್ಟರ್ ಪಲ್ಟಿ, ಓರ್ವ ಮಹಿಳೆ ಸಾವು, 18 ಮಂದಿಗೆ ಗಾಯ
ಇಬ್ಬರು ಗೆಳೆಯರು ಸಾವಿನಲ್ಲಿ ಒಂದಾಗಿರುವುದಕ್ಕಾಗಿ ಇಡೀ ತಾಂಡಾದ ಜನರೇ ರೋಧನ ಮುಗಿಲುಮುಟ್ಟಿತ್ತು. ಅಶೋಕ ಚವ್ಹಾಣ,ಗೋಪಾಲ ಜಾಧವ್, ರಾಜು ಪವಾರ, ರಾಮಶೆಟ್ಟಿ ಪವಾರ, ಶಿವರಾಮ ನಾಯಕ, ಸಂತೋಷ ಮಾಳಾಪೂರ, ಜಗದೀಶಸಿಂಗ ಠಾಕೂರ, ಭೀಮರಾವ ರಾಠೋಡ್, ಮೇಘರಾಜ ರಾಠೋಡ,ನಾಯಕ ಪ್ರಮುಖರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.