ಮೈಸೂರು ದಸರಾ ಜಂಬೂಸವಾರಿಗೆ ಈ ವರ್ಷ 2 ಹೊಸ ಆನೆ

Published : Aug 18, 2019, 12:38 PM ISTUpdated : Aug 18, 2019, 12:43 PM IST
ಮೈಸೂರು ದಸರಾ ಜಂಬೂಸವಾರಿಗೆ ಈ ವರ್ಷ 2 ಹೊಸ ಆನೆ

ಸಾರಾಂಶ

ಈ ವರ್ಷದ ದಸರಾ ಗಜಪಡೆಗೆ ಎರಡು ಹೊಸ ಆನೆಗಳು ಸೇರ್ಪಡೆಯಾಗಿವೆ. ಈ ಬಾರಿಯ ಜಂಬೂ ಸವಾರಿಯಲ್ಲಿ ಈ ಆನೆಗಳು ಉಳಿದ ಆನೆಗಳ ಜೊತೆಗೆ ಹೆಜ್ಜೆ ಹಾಕಲಿವೆ. 

ಮೈಸೂರು [ಆ.18]: ಈ ವರ್ಷದ ದಸರಾ ಗಜಪಡೆಗೆ ಎರಡು ಹೊಸ ಆನೆಗಳು ಸೇರ್ಪಡೆಯಾಗಿವೆ. ಈಶ್ವರ ಮತ್ತು ಜಯಪ್ರಕಾಶ್‌ ಎಂಬ ಹೆಸರಿನ ಹೊಸ ಆನೆಗಳು ಜಂಬೂ ಸವಾರಿಯಲ್ಲಿ ರಾಜ ಗಾಂಭೀರ್ಯದಿಂದ ಹೆಜ್ಜೆ ಹಾಕಲು ಸಜ್ಜಾಗಿವೆ. 

ಈಶ್ವರನಿಗೆ 49 ವರ್ಷವಾಗಿದ್ದು, ದುಬಾರೆ ಆನೆ ಶಿಬಿರದಲ್ಲಿ ಆಶ್ರಯ ಪಡೆದಿದ್ದಾನೆ. 57 ವರ್ಷದ ಜಯಪ್ರಕಾಶ್‌, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಆನೆ ಶಿಬಿರದಲ್ಲಿ (ಮೇಲುಕಾಮನ ಹಳ್ಳಿ)ದಿಂದ ಆಗಮಿಸಲಿದ್ದಾನೆ.

 ಇನ್ನು 12 ಆನೆಗಳ ಪೈಕಿ ಯಾವುದಕ್ಕಾದರೂ ಸಮಸ್ಯೆ ಉಂಟಾದರೆ ಹೆಚ್ಚುವರಿಯಾಗಿ ಆಯ್ಕೆಯಾಗಿರುವ ಲಕ್ಷ್ಮಿ ಹಾಗೂ ರೋಹಿತ್‌ ದಸರಾ ಗಜಪಡೆ ಸೇರಿಕೊಳ್ಳಲಿದ್ದಾರೆ. ಇನ್ನು ಕಳೆದ ವರ್ಷ ದಸರೆಯಲ್ಲಿ ಪಾಲ್ಗೊಂಡಿದ್ದ ಪ್ರಶಾಂತ, ದ್ರೋಣ ಮತ್ತು ಚೈತ್ರಾ ಆನೆಗಳು ಈ ಬಾರಿ ಗಜಪಡೆಯಲ್ಲಿ ಸ್ಥಾನ ಪಡೆದಿಲ್ಲ.

PREV
click me!

Recommended Stories

ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!
Uttara Kannada: ಆಸ್ಪತ್ರೆಗೆ ಹೋಗಿದ್ದ ಗರ್ಭಿಣಿ ಹುಟ್ಟುಹಬ್ಬದಂದೇ ಸಾವು; ಹೊಟ್ಟೆಯಲ್ಲೇ ಅಸುನೀಗದ ಮಗು!