ಕಲಬುರಗಿ: ಮತ್ತೆ ಇಬ್ಬರನ್ನು ಬಲಿ ಪಡೆದ ಡೆಡ್ಲಿ ಕೊರೋನಾ, ಆತಂಕದಲ್ಲಿ ಜನತೆ

Kannadaprabha News   | Asianet News
Published : Jun 25, 2020, 10:50 AM ISTUpdated : Jun 25, 2020, 11:17 AM IST
ಕಲಬುರಗಿ: ಮತ್ತೆ ಇಬ್ಬರನ್ನು ಬಲಿ ಪಡೆದ ಡೆಡ್ಲಿ ಕೊರೋನಾ, ಆತಂಕದಲ್ಲಿ ಜನತೆ

ಸಾರಾಂಶ

ಇಬ್ಬರ ಸಾವಿನಿಂದ ಕಲಬುರಗಿ ಜಿಲ್ಲೆಯಲ್ಲಿ ಕೊರೋನಾದಿಂದ ಸಾವನ್ನಪ್ಪಿದವರ ಸಂಖ್ಯೆ 13ಕ್ಕೆ ಏರಿಕೆ| ಜಿಲ್ಲೆಯಲ್ಲಿ ಬುಧವಾರ 22 ಜನರಿಗೆ ಸೋಂಕು ದೃಢ| ಈ ಪೈಕಿ ಆರು ಮಕ್ಕಳು, 8 ಮಹಿಳೆಯರು, 8 ಪುರುಷರಲ್ಲಿ ಸೋಂಕು| ಅದರಲ್ಲಿ ಆರು ಸೋಂಕಿತರ ಟ್ರಾವೆಲ್‌ ಹಿಸ್ಟರಿ ಇನ್ನೂ ಸಿಕ್ಕಿಲ್ಲ|  

ಕಲಬುರಗಿ(ಜೂ.25): ಜಿಲ್ಲೆಯಲ್ಲಿ ಕೊರೋನಾ ಹೆಮ್ಮಾರಿ ಅಬ್ಬರ ಹೆಚ್ಚಿದ್ದು ಬುಧವಾರ 22 ಮಂದಿಗೆ ಸೋಂಕು ತಗುಲಿದ್ದಲ್ಲದೆ ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ಸಾವನ್ನಪ್ಪಿದ 78 ವರ್ಷದ ವೃದ್ಧ ಹಾಗೂ 55 ವರ್ಷದ ವ್ಯಕ್ತಿ ಇಬ್ಬರೂ ಕೆಮ್ಮು, ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. 

ಈ ಇಬ್ಬರ ಸಾವಿನಿಂದ ಜಿಲ್ಲೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇಂದು 22 ಜನರಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ ಆರು ಮಕ್ಕಳು, 8 ಮಹಿಳೆಯರು, 8 ಪುರುಷರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅದರಲ್ಲಿ ಆರು ಸೋಂಕಿತರ ಟ್ರಾವೆಲ್‌ ಹಿಸ್ಟರಿ ಇನ್ನೂ ಸಿಕ್ಕಿಲ್ಲ. 

ಕಲಬುರಗಿ: ಬಾಲಕಿ ಮೇಲೆ ರೇಪ್‌ ಮಾಡಿದ್ದ ಕಾಮುಕನ ಬಿಡದ ಕೊರೋನಾ..!

ಇಬ್ಬರು ಕಂಟೈನ್‌ಮೆಂಟ್‌ ಝೋನ್‌ನಲ್ಲಿದ್ದವರಾದರೆ, ಓರ್ವ ತೆಲಂಗಾಣದಿಂದ ವಾಪಸಾದ ವಲಸಿಗ ಹಾಗೂ ಉಳಿದವರು ಮಹಾರಾಷ್ಟ್ರದಿಂದ ವಾಪಸಾದ ವಲಸಿಗರಾಗಿದ್ದಾರೆ. ಇದರೊಂದಿಗೆ ಜಿಲ್ಲೆಯ ಸೋಂಕಿತರ ಸಂಖ್ಯಾಬಲ 1254ಕ್ಕೆ ಏರಿದೆ. ಜಿಲ್ಲೆಯಲ್ಲಿ ಮತ್ತೆ 50 ಜನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ. 
 

PREV
click me!

Recommended Stories

ದಾವಣಗೆರೆ: ಶಾಸಕ ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಕಲಾಪ ಮುಂದಕ್ಕೆ ಇದೇ ಮೊದಲು
Online Engagement: ವರನಿಗೆ ರಜೆ ಸಿಗದ ಕಾರಣ ವಿಡಿಯೋ ಮೂಲಕ ಅದ್ಧೂರಿ ನಿಶ್ಚಿತಾರ್ಥ! ಫೋಟೋ ಇಲ್ಲಿವೆ ನೋಡಿ