ತುಮಕೂರು: ರೈತರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆಗಳು ಬೋನಿಗೆ

By Kannadaprabha News  |  First Published Sep 26, 2019, 2:10 PM IST

ಆಹಾರಕ್ಕಾಗಿ ಕಾಡಿನಿಂದ ನಾಡಿಗೆ ಬರುತ್ತಿದ್ದ ಎರಡು ಚಿರತೆಗಳು ಬೋನಿಗೆ ಬಿದ್ದಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಕೊರಟಗೆರೆ ತಾಲೂಕಿನಲ್ಲಿ ಗೌರಗಾನಹಳ್ಳಿ ಗ್ರಾಮದ ರೈತನ ತೋಟದಲ್ಲಿ ಇಡಲಾಗಿದ್ದ ಅರಣ್ಯ ಇಲಾಖೆಯ ಬೋನಿಗೆ ಸೋಮವಾರ ತಡರಾತ್ರಿ ಬಿದ್ದಿದೆ. ಓಬಳದೇವರಹಳ್ಳಿ ಬೆಟ್ಟದ ಸಮೀಪ ಬೋನಿಗೆ ಬಿದ್ದ ಚಿರತೆ ನೋಡಲು ಮತ್ತು ಮೊಬೈಲ್‌ನಲ್ಲಿ ಚಿರತೆ ಚಿತ್ರ ಸೆರೆ ಹಿಡಿಯಲು ಹರಸಾಹಸ ಪಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.


ತುಮಕೂರು(ಸೆ. 26): ಕೊರಟಗೆರೆ ಆಹಾರಕ್ಕಾಗಿ ಕಾಡಿನಿಂದ ನಾಡಿಗೆ ಬಂದು ರೈತರಲ್ಲಿ ಆತಂಕ ಮೂಡಿಸಿದ್ದ ಚಿರತೆಗಳು ರೈತರ ಜಮೀನಿನ ಹತ್ತಿರ ಪ್ರತ್ಯೇಕವಾಗಿ ಅರಣ್ಯ ಇಲಾಖೆ ಇಟ್ಟಿದ್ದ ಎರಡು ಬೋನಿಗೆ ಮಂಗಳವಾರ ಮತ್ತು ಬುಧವಾರ ಬಿದ್ದಿವೆ.

ತಾಲೂಕಿನ ಹುಲೀಕುಂಟೆ ಗ್ರಾಪಂ ವ್ಯಾಪ್ತಿಯ ಗೌರಗಾನಹಳ್ಳಿ ಗ್ರಾಮದ ರೈತನ ತೋಟದಲ್ಲಿ ಇಡಲಾಗಿದ್ದ ಅರಣ್ಯ ಇಲಾಖೆಯ ಬೋನಿಗೆ ಸೋಮವಾರ ತಡರಾತ್ರಿ ಬಿದ್ದಿದೆ. ಬೋನಿಗೆ ಬಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಂಗಳವಾರ ಮುಂಜಾನೆ ಮತ್ತೊಂದು ಅರಣ್ಯಕ್ಕೆ ರವಾನಿಸಿದ್ದಾರೆ.

Tap to resize

Latest Videos

undefined

ಮತ್ತೊಂದು ಪ್ರಕರಣ:

ಹುಲೀಕುಂಟೆ ಗ್ರಾಪಂ ವ್ಯಾಪ್ತಿಯ ಓಬಳದೇವರಹಳ್ಳಿ ತಾಂಡದ ಬೆಟ್ಟದ ಕೆಳಗೆ ಅರಣ್ಯ ಇಲಾಖೆ ಇಟ್ಟಿದ್ದ ಮತ್ತೊಂದು ಬೋನಿಗೆ ಮಂಗಳವಾರ ರಾತ್ರಿ ಮತ್ತೊಂದು ಚಿರತೆ ಬಿದ್ದಿದೆ. ಅದನ್ನು ಸಹ ಅರಣ್ಯ ಇಲಾಖೆ ಬುಧವಾರ ಮುಂಜಾನೆ ಸೆರೆಹಿಡಿದು ಮತ್ತೊಂದು ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರೆ.

ಚಿತ್ರ ಸೆರೆಯಿಡಿಯಲು ಮುಗಿಬಿದ್ದ ಜನ:

ಓಬಳದೇವರಹಳ್ಳಿ ಬೆಟ್ಟದ ಸಮೀಪ ಬೋನಿಗೆ ಬಿದ್ದ ಚಿರತೆ ನೋಡಲು ಮತ್ತು ಮೊಬೈಲ್‌ನಲ್ಲಿ ಚಿರತೆ ಚಿತ್ರ ಸೆರೆ ಹಿಡಿಯಲು ಹರಸಾಹಸ ಪಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಈ ವೇಳೆ ಸಾರ್ವಜನಿಕರು ಚಿರತೆಯ ಮುಖಕ್ಕೆ ಕಡ್ಡಿಯಿಂದ ತಿವಿದು ಗಾಯಗೊಳಿಸಿ ಗಾಬರಿಗೊಳಿಸಿ ನಂತರ ಅದರ ಹೊಟ್ಟೆಯ ಭಾಗಕ್ಕೂ ಸಹ ನೋವುಂಟು ಮಾಡಿದ್ದಾರೆ. ಬೋನಿನಲ್ಲಿದ್ದ ಚಿರತೆಯ ಮೇಲೆ ಕೂಗಾಡುತ್ತಾ ಚಿರತೆಗೆ ಸಾಕಾಷ್ಟುಆಯಾಸ ಉಂಟು ಮಾಡುವುದರ ಜೊತೆ ಅರಣ್ಯ ಇಲಾಖೆ ಸಿಬ್ಬಂದಿ ಮೇಲೂ ದರ್ಪ ಮೆರೆದಿದ್ದಾರೆ ಎನ್ನಲಾಗಿದೆ.

ಸಿಬ್ಬಂದಿ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದನೆ:

ಚಿರತೆಯ ರಕ್ಷಣೆ ಮತ್ತು ರವಾನಿಸಲು ಬಂದ ಅರಣ್ಯ ಮತ್ತು ಪೊಲೀಸ್‌ ಇಲಾಖೆ ಸಿಬ್ಬಂದಿ ಮೇಲು ಸಹ ಚಿರತೆ ನೋಡಲು ಆಗಮಿಸಿದ ಸಾರ್ವಜನಿಕರು ಅವಾಚ್ಯ ಶಬ್ದಗಳಿಂದ ನಿಂದಿಸಿ ನಿಮಗೆ ಬರಲು ಹೇಳಿದವರು ಯಾರು. ಚಿರತೆ ಬೋನಿಗೆ ಬಿದ್ದ ಮೇಲೆ ಯಾಕೆ ಬರುತ್ತೀರಿ. ನಾವೇ ಕಾಡಿಗೆ ಬಿಟ್ಟು ಬರುತ್ತೇವೆ ಎಂದು ದರ್ಪದ ಮಾತುಗನ್ನಾಡಿದ್ದಾರೆ ಎಂದು ತಿಳಿದು ಬಂದಿದೆ.

'ಬಿಎಸ್‌ವೈಗೆ ಅಮಿತ್ ಶಾ ಅವರ ಕಣ್ಣು ನೋಡುವ ಧೈರ್ಯವಿಲ್ಲ'..!

ಸಿಪಿಐ ನದಾಪ್‌ ಮತ್ತು ಅರಣ್ಯ ಇಲಾಖೆಯ ಸತೀಶ್ಚಂದ್ರ ಸ್ಥಳಕ್ಕೆ ಆಗಮಿಸಿ ಸ್ಥಳೀಯರನ್ನು ನಿಯಂತ್ರಿಸಲು ಹರಸಾಹಸಪಟ್ಟರೂ ಸಾರ್ವಜನಿಕರು ಮೊಬೈಲ್‌ನಲ್ಲಿ ಚಿತ್ರ ಸೆರೆ ಹಿಡಿಯಲು ಮುಂದಾಗಿ ನೂಕುನುಗ್ಗಲು ಉಂಟಾಗಿದೆ. ಕೊನೆಗೆ ಹರಸಾಹಸ ಪಟ್ಟು ಚಿರತೆ ಕಾಡಿಗೆ ರವಾನಿಸುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ತುಮಕೂರು: ಅಪಾಯದ ಮಟ್ಟ ಮೀರಿದೆ ಕುಡಿಯೋ ನೀರಿನ ಫ್ಲೋರೈಡ್ ಅಂಶ..!

click me!