ಶಿವಮೊಗ್ಗ ಜಿಲ್ಲೆಯ ಸಿಗಂಧೂರು ಹಿನ್ನೀರಿನಲ್ಲಿ ಎರಡು ಲಾಂಚುಗಳು ಪರಸ್ಪರ ಡಿಕ್ಕಿಯಾಗಿದೆ. ಈ ವೇಳೆ ಎರಡು ಲಾಂಚುಗಳಲ್ಲಿ 500ಕ್ಕೂ ಪ್ರಯಾಣಿಕರು ಅದೃಷ್ಟವಶಾತ್ ಪಾರಾಗಿದ್ದಾರೆ.
ಶಿವಮೊಗ್ಗ [ಸೆ.11]: ಶರಾವತಿ ಹಿನ್ನೀರಿನಲ್ಲಿ ಚಲಿಸುತ್ತಿದ್ದ ಎರಡು ಲಾಂಚ್‌ಗಳು ಪರಸ್ಪರ ಡಿಕ್ಕಿಯಾದ ಘಟನೆ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಾಗರ ಹಾಗೂ ಸಿಗಂಧೂರಿಗೆ ತೆರಳುವ ಶರಾವತಿ ಹಿನ್ನೀರಿನಲ್ಲಿ ಇಂದು ಬೆಳಗ್ಗೆ ಈ ಘಟನೆ ನಡೆದಿದ್ದು, ಭಾರೀ ಅವಘಡವೊಂದು ತಪ್ಪಿದೆ.
ಎರಡು ಲಾಂಚುಗಳಲ್ಲಿ 500ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು. ನೀರಿನ ಮಧ್ಯಕ್ಕೆ ತೆರಳಿದ ವೇಳೆ ಡಿಕ್ಕಿಯಾಗಿದ್ದು, ಎಲ್ಲಾ ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಲಾಂಚುಗಳು ಡಿಕ್ಕಿಯಾಗಲು ಚಾಲಕನ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದ್ದು, ಚಾಲಕನ ವಿರುದ್ಧ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ.