ಏಷ್ಯಾನೆಟ್ ಸುವರ್ಣ ನ್ಯೂಸ್ ಫಲಶ್ರುತಿ, ನಾಳೆಯಿಂದ ಕಾರವಾರದ ಟನಲ್ ಬಂದ್

By Girish Goudar  |  First Published Jul 8, 2023, 11:15 PM IST

ಐಆರ್‌ಬಿ ಹಾಗೂ ಎನ್‌ಎಚ್‌ಎಐ ಅಧಿಕಾರಿಗಳಿಗೆ ಸಚಿವ ಮಂಕಾಳು ವೈದ್ಯ ಹಾಗೂ ಕಾರವಾರ- ಅಂಕೋಲಾ ಶಾಸಕ ಸತೀಶ್ ಸೈಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಲ್ಲದೇ, ಫಿಟ್‌ನೆಸ್ ಸರ್ಟಿಫಿಕೇಟ್ ನೀಡುವವರೆಗೆ ಟನೆಲ್ ಬಂದ್ ಮಾಡಲು ಸೂಚಿಸಿದ ಉಸ್ತುವಾರಿ ಸಚಿವ ಮಾಂಕಾಳು ವೈದ್ಯ 


ಕಾರವಾರ(ಜು.08): ಉತ್ತರಕನ್ನರ ಜಿಲ್ಲೆಯ ಕಾರವಾರದ ಲಂಡನ್ ಬ್ರಿಡ್ಜ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿರ್ಮಾಣ ಮಾಡಲಾಗಿರುವ ಟನಲ್‌ಗಳಲ್ಲಿ ಮಳೆ ನೀರು ಸೋರಿಕೆಯಾಗ್ತಿರುವ ಹಿನ್ನೆಲೆ ಟನಲ್‌ನಲ್ಲಿ ಸಂಚಾರವನ್ನೇ ಬಂದ್ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ತಿಳಿಸಿದ್ದಾರೆ. 

ಟನಲ್ ಒಳಗೆ ಕ್ಯಾವಿಟಿ ತೆರೆದು ಮಳೆ ನೀರು ಸೋರಿಕೆಯಾಗ್ತಿರುವ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ವಿಸ್ತೃತ ವರದಿ ಮಾಡಿತ್ತು. ಈ ವಿಚಾರ ಇಂದು(ಶನಿವಾರ) ಮಳೆ ಹಾನಿ ಸಂಬಂಧ ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪ್ರಸ್ತಾಪವಾಗಿದ್ದು, ಐಆರ್‌ಬಿ ಹಾಗೂ ಎನ್‌ಎಚ್‌ಎಐ ಅಧಿಕಾರಿಗಳಿಗೆ ಸಚಿವ ಮಂಕಾಳು ವೈದ್ಯ ಹಾಗೂ ಕಾರವಾರ- ಅಂಕೋಲಾ ಶಾಸಕ ಸತೀಶ್ ಸೈಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಲ್ಲದೇ, ಫಿಟ್‌ನೆಸ್ ಸರ್ಟಿಫಿಕೇಟ್ ನೀಡುವವರೆಗೆ ಟನೆಲ್ ಬಂದ್ ಮಾಡಲು ಉಸ್ತುವಾರಿ ಸಚಿವ ಮಾಂಕಾಳು ವೈದ್ಯ ಸೂಚಿಸಿದ್ದಾರೆ.

Tap to resize

Latest Videos

undefined

ಆಕಸ್ಮಿಕವಾಗಿ ದೇಹ ಸೇರಿದ ಅಪಾಯಕಾರಿ ಕಳೆನಾಶಕ, ಅರಣ್ಯಾಧಿಕಾರಿ ಸಾವು!

ರಾಷ್ಟ್ರೀಯ ಹೆದ್ದಾರಿ 66ರ ಕಾರವಾರದ ಲಂಡನ್ ಬ್ರಿಡ್ಜ್ ಬಳಿ ಬಿಣಗಾ ಸಂಪರ್ಕಿಸಲು ಹಾಗೂ ಪ್ರಯಾಣದ ಸಮಯವನ್ನು ಸುಮಾರು 3-4 ಕಿ.ಮೀ.‌‌ಕಡಿಮೆ ಮಾಡಲು ಎರಡು ಟನಲ್ ನಿರ್ಮಾಣ ಮಾಡಲಾಗಿದೆ‌. ಒಂದು ಟನೆಲ್ ಕಳೆದ ವರ್ಷ ಉದ್ಘಾಟನೆಯಾಗಿದ್ರೆ, ಇನ್ನೊಂದು ಟನಲ್ ಈ ವರ್ಷ ಪ್ರಯಾಣಕ್ಕೆ ತೆರೆದುಕೊಂಡಿತ್ತು. ಆದರೆ, ಇನ್ನೇನು ಮಳೆಗಾಲ ಆರಂಭವಾಗುತ್ತಲೇ ಈ ಟನಲ್‌ಗಳ ಒಳಗೆ ನೀರು ಸೋರಿಕೆಯಾಗಲಾರಂಭಿಸಿದೆ. 

ಗುಡ್ಡದ ಮೇಲ್ಭಾಗದ ಮಳೆ ನೀರು ಟನಲ್ ಒಳಗೆ ಅಲ್ಲಲ್ಲಿ ಸೋರಿಕೆಯಾಗ್ತಿದ್ದು, ಪ್ರಯಾಣಿಕರು ಕುಸಿತದ ಭೀತಿ ಎದುರಿಸುತ್ತಿದ್ದರು. ಈ ಹಿನ್ನೆಲೆ ಸಚಿವ ಮಂಕಾಳು ವೈದ್ಯ ಹಾಗೂ ಸತೀಶ್ ಸೈಲ್, ಐಆರ್‌ಬಿ ಅಧಿಕಾರಿಗಳು ಫಿಟ್‌ನೆಸ್ ಸರ್ಟಿಫಿಕೇಟ್ ಹೊಂದದೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವುದು ಸರಿಯಲ್ಲ. ಆದ್ದರಿಂದ, ಟನಲ್ ಒಳಗಿನ ಸಂಚಾರವನ್ನು ಬಂದ್ ಮಾಡಲಾಗುವುದು ಎಂದು ತಿಳಿಸಿದ್ದಾರೆ. 

ಇನ್ನು ಐಆರ್‌ಬಿ ಅವೈಜ್ಞಾನಿಕ ಕಾಮಗಾರಿಯಿಂದ ಕೃತಕ ನೆರೆ ಸೃಷ್ಠಿಯಾಗ್ತಿದೆ. ಅವೈಜ್ಞಾನಿಕ ರಾಷ್ಟ್ರೀಯ ಹೆದ್ದಾರಿ 66 ರ  ಕಾಮಗಾರಿಯಿಂದ ಸಾಕಷ್ಟು ಜನರಿಗೆ ತೊಂದರೆಯಾಗ್ತಿದೆ. ಕೃತಕ ನೆರೆಗೆ ನೇರ ಕಾರಣ ಐಆರ್‌ಬಿ ಎಂದು ಗರಂ ಆದ ಸಚಿವ ಮಂಕಾಳು ವೈದ್ಯ ಹಾಗೂ ಶಾಸಕ ಸತೀಶ್ ಸೈಲ್, ಅಪೂರ್ಣ ಹೆದ್ದಾರಿ ಕಾಮಗಾರಿ ಇದ್ದರೂ‌ ಟೋಲ್ ವಸೂಲಿ‌ ಮಾಡಲಾಗ್ತಿದೆ. ಪೂರ್ಣ ಪ್ರಮಾಣದಲ್ಲಿ ಕಾಮಗಾರಿ ಮುಗಿಯುವವರೆಗೂ ಕಾರವಾರದಿಂದ ಭಟ್ಕಳದವರೆಗೆ ಟೋಲ್ ಬಂದ್ ಮಾಡಲು ನಿರ್ಧರಿಸಲಾಗಿದೆ. ಹಟ್ಟಿಕೇರಿ, ಹೊಳೆಗದ್ದೆ, ಶಿರೂರಿನ ಮೂರು ಟೋಲ್ ಬಂದ್ ಮಾಡಲಾಗುವುದು ಎಂದು‌ ತಿಳಿಸಿದರು. ಇದಕ್ಕೆ ಪ್ರತಿಕ್ರಯಿಸಿದ ಎನ್‌ಎಚ್‌ಎಐ ಯೋಜನಾಧಿಕಾರಿ,
ಟನಲ್ ಮುಚ್ಚುವ ಹಾಗೂ ಟೋಲ್ ಬಂದ್ ಮಾಡುವ ವಿಚಾರದ ಬಗ್ಗೆ ಉನ್ನತಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು. 

click me!