ಎಂಗೇಜ್ಮೆಂಟ್ ಉಂಗುರ ಕಳೆದು ಹೋಗಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಯುವಕ

Published : Nov 22, 2023, 02:20 PM ISTUpdated : Nov 22, 2023, 02:25 PM IST
ಎಂಗೇಜ್ಮೆಂಟ್ ಉಂಗುರ ಕಳೆದು ಹೋಗಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಯುವಕ

ಸಾರಾಂಶ

ಎಂಗೇಜ್ಮೆಂಟ್‌ ಉಂಗುರ ಕಳೆದು ಹೋಗಿದ್ದಕ್ಕೆ ಮನನೊಂದ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. 

ತುಮಕೂರು (ನ.22): ಕಳೆದ ಮೂರು ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಗ ತನ್ನನ್ನು ಮದುವೆಯಾಗುವ ಹುಡುಗಿ ಕೈಬೆರಳಿಗೆ ಹಾಕಿದ್ದ ಉಂಗುರ (Engagement Ring) ಕಲೆದು ಹೋಗಿದ್ದಕ್ಕೆ ಮನನೊಂದ ಯುವಕ ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ತುಮಕೂರಿನಲ್ಲಿ ನಡೆದಿದೆ.

ಆತ್ಮಹತ್ಯೆಗೆ ಯಾವ ಕಾರಣ ಇರುತ್ತದೆ ಎಂಬುದೇ ತಿಳಿಯುತ್ತಿಲ್ಲ. ಕೆಲವರು ಬೈದರೆ, ಅವಮಾನವಾದರೆ, ಪ್ರೇಮ ವೈಫಲ್ಯವಾದರೆ ಹಾಗೂ ಕೆಲವರು ಸಾಲ ಮರುಪಾವತಿಸಲಾಗದೇ ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳ ಬಗ್ಗೆ ಕೇಳಿದ್ದೇವೆ. ಆದರೆ, ಇಲ್ಲೊಬ್ಬ ಯುವಕ ತನಗೆ ನಿಶ್ಚಿತಾರ್ಥದ ಉಂಗುರ ಕಳೆದು ಹೋಗಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ತುಮಕೂರು ನಗರದ ದೇವರಾಯಪಟ್ಟಣದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಕಮಲೇಶ್ (36) ಎಂದು ಗುರುತಿಸಲಾಗಿದೆ.

ಬಿಜೆಪಿ ಅವಧಿಯಲ್ಲಿನ ಟೆಂಡರ್‌ ರದ್ದುಗೊಳಿಸುತ್ತಿರುವ ಕಾಂಗ್ರೆಸ್‌ ಸರ್ಕಾರ: ಸಂಕಷ್ಟದಲ್ಲಿ ಎಸ್ಕಾಂ ಗುತ್ತಿಗೆದಾರರು

ಕಳೆದ ಮೂರು ತಿಂಗಳ ಹಿಂದೆ ವಿವಾಹ ನಿಶ್ಚಯವಾಗಿತ್ತು. ಬೆಂಗಳೂರು ಮೂಲದ ಯುವತಿಯಿಂದಿಗೆ ವಿವಾಹ ನಿಶ್ಚಿಯವಾಗಿತ್ತು. ಸ್ನಾನ ಮಾಡುವ ಸಂದರ್ಭದಲ್ಲಿ ಉಂಗುರ ಕಳೆದು ಹೋಗಿದೆ. ಈ ವಿಚಾರ ಮನೆಯವರಿಗೆ ಹೇಳಲು ಹೆದರಿ, ವಿಷ ಸೇವನೆ ಮಾಡಿದ್ದಾನೆ. ಕಳೆದ 17ರಂದು ವಿಷ ಸೇವನೆ ಮಾಡಿದ್ದು, ಆತನನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಈಗ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಕ್ಯಾತಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಕುಡಿದು ಯದ್ವಾತದ್ವಾ ಲಾರಿ ಚಾಲನೆ ಮಾಡಿದ ಚಾಲಕ, ಅಂಡರ್‌ಪಾಸ್‌ ಕಂಬಿಗೆ ಸಿಲುಕಿ ಪರದಾಟ: ತುಮಕೂರು (ನ.22): ಕುಡಿದ ಮತ್ತಿನಲ್ಲಿ ಚಾಲಕನೋರ್ವ ಭಾರೀ ಗಾತ್ರದ ವಾಹನವನ್ನು ಯದ್ವಾತದ್ವಾ ಚಲಾಯಿಸಿ ತುಮಕೂರಿನ ಶೆಟ್ಟಿಹಳ್ಳಿ ರೈಲ್ವೆ ಅಂಡರ್‌ಪಾಸ್‌ನಲ್ಲಿ ನುಗ್ಗಿಸಿದ ಘಟನೆ ನಡೆದಿದೆ. ಡಿಕ್ಕಿಯಾದ ರಭಸಕ್ಕೆ ಕಬ್ಬಿಣದ ಕಂಬಿ ಬಿಳುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಕೂದಲೆಳೆ ಅಂತರದಲ್ಲಿ ಅನಾಹುತವೊಂದು ತಪ್ಪಿದೆ. 

ರಾಮನಗರ ಮೂಲದ ಲಾರಿ ಚಾಲಕ ಶಂಕರ್ ಬಂಧಿತ ಆರೋಪಿ. ತುಮಕೂರಿನ ಶೆಟ್ಟಿಹಳ್ಳಿ ರಿಂಗ್ ರಸ್ತೆಯಿಂದ ಎಪಿಎಂಸಿ ಮಾರ್ಕೆಟ್ ಕಡೆಗೆ ತೆರಳುತ್ತಿದ್ದ KA42A7244 ವಾಹನ. ರೈಲ್ವೆ ಅಂಡರ್ ಪಾಸ್ ಬಳಿ ಬಾರಿ ಗಾತ್ರದ ವಾಹನ ಸಂಚಾರಕ್ಕೆ ಅವಕಾಶ ಇಲ್ಲದಿದ್ದರೂ ಅಂಡರ್‌ಪಾಸ್ ಒಳಗೆ ಹೋಗಲು ಯತ್ನಿಸಿರುವ ಚಾಲಕ. ಈ ವೇಳೆ ಭಾರಿ ಗಾತ್ರದ ವಾಹನ ಸಂಚಾರಗಳ ತಡೆಗೆ ಅಳವಡಿಸಿದ್ದ ಕಂಬಿಗೆ ಸಿಲುಕಿದೆ. ಡಿಕ್ಕಿಯಾದ ರಭಸಕ್ಕೆ ರಸ್ತೆಗೆ ಬಿದ್ದ ಬೃಹತ್ ಗಾತ್ರದ ಕಬ್ಬಿಣ ಕಂಬಿ. ಈ ವೇಳೆ ರಸ್ತೆಯಲ್ಲಿ ಸಂಚಾರಿಸುತ್ತಿದ್ದ ವಾಹನ ಸವಾರರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಕಬ್ಬಿಣದ ಕಂಬಿ ಬಿಳುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. 

ಪತ್ನಿಯ ಶೀಲ ಶಂಕಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪತಿರಾಯ!

ರೈಲ್ವೆ ಅಂಡರ್‌ಪಾಸ್‌ನಿಂದ ಲಾರಿ ತೆಗೆಯಲು ಪರದಾಟ: ಬೃಹತ್ ಗಾತ್ರ ಕಬ್ಬಿಣದ ಕಂಬಿ ರಸ್ತೆ ಉರುಳಿದ್ದರಿಂದ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿದೆ. ತಕ್ಷಣ ಸ್ಥಳಕ್ಕೆ ಬಂದ ತುಮಕೂರಿನ ಸಂಚಾರಿ ಪೊಲೀಸರು ಟ್ರಾಫಿಕ್ ಜಾಮ್ ಕ್ಲಿಯರ್ ಮಾಡಿ, ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು. ಬಳಿಕ ವಾಹನ ಚಾಲಕ ಶಂಕರನನ್ನು ವಶಕ್ಕೆ ಪಡೆದ ಪೊಲೀಸರು. ಆರೋಪಿಯನ್ನು ಬಂಧಿಸಿ ಮದ್ಯಪಾನ ಸೇವಿಸಿದ ಬಗ್ಗೆ ಪರೀಕ್ಷೆಗೊಳಪಡಿಸಲಾಯಿತು ಈ ವೇಳೆ ಶಂಕರ್ ಕಂಠಪೂರ್ತಿ ಕುಡಿದೇ ವಾಹನ ಚಲಾಯಿಸಿರುವುದು ಬೆಳಕಿಗೆ ಬಂದಿದೆ. ಸದ್ಯ ಚಾಲಕನ ವಿರುದ್ಧ ದೂರು ದಾಖಲಿಸಿಕೊಂಡು, ರೈಲ್ವೆ ಅಂಡರ್ ಪಾಸ್ ಬಳಿ ಸಿಲುಕಿದ್ದ ವಾಹನವನ್ನ ಹೊರತೆಗೆದ ಪೊಲೀಸರು. ತುಮಕೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

PREV
Read more Articles on
click me!

Recommended Stories

ಇಂದು 20,000 ರೈತರ ಜತೆ ಬಿಜೆಪಿ ಸುವರ್ಣಸೌಧ ಮುತ್ತಿಗೆ
ಡ್ರಗ್‌ ಪೆಡ್ಲರ್‌ಗಳಿಗೆ ಬೆಂಗಳೂರೇ ದೊಡ್ಡ ಟಾರ್ಗೆಟ್‌: ಚಾಕೋಲೆಟ್‌, ಕಾಫಿ ಪುಡಿ ಹೆಸರಲ್ಲಿ ಡ್ರಗ್ಸ್‌ ಸಾಗಾಟ