ಬದುಕಿಗಾಗಿ ಜೆಸಿಬಿ ಇಟ್ಕೊಂಡಿರೋ ಯುವಕ ಪವನ್ ಗಂಟೆಗೆ 1 ಸಾವಿರದಂತೆ 56 ಗಂಟೆ ಕೆಲಸ ಮಾಡಿದ್ದ. ಆತ ಕೆಲಸ ಮಾಡಿರೋ ಎಲ್ಲಾ ವಿಡಿಯೋ ಹಾಗೂ ಫೋಟೋಗಳು ಆತನ ಬಳಿ ಇವೆ. ಕೆಲಸ ಮುಗಿದ ಮೇಲೆ ಹಣ ಕೇಳಿದ್ರೆ ಸೋಮವಾರ, ಬುಧವಾರ, ಶನಿವಾರ ಅಂತ ಕಥೆ ಹೇಳಿದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ನ.21): ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಿಡಿಓ ಹೇಳಿ ಮಾಡಿಸಿದ್ದ ಕೆಲಸಕ್ಕೆ ಇಂದಿಗೂ ಹಣ ಕೊಟ್ಟಿಲ್ಲ. 45 ಸಾವಿರ ಹಣಕ್ಕಾಗಿ ಜೆಸಿಬಿ ಇಟ್ಕೊಂಡು ಕೆಲಸ ಮಾಡಿದ ಯುವಕ ದುಡ್ಡಿಗಾಗಿ ಪಂಚಾಯಿತಿ ಅಲೆಯುತ್ತಿದ್ದಾರೆ. ಮೀಟಿಂಗ್ನಲ್ಲಿ ಇಡ್ತೀವಿ, ನೆಕ್ಸ್ಟ್ ಮಂಥ್ ಹಾಕ್ತೀವಿ ಅಂತ ಹೇಳಿ... ಹೇಳಿ... ಇಬ್ಬರು ಪಿಡಿಓ ಹಾಗೂ ಮೂವರು ಅಧ್ಯಕ್ಷರುಗಳೇ ಬದಲಾದ್ರು. ಆದ್ರೆ, ಆ ಯುವಕನಿಗೆ ಹಣ ಮಾತ್ರ ಸಿಕ್ಕಿಲ್ಲ. ಕೆಲಸ ಮಾಡಿ ಬಿಲ್ ಗಾಗಿ ನಿತ್ಯವೂ ಯುವಕ ಪರದಾಟ ನಡೆಸುತ್ತಿದ್ದಾರೆ..
undefined
ಎರಡು ವರ್ಷದಿಂದ ಪಂಚಾಯಿತಿ ಅಲೆದಾಟ :
ಚಿಕ್ಕಮಗಳೂರು ತಾಲೂಕಿನ ವಸ್ತಾರೆ ಗ್ರಾಮದ ವಾಸಿ ಪವನ್ ನಿತ್ಯವೂ ಗ್ರಾಮ ಪಂಚಾಯಿತಿಗೆ ಅಲೆದಾಟ ನಡೆಸುತ್ತಿದ್ದಾರೆ. ಬದುಕಿಗಾಗಿ ಜೆಸಿಬಿ ಇಟ್ಕೊಂಡು ಸಣ್ಣ-ಪುಟ್ಟ ಕೆಲಸ ಮಾಡಿಕೊಂಡು ಜೀವನ ಮಾಡ್ತಿದ್ದಾನರೆ. ಕಳೆದ ಎರಡು ವರ್ಷಗಳ ಹಿಂದೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿಓ ಯಾವುದೇ ವರ್ಕ್ ಆರ್ಡರ್ ನೀಡದೆ ನಾವಿದ್ದೇವೆ ಕೆಲಸ ಮಾಡು ಅಂತ ಹಳ್ಳಿ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಬೆಳೆದಿದ್ದ ಗಿಡಗಂಟೆಗಳನ್ನ ಕ್ಲೀನ್ ಮಾಡಿಸಿದ್ದರು. ಬದುಕಿಗಾಗಿ ಜೆಸಿಬಿ ಇಟ್ಕೊಂಡಿರೋ ಯುವಕ ಪವನ್ ಗಂಟೆಗೆ 1 ಸಾವಿರದಂತೆ 56 ಗಂಟೆ ಕೆಲಸ ಮಾಡಿದ್ದ. ಆತ ಕೆಲಸ ಮಾಡಿರೋ ಎಲ್ಲಾ ವಿಡಿಯೋ ಹಾಗೂ ಫೋಟೋಗಳು ಆತನ ಬಳಿ ಇವೆ. ಕೆಲಸ ಮುಗಿದ ಮೇಲೆ ಹಣ ಕೇಳಿದ್ರೆ ಸೋಮವಾರ, ಬುಧವಾರ, ಶನಿವಾರ ಅಂತ ಕಥೆ ಹೇಳಿದ್ದಾರೆ. ಈ ಜನರಲ್ ಬಾಡಿ ಮೀಟಿಂಗ್ನಲ್ಲಿ ಇಟ್ಟು ಬಿಲ್ ಪಾಸ್ ಮಾಡಿ ಹಣ ಕೊಡ್ತೀವಿ ಅಂತ ಹೇಳ್ತಾನೆ ಎರಡು ವರ್ಷ ಕಳೆದಿದೆ. ಹಣ ಮಾತ್ರ ಬಂದಿಲ್ಲ. ಆ ಹುಡುಗ 45 ಸಾವಿರ ಕೇಳುವಷ್ಟರಲ್ಲಿ ಇಬ್ಬರು ಪಿಡಿಓ ಹಾಗೂ ಮೂವರು ಅಧ್ಯಕ್ಷರೇ ಬದಲಾಗಿದ್ದಾರೆ. ಆತನಿಗೆ ಹಣ ಮಾತ್ರ ಬಂದಿಲ್ಲ. ಈ ಹಿಂದೆ ಪಿಡಿಓ ಇಲ್ಲದ ಕಾರಣ ಪಂಚಾಯಿತಿಯ ಸೆಕ್ರೆಟರಿಯನ್ನೇ ಇನ್ಚಾರ್ಜ್ ಹಾಕಲಾಗಿತ್ತು. ಆಗಿನಿಂದಲೂ ಈ ಹುಡುಗ ಹಣ ಕೇಳ್ತಿದ್ದಾನೆ. ಆದ್ರೆ, ಪಂಚಾಯಿತಿ ಹಣ ಮಾತ್ರ ನೀಡಿಲ್ಲ.
ಚಿಕ್ಕಮಗಳೂರು: ಬಿರಿಯಾನಿ ತಿಂದು 17 ಜನ ಅಸ್ವಸ್ಥ..!
ಅಧ್ಯಕ್ಷರು ಹಾಗೂ ಪಿಡಿಓ ಹೇಳಿ ತಕ್ಷಣ ಕೆಲಸ ಮಾಡಿದ್ದ ಯುವಕ :
45 ಸಾವಿರ ಹಣದಲ್ಲಿ ಹಿಂದಿನ ಪಿಡಿಓ ಹಾಗೂ ಅಧ್ಯಕ್ಷರು ಚೆಕ್ ಮೂಲಕ 9 ಸಾವಿರ ಹಣ ನೀಡಿದ್ದಾರೆ. ಉಳಿದ ಹಣಕ್ಕಾಗಿ ವರ್ಷಗಳಿಂದ ಸೈಕಲ್ ಹೊಡೆಸುತ್ತಿದ್ದಾರೆ. ಈಗ ದೀಪ್ತಿ ಅಂತ ಬೇರೆ ಪಿಡಿಓ ಬಂದಿದ್ದಾರೆ. ಅವರಿಗೆ ಹಣ ಕೇಳಿದ್ರೆ ವರ್ಕ್ ಆರ್ಡರ್ ಕೊಡಿ ಹಣ ಕೊಡ್ತೀನಿ ಅಂತಿದ್ದಾರೆ. ಆದ್ರೆ, ಹಿಂದಿನ ಪಿಡಿಓ ಹಾಗೂ ಅಧ್ಯಕ್ಷರು ಬಾಯಿ ಮಾತಿನಲ್ಲಿ ನಾವಿದ್ದೇವೆ ಅಂತ ಹೇಳಿ ಕೆಲಸ ಮಾಡಿಸಿದ್ದಾರೆ. ಯಾವುದೇ ವರ್ಕ್ ಆರ್ಡರ್ ಕೊಟಿಲ್ಲ. ಅಧ್ಯಕ್ಷರು ಹಾಗೂ ಪಿಡಿಓ ಅವರೇ ಹೇಳಿದ್ದಾರೆ ಎಂದು ಕೆಲಸ ಮಾಡಿದ್ದಾರೆ. ಆದ್ರೆ, ಹಣ ಮಾತ್ರ ಸಿಕ್ಕಿಲ್ಲ. ಈಗ ಹಣಕ್ಕಾಗಿ ಕೆಲಸ ಮಾಡಿದ ಯುವಕ ಪಂಚಾಯಿತಿ ಅಲೆಯುತ್ತಿದ್ದಾನೆ. ಆದ್ರೆ, ದುಡ್ ಕೊಡೋರು ಯಾರು ಇಲ್ಲ. ಈಗಿನ ಪಿಡಿಓ ಹಣ ಕೊಡ್ತೀನಿ ವರ್ಕ್ ಆರ್ಡರ್ ಕೊಡಿ ಅಂತಿದ್ದಾರೆ. ಆದ್ರೆ, ಆತನ ಬಳಿ ಅದಿಲ್ಲ. ಮೇಲ್ನೋಟಕ್ಕೆ ಇದು ಹಿಂದಿನ ಅಧ್ಯಕ್ಷರು ಹಾಗೂ ಹಿಂದಿನ ಪಿಡಿಓ ಗೋಲ್ಮಾಲ್ ಮಾಡಿ, ಕೆಲಸ ಮಾಡಿಸಿ ಹಣವನ್ನ ನೀಡಿದೆ ಗುಳಂ ಮಾಡಿರುವಂತಿದೆ. ಮೇಲಾಧಿಕಾರಿಗಳ ಸೂಕ್ತ ತನಿಖೆಯಿಂದ ಯುವಕನಿಗೆ ನ್ಯಾಯ ಸಿಗಬೇಕಿದೆ.
ಒಟ್ಟಾರೆ, ಹಳ್ಳಿಗಳ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಸಾಧ್ಯ ಅಂತ ಗಾಂಧಿಜೀ ಕನಸು ಕಂಡಿದ್ರು. ಕೇಂದ್ರ ಸರ್ಕಾರ ಕೂಡ ನಾನಾ ಯೋಜನೆ ಮೂಲಕ ಹಳ್ಳಿಗಳ ಅಭಿವೃದ್ಧಿಗೆ ಕೋಟ್ಯಾಂತರ ರೂಪಾಯಿ ಹಣ ನೀಡುತ್ತಿದೆ. ಆದ್ರೆ, ಆ ಹಣದಿಂದ ನಿಜಕ್ಕೂ ಹಳ್ಳಿಗಳು ಅಭಿವೃದ್ಧಿ ಆಗ್ತಿದ್ಯಾ ಅನ್ನೋ ಪ್ರಶ್ನೆ ಮೂಡಿದೆ. ಈ ಮಧ್ಯೆ ಹಲವೆಡೆ ಕೆಲಸವೇ ಇಲ್ಲದೆ ಬಿಲ್ ಪಾಸ್ ಆದ್ರೆ, ಇಲ್ಲಿ ಕೆಲಸ ಆಗಿದ್ರು ವರ್ಕ್ ಆರ್ಡರ್ ಇಲ್ಲ. ಹಣ ಬಿಡುಗಡೆ ಆಗಿದ್ಯೋ ಇಲ್ಲೋ ಗೊತ್ತಿಲ್ಲ. 9 ಸಾವಿರ ಕೊಟ್ಟಿದ್ದಾರೆ ಅಂದ್ರೆ ಬಿಲ್ ಪಾಸ್ ಆಗಿರಬಹುದೆಂದು ಅನುಮಾನ. ಉಳಿದ ಹಣ ಏನಾಯ್ತು. ಕೆಲಸ ಮಾಡಿದವನಿಗೆ ದುಡ್ ಯಾಕ್ ಕೊಟ್ಟಿಲ್ಲ. ಅಧಿಕಾರಿಗಳ ತನಿಖೆಯಿಂದ ಸತ್ಯ ಹೊರಬರಬೇಕಿದೆ.