ತುಮಕೂರು : ಲಂಚದ ಹಣ ವಾಪಸ್ ಮಾಡಿದ ವೈದ್ಯ

By Kannadaprabha News  |  First Published Dec 16, 2023, 8:56 AM IST

ಕನ್ನಡಕ ನೀಡಲು ವಿದ್ಯಾರ್ಥಿನಿಯೊಬ್ಬರಿಂದ ವೈದ್ಯರೊಬ್ಬರು ಲಂಚ ಪಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣವನ್ನು ವಿದ್ಯಾರ್ಥಿನಿಗೆ ವಾಪಸ್ ಕೊಡಿಸಿರುವ ಘಟನೆ ಮಧುಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.


ತುಮಕೂರು: ಕನ್ನಡಕ ನೀಡಲು ವಿದ್ಯಾರ್ಥಿನಿಯೊಬ್ಬರಿಂದ ವೈದ್ಯರೊಬ್ಬರು ಲಂಚ ಪಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣವನ್ನು ವಿದ್ಯಾರ್ಥಿನಿಗೆ ವಾಪಸ್ ಕೊಡಿಸಿರುವ ಘಟನೆ ಮಧುಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಮಧುಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ನೇತ್ರತಜ್ಞರೊಬ್ಬರು ವಿದ್ಯಾರ್ಥಿನಿಗೆ ಕನ್ನಡಕ ನೀಡಲು 1500 ರು. ಲಂಚ ಪಡೆದಿದ್ದರು. ಈ ಸಂಬಂಧ ದೂರು ನೀಡಲಾಗಿತ್ತು. ದೂರಿನ ಅನ್ವಯ ಆಸ್ಪತ್ರೆಗೆ ಭೇಟಿ ನೀಡಿದ್ದ ಆರೋಗ್ಯ ಸೌಧ ಜಾಗೃತ ಕೋಶದ ಅಧಿಕಾರಿಗಳು ಲಂಚ ಪಡೆದ ವಿಚಾರವನ್ನು ಅಧಿಕಾರಿಗಳ ಎದುರು ವಿದ್ಯಾರ್ಥಿ ಹೇಳಿದ್ದರಿಂದ ವೈದ್ಯರಿಗೆ ಛೀಮಾರಿ ಹಾಕಿ ಲಂಚದ ಹಣ ವಾಪಸ್ ಕೊಡಿಸಿದ್ದಾರೆ. ಅಲ್ಲದೇ ವಿದ್ಯಾರ್ಥಿನಿಯ ಕ್ಷಮೆಯನ್ನು ಕೇಳಿದ್ದಾರೆ. ಇದೇ ವೇಳೆ ಮತ್ತೊಬ್ಬ ರೋಗಿ ಬಳಿ ಪಡೆದ್ದ 3800 ರು. ಹಣವನ್ನು ಅಧಿಕಾರಿಗಳು ವಾಪಸ್ ಕೊಡಿಸಿದ್ದಾರೆ.

Latest Videos

undefined

 ಟಿಎಂಸಿ ಸಂಸದೆಯನ್ನು ಲೋಕಸಭೆ ಶಿಸ್ತು ಸಮಿತಿ ಅಮಾನತು

ನವದೆಹಲಿ(ಡಿ.13) ಪ್ರಶ್ನೆಗಾಗಿ ಲಂಚ, ಲೋಕಸಭೆ ಸದಸ್ಯರ ಪೋರ್ಟಲ್ ಐಡಿ ಪಾಸ್‌ವರ್ಡ್ ಅನಧಿಕೃತ ವ್ಯಕ್ತಿಗಳಿಗೆ ಹಂಚಿದ ಟಿಎಂಸಿ ಸಂಸದೆಯನ್ನು ಲೋಕಸಭೆ ಶಿಸ್ತು ಸಮಿತಿ ಅಮಾನತು ಮಾಡಿತ್ತು. ಇದರ ಬೆನ್ನಲ್ಲೇ ಅಬ್ಬರಿಸಿ ಬೊಬ್ಬಿರಿದ ಇಂಡಿ ಒಕ್ಕೂಟ ಪಕ್ಷ ಹಾಗೂ ಟಿಎಂಸಿಗೆ ಇದೀಗ ಮತ್ತೆ ಮುಖಭಂಗವಾಗಿದೆ. ಲೋಕಸಭೆಯಿಂದ ಅಮಾನತು ನಿರ್ಧಾರವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾಗೆ ಭಾರಿ ಹಿನ್ನಡೆಯಾಗಿದೆ. ತ್ವರಿತಗತಿಯಲ್ಲಿ ಅರ್ಜಿ ವಿಚಾರಣೆ ನಡೆಸಲು ಕೋರಿದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

ಜಸ್ಚೀಸ್ ಸಂಜಯ್ ಕೌಲ್ ನೇತೃತ್ವದ ಪೀಠದ ಮುಂದೆ ಮಹುವಾ ಮೊಯಿತ್ರಾ ಪರ ಅರ್ಜಿ ಸಲ್ಲಿಸಿದ ವಕೀಲ ಹಾಗೂ ಕಾಂಗ್ರೆಸ್ ನಾಯಕ ಅಭಿಷೇಕ್ ಮನುಸಿಂಗ್ವಿ, ತುರ್ತು ವಿಚಾರಣೆ ನಡೆಸಲು ಮನವಿ ಮಾಡಿದ್ದರು. ಆದರೆ ಈ ಮನವಿಯನ್ನು ಸುಪ್ರೀಂ ಕೋರ್ಟ್ ಪೀಠ ತಿರಸ್ಕರಿಸಿದೆ. ತ್ವರಿತ ವಿಚಾರಣೆಗೆ ಕೋರ್ಟ್ ನಿರಾಕರಿಸಿದೆ. ಅರ್ಜಿಯನ್ನು ಪರಿಶೀಲಿಸಿ ಲಿಸ್ಟ್ ಮಾಡುವ ಭರವಸೆಯನ್ನು ಚೀಫ್ ಜಸ್ಟೀಸ್ ಆಫ್ ಇಂಡಿಯಾ ನೀಡಿದ್ದಾರೆ.  ತುರ್ತು ಅರ್ಜಿ ವಿಚಾರಣೆ ನಿರಾಕರಿಸಿದ ನ್ಯಾ.ಸಂಜಯ್ ಕಿಶನ್ ಕೌಲ್, ಸಿಜೆಐ ಪೀಠದ ಮುಂದೆ ಪ್ರಸ್ತಾಪಿಸಲು ಸೂಚಿಸಿದ್ದಾರೆ. 

ಸಂಸದೆ ಮಹುವಾ ಮೊಯಿತ್ರಾ ಪ್ರಜಾತಂತ್ರ ವ್ಯವಸ್ಥೆಗೆ ಕಪ್ಪುಚುಕ್ಕೆ: ಶೋಭಾ ಕರಂದ್ಲಾಜೆ

ನೈತಿಕ ಸಮಿತಿಗೆ ನನ್ನನ್ನು ವಜಾ ಮಾಡುವ ಶಿಫಾರಸು ಮಾಡಲು ಅಧಿಕಾರವಿಲ್ಲ. ಅಲ್ಲದೆ ತಾನು ಹಿರಾನಂದಾನಿ ಅವರಿಂದ ಲಂಚ ತೆಗೆದುಕೊಂಡಿರುವುದಕ್ಕೆ ಯಾವುದೇ ಸಾಕ್ಷ್ಯಾಧಾರ ಲಭ್ಯವಿಲ್ಲ. ಜೊತೆಗೆ ತನ್ನ ಮೇಲೆ ಸುಳ್ಳು ಆರೋಪ ಮಾಡಿದ ಹಿರಾನಂದಾನಿ ಮತ್ತು ದೆಹದ್ರಾಯಿ ಅವರಿಗೆ ಮರುಪ್ರಶ್ನೆ ಹಾಕಲು ಅವಕಾಶ ನೀಡದೆ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹೀಗಾಗಿ  ಲೋಕಸಭೆಯಿಂದ ವಜಾ ನರ್ಧಾರ ಹಿಂಪಡೆಯಲು  ಸುಪ್ರೀಂ ಕೋರ್ಟ್ ಆದೇಶ ನೀಡಬೇಕು ಎಂದು ಮಹುವಾ ಮೊಯಿತ್ರಾ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಪ್ರಶ್ನೆಗಾಗಿ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಸಭೆಯಿಂದ ವಜಾಗೊಂಡಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾಗೆ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಸೇರಿದಂತೆ ವಿಪಕ್ಷಗಳ ಘಟಾನುಘಟಿ ನಾಯಕರು ಬೆಂಬಲ ನೀಡಿದ್ದಾರೆ. ವಜಾಗೊಂಡ ಬಳಿಕ ಮಹುವಾ ಸಂಸತ್ತಿನಿಂದ ಹೊರಬಂದು ಸುದ್ದಿಗೋಷ್ಠಿ ನಡೆಸಿದಾಗ ಸೋನಿಯಾ ಸೇರಿ ಹಲವಾರು ಪ್ರಮುಖ ವಿಪಕ್ಷಗಳ ನಾಯಕರು, ಮಹುವಾ ಬೆನ್ನ ಹಿಂದೆಯೇ ನಿಂತು ಬೆಂಬಲ ಪ್ರಕಟಿಸಿದರು. ಬಳಿಕ ವಿಪಕ್ಷ ನಾಯಕರು ಹಾಗೂ ಮಹುವಾ ಗಾಂಧಿ ಪ್ರತಿಮೆ ಬಳಿ ಹೋಗಿ ನಿಂತು ತಮಗೆ ಅನ್ಯಾಯವಾಗಿದೆ ಎಂದು ಆಕ್ರೋಶ ಹೊರಹಾಕಿದರು.

click me!