ಲೆಕ್ಕ ಗೊತ್ತಿಲ್ಲದ್ದಕ್ಕೆ ಮಕ್ಕಳಿಗೆ ಹಿಗ್ಗಾಮುಗ್ಗ ಥಳಿಸಿದ ಶಿಕ್ಷಕ!

Published : Sep 16, 2019, 09:23 AM IST
ಲೆಕ್ಕ ಗೊತ್ತಿಲ್ಲದ್ದಕ್ಕೆ ಮಕ್ಕಳಿಗೆ ಹಿಗ್ಗಾಮುಗ್ಗ ಥಳಿಸಿದ ಶಿಕ್ಷಕ!

ಸಾರಾಂಶ

ಲೆಕ್ಕ ಗೊತ್ತಿಲ್ಲದ್ದಕ್ಕೆ ಮಕ್ಕಳಿಗೆ ಹಿಗ್ಗಾಮುಗ್ಗ ಥಳಿಸಿದ ಶಿಕ್ಷಕ!| ತುಮಕೂರು ಮಕ್ಕಳು ಆಸ್ಪತ್ರೆಗೆ| ಶಿಕ್ಷಕನ ವಿರುದ್ಧ ದೂರು

ತುಮಕೂರು[ಸೆ.16]:  ಲೆಕ್ಕದ ಪ್ರಶ್ನೆಗೆ ಸರಿಯಾಗಿ ಉತ್ತರಿಸಿಲ್ಲ ಎನ್ನುವ ಕಾರಣಕ್ಕೆ ಮುಖ್ಯ ಶಿಕ್ಷಕರೊಬ್ಬರು ಮಕ್ಕಳಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ತುಮಕೂರು ತಾಲೂಕಿನ ಬೆಳ್ಳಾವಿ ಸಮೀಪದ ಮಷಣಾಪುರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮಷಣಾಪುರದಲ್ಲಿ ಸರ್ಕಾರಿ ಶಾಲೆ ಮುಖ್ಯ ಶಿಕ್ಷಕ ಅಶ್ವಥಪ್ಪ ಎಂಬುವರೇ ಮಕ್ಕಳ ಮೇಲೆ ಮನಸೋ ಇಚ್ಛೆ ಥಳಿಸಿದ ಶಿಕ್ಷಕ. ಅಶ್ವಥಪ್ಪ ನೀಡಿದ ಏಟಿಗೆ ಆರನೇ ತರಗತಿ ವಿದ್ಯಾರ್ಥಿಗಳಾದ ಶ್ರೀಹರಿ ಮತ್ತು ರಾಕೇಶ್‌ ಮೈಮೇಲೆ ಬಾಸುಂಡೆಗಳೆದ್ದಿದ್ದು, ಅವರನ್ನು ಭಾನುವಾರ ಬೆಳ್ಳಾವಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಮುಖ್ಯ ಶಿಕ್ಷಕನ ವರ್ತನೆಗೆ ಪೋಷಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬಾಲಕರ ಜತೆಗೆ ಮುಖ್ಯಶಿಕ್ಷಕ ರಾಕ್ಷಸರ ರೀತಿ ವ್ರತಿಸಿದ್ದಾರೆ ಎಂದು ಆರೋಪಿಸಿ ಪೋಷಕರು ಬೆಳ್ಳಾವಿ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದಾರೆ.

PREV
click me!

Recommended Stories

ಗದಗ: ದೇವಿಮೂರ್ತಿ ಸ್ಥಳಾಂತರಿಸಿ ಪೂಜೆ ನಿಲ್ಲಿಸಿದ್ದಕ್ಕೆ ದಿನವಿಡೀ ಗೆಜ್ಜೆ ಶಬ್ಧ! ದೇವಿ ಕೋಪ ಶಮನಕ್ಕೆ ಊರವರಿಂದ ಮಹತ್ವದ ನಿರ್ಧಾರ
ಚಿಕ್ಕಮಗಳೂರು: ರಾಟ್‌ವೀಲರ್ ನಾಯಿ vs ನಾಗರಹಾವು ಮಧ್ಯೆ ಭೀಕರ ಕಾಳಗ, ಹಾವು ಕೊಂದು ಪ್ರಾಣಬಿಟ್ಟ ಶ್ವಾನ! ಹಾವಿಗೆ ಶಾಸ್ತ್ರೋಕ್ತ ಅಂತ್ಯಸಂಸ್ಕಾರ