ತುಮಕೂರು: ಮಳೆಗಾಗಿ ಕೆರೆಯಂಗಳದಲ್ಲಿ ನಮಾಜ್‌

By Kannadaprabha NewsFirst Published Aug 3, 2019, 8:26 AM IST
Highlights

ತುಮಕೂರಿನ ಶಿರಾದಲ್ಲಿ ಮಳೆಗಾಗಿ ಪ್ರಾರ್ಥಿಸಿ ನಮಾಜ್ ಮಾಡಿದರು. ತಾಲೂಕಿನ ದೊಡ್ಡ ಅಗ್ರಹಾರದ ಮುಸ್ಲಿಮರು ಶುಕ್ರವಾರದ ಪ್ರಾರ್ಥನೆಯಾದ ನಂತರ ಗ್ರಾಮದ ಕೆರೆಯಂಗಳದಲ್ಲಿ ಮಳೆಗಾಗಿ ‘ದೋ ರಕಾತ್‌ ನಮಾಜ್‌’ ಮಾಡುವ ಮೂಲಕ ಪ್ರಾರ್ಥಿಸಿದರು.

ತುಮಕೂರು(ಆ.03): ಶಿರಾದಲ್ಲಿ ಮುಂಗಾರು ವಿಫಲವಾಗಿ ನಾಡಿನಲ್ಲಿ ಬರದ ಛಾಯೆ ಮುಂದುವರೆದಿದ್ದು, ನಾಡಿನಲ್ಲಿ ಸುಭಿಕ್ಷವಾಗಿ ಮಳೆಯಾಗಿ, ಹೊಲಗಳಲ್ಲಿ ಸಮೃದ್ಧವಾದ ಬೆಳೆಯಾಗಲಿ ಎಂದು ಪ್ರಾರ್ಥಿಸಿ ಶಿರಾ ತಾಲೂಕಿನ ದೊಡ್ಡ ಅಗ್ರಹಾರದ ಮುಸ್ಲಿಮರು ಶುಕ್ರವಾರದ ಪ್ರಾರ್ಥನೆಯಾದ ನಂತರ ಗ್ರಾಮದ ಕೆರೆಯಂಗಳದಲ್ಲಿ ಮಳೆಗಾಗಿ ‘ದೋ ರಕಾತ್‌ ನಮಾಜ್‌’ ಮಾಡುವ ಮೂಲಕ ಪ್ರಾರ್ಥಿಸಿದರು.

ಪ್ರಕೃತಿಗೆ ಯಾವುದೇ ಜಾತಿ ಧರ್ಮವಿಲ್ಲ. ಆ ಕರ್ತನ ಕರುಣೆಯ ಹೊನಲು ಹರಿದರೆ ದೇಶ ಸುಭಿಕ್ಷವಾಗಲು ಕ್ಷಣ ಸಾಕು. ಆತನ ಕರುಣೆಯ ಮಳೆಗಾಗಿ ಪ್ರಾರ್ಥಿಸಿ ಇಂದು ಗ್ರಾಮದ ಮುಸ್ಲಿಂ ಬಾಂಧವರೆಲ್ಲಾ ಸೇರಿ ಕೆರೆಯಂಗಳದಲ್ಲಿ ನಮಾಜ್‌ ಮಾಡಿದೆವು ಎಂದು ಮಸೀದಿಯ ಮೌಜನ್‌ ಸಬ್ದರ್‌ ಹುಸೇನ್‌ ತಿಳಿಸಿದರು.

ಮಂಡ್ಯ: ಮಳೆಗಾಗಿ ಕಾವೇರಿ ಪ್ರತಿಮೆಗೆ ಪೂಜೆ

ಈ ಪ್ರಾರ್ಥನಾ ಕಾರ್ಯಕ್ರಮದ ನೇತೃತ್ವದ ಮುತವಲ್ಲಿ ರೆಹಮಾನ್‌ ಸಾಬ್‌, ಕಾರ್ಯದರ್ಶಿ ಅಕ್ತರ್‌ ಸಾಬ್‌, ಪೇಷುಮಾಮ್‌ ಖಲೀಲುಲ್ಲಾ ಖಾನ್‌, ಮಲ್ಲಿಕ್‌ ರಹಮಾನ್‌, ಫಯಾಜ್‌ ಪಾಷ, ನಿಸಾರ್‌, ಜಬೀಉಲ್ಲಾ ಮತ್ತಿತರರು ವಹಿಸಿದ್ದರು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!