ತುಮಕೂರು : ತಾಯಿ ಮಗಳ ಜಗಳ - ಸಿನಿಮೀಯ ರೀತಿ ತಾಯಿ ಬಲಿ

Published : Jan 11, 2024, 10:10 AM IST
ತುಮಕೂರು :  ತಾಯಿ ಮಗಳ ಜಗಳ - ಸಿನಿಮೀಯ ರೀತಿ ತಾಯಿ ಬಲಿ

ಸಾರಾಂಶ

ತಾಯಿ ಮಗಳ ಜಗಳದಲ್ಲಿ ‘ನೀನು ಸಾಯಿ ನೀನು ಸಾಯಿ’ ಎಂದು ಕಿತ್ತಾಡುವಾಗ ತಾಯಿ ಕುಪಿತಗೊಂಡು ನಾನೇ ಸಾಯುತ್ತೇನೆ ಎಂದು ಮನೆಯಿಂದ ಹೋದವಳು ನೇರವಾಗಿ ಮಾವತ್ತೂರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನಲ್ಲಿ ಜರುಗಿದೆ.

 ಕೊರಟಗೆರೆ :  ತಾಯಿ ಮಗಳ ಜಗಳದಲ್ಲಿ ‘ನೀನು ಸಾಯಿ ನೀನು ಸಾಯಿ’ ಎಂದು ಕಿತ್ತಾಡುವಾಗ ತಾಯಿ ಕುಪಿತಗೊಂಡು ನಾನೇ ಸಾಯುತ್ತೇನೆ ಎಂದು ಮನೆಯಿಂದ ಹೋದವಳು ನೇರವಾಗಿ ಮಾವತ್ತೂರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನಲ್ಲಿ ಜರುಗಿದೆ.

ತಾಲೂಕಿನ ಚಿಕ್ಕಸಾಗ್ಗೇರೆ ಗ್ರಾಮದ ವೇಣುಗೋಪಾಲ್ ಮಡದಿ ಲಕ್ಷ್ಮೀದೇವಮ್ಮ (37) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ಬೀದರ್: ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷನ ಬರ್ಬರ ಹತ್ಯೆ

ಮೃತೆ ಲಕ್ಷ್ಮಿದೇವಮ್ಮ ಹಾಗೂ ಮಗಳಾದ ದೀಪಿಕಾ ನಡುವೆ ಜಗಳವಾಗಿದ್ದು, ಭಾನುವಾರ ಮಧ್ಯಾಹ್ನ ಇಬ್ಬರೂ ಬೈದಾಡುವಾಗ ಸಾಯುವಂತೆ ಇಬ್ಬರೂ ಮಾತು ಬೆಳೆಸಿ ವಿಕೋಪಕ್ಕೆ ಹೋದಾಗ ತಾಯಿ ಲಕ್ಷ್ಮಿ ದೇವಮ್ಮ ನಾನೇ ಸಾಯುತ್ತೇನೆ ಎಂದು ಮನೆಯಿಂದ ಕೈನೆಟಿಕ್ ಬಜಾಜ್ ದ್ವಿಚಕ್ರವಾಹನದಲ್ಲಿ ಹೊರಟವರು ನೇರವಾಗಿ ಮಾವತ್ತೂರು ಕೆರೆಯ ಬಳಿ ಬಂದು ಅರಸೇಶ್ವರಿ ದೇವಸ್ಥಾನಕ್ಕೆ ಕೈಮುಗಿದು ಕೆರೆ ಏರಿ ಹತ್ತಿದವಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಲಕ್ಷ್ಮಿದೇವಮ್ಮ ಕೆರೆ ಏರುವುದನ್ನ ಮೇಕೆ ಮೇಯಿಸುವವರು ನೋಡಿದರಾದರು ಸಿನಿಮೀಯ ರೀತಿಯಲ್ಲಿ ಈಕೆ ಏಕಏಕಿ ತೂಬಿನ ಏರಿಯಿಂದ ಕೆರೆಗೆ ಜಿಗಿದು ನೀರಿನಲ್ಲಿ ಮುಳುಗಿದ್ದಾಳೆ, ಸಾರ್ವಜನಿಕರು ಕಂಡರಾದರೂ 10-15 ನಿಮಿಷವಾದ ಕಾರಣ ಯಾರೊಬ್ಬರೂ ನೀರಿನಲ್ಲಿ ಮುಳುಗಿ ಮೇಲೆತ್ತುವ ಸಾಹಸಕ್ಕೆ ಕೈ ಹಾಕಲಿಲ್ಲ ಎನ್ನಲಾಗಿದ್ದು, ಸಾರ್ವಜನಿಕರು ವಿಚಾರವನ್ನು ಲಕ್ಷ್ಮಿದೇವಮ್ಮನವರ ಮನೆಗೆ ಹಾಗೂ ಪೊಲೀಸ್ ಠಾಣೆಗೆ ಸುದ್ದಿ ತಿಳಿಸಿದ ನಂತರ ಅಗ್ನಿಶಾಮಕದಳ ಹಾಗೂ ಈಜು ತಜ್ಞರು ಸೋಮವಾರ ಬೆಳಿಗ್ಗೆ 9ರ ಸಮಯಕ್ಕೆ ಲಕ್ಷ್ಮೀದೇವಮ್ಮ ಮೃತ ದೇಹವನ್ನು ಹೊರ ತೆಗೆದಿದ್ದಾರೆ.

ಈ ಸಂಬಂಧ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಅನಿಲ್ ಹಾಗೂ ಪಿಎಸೈ ರೇಣುಕಾ ಯಾದವ್ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

PREV
click me!

Recommended Stories

ಡಿವೈಡರ್‌ನಿಂದ ಹಾರಿ KSRTC ಬಸ್‌ಗೆ ಡಿಕ್ಕಿಯಾದ ಕಾರ್, ಮೂರು ಸಾವು ಚೆಲ್ಲಾಪಿಲ್ಲಿಯಾದ ಮೃತದೇಹಗಳು
ಸರ್ಕಾರಿ ಶಾಲೆ ಟಾಯ್ಲೆಟ್‌ ಸ್ವಚ್ಛತೆಗೆ ಉದ್ಯಮಿ ನೆರವು