ತುಮಕೂರು: ಅಗ್ರಹಾರ ಕೆರೆಗೆ 10 ದಿನದಲ್ಲಿ ಹೇಮಾವತಿ ನೀರು

By Kannadaprabha NewsFirst Published Mar 17, 2024, 11:35 AM IST
Highlights

ಅಧಿಕಾರಿಗಳು ಮುಂದಿನ 2 ತಿಂಗಳು ಕೇಂದ್ರ ಸ್ಥಾನ ಬಿಟ್ಟು ಹೋಗಬಾರದು. ದಿನದ 24 ಗಂಟೆಯು ಕುಡಿಯುವ ನೀರಿನ ಸರಬರಾಜಿಗೆ ಶ್ರಮಿಸಬೇಕಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

 ಕೊರಟಗೆರೆ :  ಜೆಟ್ಟಿ ಅಗ್ರಹಾರ ಕೆರೆಗೆ ಇನ್ನೂ ಮುಂದಿನ ೧೦ದಿನದಲ್ಲಿ ಹೇಮಾವತಿ ನೀರು ಸರಬರಾಜು ಆಗಲಿದೆ. ಸಾಧ್ಯವಾದ್ರೇ ಜಂಪೇನಹಳ್ಳಿ ಕೆರೆಗೂ ಸರಬರಾಜು ಮಾಡುವ ಯೋಜನೆ ರೂಪಿಸಿ. ಪಪಂನ ೧೫ ವಾರ್ಡ್‌ಗಳಿಗೆ ಕನಿಷ್ಠ 4 ದಿನಕ್ಕೊಮ್ಮೆ ನೀರು ಸರಬರಾಜು ಮಾಡಲೇಬೇಕು. ಅಧಿಕಾರಿಗಳು ಮುಂದಿನ 2 ತಿಂಗಳು ಕೇಂದ್ರ ಸ್ಥಾನ ಬಿಟ್ಟು ಹೋಗಬಾರದು. ದಿನದ 24 ಗಂಟೆಯು ಕುಡಿಯುವ ನೀರಿನ ಸರಬರಾಜಿಗೆ ಶ್ರಮಿಸಬೇಕಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ಕೊರಟಗೆರೆ ಪಟ್ಟಣದ ಪಪಂ ಕಚೇರಿ ಕಾರ್ಯಲಯದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ೨೦೨೪-೨೫ನೇ ಸಾಲಿನ ಆಯವ್ಯಯ ಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ಗಂಗಾ ಕಲ್ಯಾಣ ಡಿಬಿಟಿ ಯೋಜನೆಯಡಿ ೧೭ ರೈತರಿಗೆ ಮೋಟಾರ್ ಪಂಪ್‌ ವಿತರಿಸಿ ಮಾತನಾಡಿದರು.

ಕೊರಟಗೆರೆ ಪಟ್ಟಣದ ೧೫ ವಾರ್ಡುಗಳಿಗೆ ೬ ದಿನಕ್ಕೊಮ್ಮೆ ನೀರು ಸರಬರಾಜು ಆಗುತ್ತಿದೆ. ಜಂಪೇನಹಳ್ಳಿ ಕೆರೆ ನೀರು ಖಾಲಿಯಾಗಿದೆ ಮತ್ತು ಜೆಟ್ಟಿ ಅಗ್ರಹಾರ ಕೆರೆಯಲ್ಲಿ ಶೇ.೪೫ರಷ್ಟು ಮಾತ್ರ ನೀರಿದೆ. ೩೦ಕೊಳವೆ ಬಾವಿಯಲ್ಲಿ ೫ರಲ್ಲಿ ನೀರು ನಿಂತಿದೆ. ಇನ್ನೂಳಿದ ೧೩ರಿಂದ ಮಾತ್ರ ಸಮರ್ಪಕ ನೀರು ಸರಬರಾಜು ಆಗ್ತಿದೆ. ಹೊಸದಾಗಿ ಕೊಳವೆ ಬಾವಿ ಕೊರೆಸಲು ರೂಪುರೇಷು ಸಿದ್ಧವಾಗಿವೆ ಎಂದು ಗೃಹಸಚಿವರಿಗೆ ಪಪಂ ಸಿಇಒ ಮತ್ತು ಇಂಜಿನಿಯರ್ ಮಾಹಿತಿ ನೀಡಿದರು.

ಕಲಾಭವನ, ಮಾರ್ಕೆಟ್ ಸ್ಥಳ ವೀಕ್ಷಣೆ..

ಪಪಂ ಮುಂಭಾಗ ಕಲಾಭವನ ಮತ್ತು ಮಾರ್ಕೆಟ್ ನಿರ್ಮಾಣಕ್ಕಾಗಿ ಮೀಸಲಿರುವ ಸ್ಥಳವನ್ನು ಗೃಹಸಚಿವ ಡಾ.ಜಿ.ಪರಮೇಶ್ವರ ಸರಕಾರಿ ಅಧಿಕಾರಿಗಳ ಜೊತೆಗೂಡಿ ವಿಕ್ಷಣೆ ಮಾಡಿದರು. ತ್ವರಿತವಾಗಿ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿ ಕಾಮಗಾರಿ ಪ್ರಾರಂಭ ಮಾಡುತ್ತೇನೆ. ನಂತರ ಸಂತೆಮೈದಾನದ ಜಾಗವನ್ನು ಉನ್ನತೀಕರಣ ಮಾಡುವ ಭರವಸೆ ನೀಡಿದರು.

೨೦೨೪-೨೫ನೇ ಸಾಲಿನಲ್ಲಿ  23,07,49,771 ರು. ಜಮಾ, 23,01,57,433  ಖರ್ಚು ಹಾಗೂ 5,92,338  ರು. ಉಳಿತಾಯದ ಬಜೆಟ್ ಅಧ್ಯಕ್ಷೀಯಾಧಿಕಾರಿ ಮಂಜುನಾಥ ಮತ್ತು ಪಪಂ ಸಿಇಒ ಭಾಗ್ಯಮ್ಮ ನೇತೃತ್ವದಲ್ಲಿ ಮಂಡನೆ ಆಗಿದೆ. ಪಪಂಯ ನೀರಿಕ್ಷಿತ ಆದಾಯ 23,66,7337  ಸರ್ಕಾರದ ನಿರೀಕ್ಷತಾ ಅನುದಾನ 20,70, 82,434 ರು. ಆಗಿದೆ.

ಕಾರ್ಯಕ್ರಮದಲ್ಲಿ ತುಮಕೂರು ಎಸ್ಪಿ ಅಶೋಕ್, ಜಿಲ್ಲಾ ವ್ಯವಸ್ಥಾಪಕ ನಿರ್ದೇಶಕ ಡಿ.ಜಯರಾಮಣ್ಣ, ಮಧುಸೂದನ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಶೇಖರ್, ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಅರಕೆರೆಶಂಕರ್, ಅಶ್ವತ್ಥ ನಾರಾಯಣ್, ಕೊರಟಗೆರೆ ತಹಸೀಲ್ದಾರ್ ಮಂಜುನಾಥ.ಕೆ, ತಾಪಂ ಇಒ ಅಪೂರ್ವ, ಜಿಪಂ ಎಇಇ ರವಿಕುಮಾರ್, ಪಪಂ ಸಿಇಓ ಭಾಗ್ಯಮ್ಮ, ಸದಸ್ಯರಾದ ಬಲರಾಮಯ್ಯ, ಓಬಳರಾಜು, ನಟರಾಜ್.ಕೆ.ಎನ್, ಲಕ್ಷ್ಮೀನಾರಾಯಣ್, ಪ್ರದೀಪಕುಮಾರ್ ನಂದೀಶ್ ಸೇರಿದಂತೆ ಇತರರು ಇದ್ದರು.

ಗೃಹಸಚಿವರ ಕ್ಷೇತ್ರ ಎಂಬುದು ನೆನಪಿರಲಿ..!

ಪಪಂ ಸದಸ್ಯರು ಸುಮ್ನೆ ಅಧಿಕಾರಿಗಳ ಮೇಲೆ ಗಲಾಖೆ ಮಾಡೋದು ಮಾಡಿದ್ರೇ ದೂರು ನೀಡಿ ಅರೇಸ್ಟ್ ಮಾಡಿಸ್ತೀನಿ. ಕೊರಟಗೆರೆ ಪಪಂಗೆ ತುಂಬಾನೇ ಕೆಟ್ಟ ಹೆಸರು ಬರ್ತಿದೆ. ಪಪಂ ಸದಸ್ಯರ ಬಗ್ಗೆ ಹತ್ತಾರು ದೂರುಗಳು ನನಗೇ ಬಂದಿದೆ. ರಾಜಕೀಯ ಮಾಡೋದು ನನಗೆ ಗೊತ್ತಿದೆ. ರಾಜಕೀಯನೇ ಮಾಡಬೇಕಾದ್ರೇ ನಾಳೆಯಿಂದಾನೇ ಶುರು ಮಾಡ್ತೀನಿ. ಕೊರಟಗೆರೆ ಗೃಹ ಸಚಿವರ ಕ್ಷೇತ್ರ ಎಂಬುದು ಪಪಂ ಸದಸ್ಯರಿಗೆ ನೆನಪಿರಲಿ ಅಷ್ಟೆ ಎಂದರು.

ಪ್ರಸ್ತುತ ನನ್ನ ಬಳಿ 1 ಕೋಟಿ ಅನುಧಾನ ಲಭ್ಯವಿದೆ. ಜನ ಸಮುದಾಯಕ್ಕೆ ಅನುಕೂಲ ಆಗುವಂತಹ ಯಾವುದೇ ಕೆಲಸವಿದ್ರು ಪಕ್ಷತೀತವಾಗಿ ಅನುದಾನ ಕೋಡ್ತಿನಿ. ೧೦ ಕೋಟಿ ರು. ವೆಚ್ಚದ ವೈಟ್‌ಟಾಪಿಂಗ್ ಸಿಸಿ ರಸ್ತೆ ಅನುದಾನ ಕೊರತೆಯಿಂದ ಅರ್ಧಕ್ಕೆ ನಿಂತಿದೆ. ಪಿಬ್ಲ್ಯುಡಿಯಿಂದ ಸಿಸಿ ರಸ್ತೆಗೆ ಹೆಚ್ಚುವರಿ ೫ ಕೋಟಿ ರು.ಅನುದಾನ ತರ್ತಿನಿ. ಪಪಂಗೆ ೨೦೧೮-೧೯ನೇ ಸಾಲಿನ ೬ಕೋಟಿ ಕಾಮಗಾರಿಯ ಹಣವೇ ಬಂದಿಲ್ಲ. ತಕ್ಷಣ ಸಿಎಂ ಜೊತೆ ಮಾತನಾಡಿ ಹಣ ಬಿಡುಗಡೆ ಮಾಡಿಸುತ್ತೇನೆ ಎಂದರು\ 

 ಕೋಟಿ ಅನುದಾನ ಲಭ್ಯ ಬಳಸಿಕೊಳ್ಳಿ 

ಪ್ರಸ್ತುತ ನನ್ನ ಬಳಿ 1 ಕೋಟಿ ಅನುಧಾನ ಲಭ್ಯವಿದೆ. ಜನ ಸಮುದಾಯಕ್ಕೆ ಅನುಕೂಲ ಆಗುವಂತಹ ಯಾವುದೇ ಕೆಲಸವಿದ್ರು ಪಕ್ಷತೀತವಾಗಿ ಅನುದಾನ ಕೋಡ್ತಿನಿ. 10 ಕೋಟಿ ರು. ವೆಚ್ಚದ ವೈಟ್‌ಟಾಪಿಂಗ್ ಸಿಸಿ ರಸ್ತೆ ಅನುದಾನ ಕೊರತೆಯಿಂದ ಅರ್ಧಕ್ಕೆ ನಿಂತಿದೆ. ಪಿಬ್ಲ್ಯುಡಿಯಿಂದ ಸಿಸಿ ರಸ್ತೆಗೆ ಹೆಚ್ಚುವರಿ ೫ ಕೋಟಿ ರು.ಅನುದಾನ ತರ್ತಿನಿ. ಪಪಂಗೆ ೨೦೧೮-೧೯ನೇ ಸಾಲಿನ ೬ಕೋಟಿ ಕಾಮಗಾರಿಯ ಹಣವೇ ಬಂದಿಲ್ಲ. ತಕ್ಷಣ ಸಿಎಂ ಜೊತೆ ಮಾತನಾಡಿ ಹಣ ಬಿಡುಗಡೆ ಮಾಡಿಸುತ್ತೇನೆ ಎಂದರು 

click me!