ತುಮಕೂರು : ಕೊಳೆಗೇರಿ ನಿವಾಸಿಗಳಿಗೆ ಮನೆ ಹಂಚಿಕೆ ಪತ್ರ ವಿತರಣೆ

By Kannadaprabha NewsFirst Published Mar 16, 2024, 10:37 AM IST
Highlights

ದಿಬ್ಬೂರಿನ ದೇವರಾಜ್‌ ಅರಸು ಬಡಾವಣೆಯ1200 ವಸತಿ ಸಮುಚ್ಛಯದ ನಿವಾಸಿಗಳಿಗೆ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ಹಂಚಿಕೆ ಪತ್ರ ವಿತರಣೆ ಹಾಗೂ ತುಮಕೂರು ಮಹಾನಗರ ಪಾಲಿಕೆಯಿಂದ ವಾಜಪೇಯಿ ನಗರ ವಸತಿ ಯೋಜನೆ ಫಲಾನುಭವಿಗಳಿಗೆ ಮಂಜೂರಾತಿ ಪತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ವಿತರಿಸಿದರು.

 ತುಮಕೂರು :  ದಿಬ್ಬೂರಿನ ದೇವರಾಜ್‌ ಅರಸು ಬಡಾವಣೆಯ1200 ವಸತಿ ಸಮುಚ್ಛಯದ ನಿವಾಸಿಗಳಿಗೆ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ಹಂಚಿಕೆ ಪತ್ರ ವಿತರಣೆ ಹಾಗೂ ತುಮಕೂರು ಮಹಾನಗರ ಪಾಲಿಕೆಯಿಂದ ವಾಜಪೇಯಿ ನಗರ ವಸತಿ ಯೋಜನೆ ಫಲಾನುಭವಿಗಳಿಗೆ ಮಂಜೂರಾತಿ ಪತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ವಿತರಿಸಿದರು.

ನಗರದ ಎಂಪ್ರೆಸ್ ಸಭಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಸರ್ಕಾರದ ಗ್ಯಾರಂಟಿಗಳು ಹಾಗೂ ವಿವಿಧ ವಸತಿ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಯಿತು.

2017ರಲ್ಲಿಯಡಿಯಲ್ಲಿ ಹಂಚಿಕೆಯಾದ ದಿಬ್ಬೂರು ದೇವರಾಜ್‌ ಅರಸು ಬಡಾವಣೆಯ 1200 ಕುಟುಂಬಗಳಿಗೆ ಹಂಚಿಕೆ ಪತ್ರ ಸೇರಿದಂತೆ ನಾಗರಿಕ ಮೂಲಭೂತ ಸೌಕರ್ಯಗಳು ಹಾಗೂ ನಿವೇಶನ ರಹಿತರಿಗೆ ವಸತಿ ಬೇಡಿಕೆ ಹಾಗೂ ವಿವಿಧ ಕೊಳೆಗೇರಿ ನಿವಾಸಿಗಳ ಹಕ್ಕೋತ್ತಾಯಗಳನ್ನು ಸತತವಾಗಿ ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಜಿಲ್ಲಾಡಳಿತದ ಗಮನ ಸೆಳೆಯುತ್ತ ಬಂದಿತ್ತು.

ಜಿಲ್ಲಾ ಉಸ್ತುವಾರಿ ಸಚಿವರ ಜನತಾ ದರ್ಶನದಲ್ಲಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿ ಕಾರಿಗಳ ಗಮನ ಸೆಳೆಯಲಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಡಿ.ಸಿ ಶುಭಾ ಕಲ್ಯಾಣ್‌ 2 ಸುತ್ತು ಅಧಿಕಾರಿಗಳ ಸಭೆ ನಡೆಸಿ, 400 ಕುಟುಂಬಗಳ ಸಮೀಕ್ಷೆ ಮತ್ತು 4 ಎಕರೆ ಜಾಗವನ್ನು ಗುರುತಿಸಿರುವುದು ಹಾಗೂ ದಿಬ್ಬೂರಿನ ಸ್ಲಂ ನಿವಾಸಿಗಳಿಗೆ ಹಂಚಿಕೆ ಪತ್ರ ನಗರ ಪಾಲಿಕೆಗೆ ಹಸ್ತಾಂತರವನ್ನುಆದ್ಯತೆ ಮೇಲೆ ಪರಿಹರಿಸಲು ನಗರ ಪಾಲಿಕೆಯ ಆಯುಕ್ತರಿಗೆ ಸೂಚನೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್, ಜಿಲ್ಲಾಧಿಕಾರಿ ಶುಭಕಲ್ಯಾಣ್ ಹಾಗೂ ನಗರಪಾಲಿಕೆ ಆಯುಕ್ತರಾದ ಅಶ್ವಿಜ, ನಗರಾಭಿವೃದ್ಧಿ ಕೋಶ, ಸ್ಲಂ ಬೋರ್ಡ್ ಅಧಿಕಾರಿಗಳನ್ನು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಅಧ್ಯಕ್ಷ ಎ.ನರಸಿಂಹಮೂರ್ತಿ ಹಾಗೂ ಪದಾಧಿಕಾರಿಗಳು ಅಭಿನಂಧಿಸಿದ್ದಾರೆ.

ಇನ್ನು ಕಾಂಗ್ರೆಸ್ ಪಕ್ಷ ಸ್ಲಂ ನಿವಾಸಿಗಳಿಗೆ 2023ರ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ತುರ್ತಾಗಿ ಈಡೇರಿಸಬೇಕು. ನಗರೀಕರಣಕ್ಕೆ ಪೂರಕವಾದ ಸ್ಲಂ ಕಾಯಿದೆಯನ್ನು ಜಾರಿಗೆ ತರುವ ಉಚಿತ ಮನೆಗಳ ಗ್ಯಾರಂಟಿ ನೀಡಿತ್ತು. ಆಧ್ಯತೆ ಮೇಲೆ ಸರ್ಕಾರ ಪರಿಗಣಿಸಬೇಕೆಂದು ಡಾ. ಜಿ. ಪರಮೇಶ್ವರ್‌ರವರನ್ನು ಸ್ಲಂಜನಾಂದೋಲನ ಕರ್ನಾಟಕ ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಆಗ್ರಹಿಸಿದೆ.

click me!