
ತುಮಕೂರು (ಮಾ.10): ಆಟೋದಲ್ಲಿ ಬಿಟ್ಟುಹೋಗಿದ್ದ ಭಾರೀ ಪ್ರಮಾಣದ ಚಿನ್ನಾಭರಣವನ್ನು ಮರಳಿಸಿ ಆಟೋಡ್ರೈವರ್ ಪ್ರಾಮಾಣಿಕತೆ ಮೆರೆದಿದ್ದಾನೆ. ಚಿನ್ನಾಭರಣವಿದ್ದ ಬ್ಯಾಗ್ ಹಿಂತಿರುಗಿಸಿ ಆಟೋಚಾಲಕ ಪ್ರಾಮಾಣಿಕತೆ ಮೆರೆದಿದ್ದಾನೆ. ಸುಮಾರು 4 ಲಕ್ಷ ಬೆಲೆ ಬಾಳುವ ಒಡವೆ ಇದ್ದ ಬ್ಯಾಗ್ಅನ್ನು ಪ್ರಯಾಣಿಕರೊಬ್ಬರು ಮರೆತು ಆಟೋದಲ್ಲಿಯೇ ಬಿಟ್ಟುಹೋಗಿದ್ದರು. ಆಟೋದಿಂದ ಪ್ರಯಾಣಿಕರು ಇಳಿದ ಬಳಿಕ ಆಟೋಚಾಲಕ ಡ್ರೈವರ್‌ಗೆ ಇದು ಗೊತ್ತಾಗಿದೆ. ಆಟೋ ಡ್ರೈವರ್ ಈ ಬಗ್ಗೆ ಪೊಲೀಸರಿಗೆ ದೂರು ನೀಡುವ ವೇಳೆಗಾಗಲೇ, ಚಿನ್ನಾಭರಣ ಕಾಣೆಯಾಗಿರುವ ಬಗ್ಗೆ ದೂರು ನೀಡಲು ಮಹಿಳೆಯೂ ಪೊಲೀಸ್ ಠಾಣೆಗೆ ಬಂದಿದ್ದರು. ಈ ವೇಳೆ ಆಟೋ ಚಾಲಕ, ಚಿನ್ನವನ್ನು ಮಹಿಳೆಗೆ ಹಸ್ತಾಂತರ ಮಾಡಿದ್ದಾರೆ.
ಪ್ರಾಮಾಣಿಕತೆ ಮೆರೆದ ಆಟೋಚಾಲಕ ರವಿಕುಮಾರ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ರವಿಕುಮಾರ್, ತುಮಕೂರು ನಗರದ ಹನುಮಂತಪುರ ನಿವಾಸಿಯಾಗಿದ್ದಾನೆ. ಅರಸಿಕೆರೆ ಮೂಲದ ಗಾಯತ್ರಿ ಎನ್ನುವವರು ತಮ್ಮ ಬ್ಯಾಗ್ಅನ್ನು ಆಟೋದಲ್ಲಿ ಬಿಟ್ಟುಹೋಗಿದ್ದರು. ಕುಂದೂರು ಗ್ರಾಮದ ಸಂಭಂದಿಕರ ಮನೆಗೆ ಸಿಮಂತ ಕಾರ್ಯಕ್ಕೆ ಗಾಯತ್ರಿ ಬಂದಿದ್ದರು. ಕಾರ್ಯಕ್ರಮ ಮುಗಿಸಿ ಮೂರು ಜನ ಆಟೋದಲ್ಲಿ ಬಸ್ ನಿಲ್ದಾಣಕ್ಕೆ ತೆರಳಿದ್ದರು. ಬಸ್ ನಿಲ್ದಾಣದಲ್ಲಿ ಇಳಿಯುವಾಗ ಆಟೋದಲ್ಲೆ ಬ್ಯಾಗ್ ಬಿಟ್ಟು ಹೋಗಿದ್ದರು.
ಬ್ಯಾಗ್ ಗಮನಿಸಿದ ಆಟೋ ಚಾಲಕ ರವಿಕುಮಾರ್ ಪ್ರಯಾಣಿಕರಿಗಾಗಿ ಹುಡುಕಾಟ ಮಾಡಿದ್ದರು. ಇತ್ತ ಪ್ರಯಾಣಿಕರು ಆಟೋಗಾಗಿ ಹುಡುಕಾಡಿದ್ದರು. ಕೊನೆಗೆ ಆಟೋ ಸಿಗದೆ ದೂರು ನೀಡಲು ಪೊಲೀಸ್ ಠಾಣೆಗೆ ಬಂದಿದ್ದರು. ಅದೇ ಸಮಯಕ್ಕೆ ಪ್ರಯಾಣಿಕರು ಸಿಗದೆ ಬ್ಯಾಗ್ ಅನ್ನು ಠಾಣೆಗೆ ಒಪ್ಪಿಸಲು ಆಟೋ ಚಾಲಕ ರವಿಕುಮಾರ್ ಬಂದಿದ್ದ. ಆಟೋ ಚಾಲಕ ರವಿಕುಮಾರ್ ಕಂಡು ಗಾಯತ್ರಿ ನಿಟ್ಟುಸಿರುವ ಬಿಟ್ಟಿದ್ದಾರೆ.
ಇಂಜಿನಿಯರಿಂಗ್ ಓದುತ್ತಿದ್ದ ಯುವಕ, ಮಾಡುತ್ತಿದ್ದುದು ಮಹಿಳೆಯರ ಒಳ ಉಡುಪು ಕದಿಯೋ ಕಾಯಕ!
ಬ್ಯಾಗ್ ನಲ್ಲಿ ಸುಮಾರು 4 ಲಕ್ಷ ಬೆಲೆ ಬಾಳುವ 52 ಗ್ರಾಂ ನಷ್ಟು ಚಿನ್ನಾಭರಣ ಗಳಿದ್ದವು. ಪ್ರಯಾಣಿಕರನ್ನ ಖಚಿತ ಪಡಿಸಿಕೊಂಡು ಪೊಲೀಸರು ಬ್ಯಾಗ್ ಒಪ್ಪಿಸಿದ್ದಾರೆ. ಆಟೋ ಚಾಲಕ ರವಿಕುಮಾರ್ ಪ್ರಾಮಾಣಿಕತೆಗೆ ಪೊಲೀಸರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಆಟೋಚಾಲಕನ ಪ್ರಾಮಾಣಿಕತೆಗೆ 200 ಬೆಲೆ ಕಟ್ಟಲು ಪ್ರಯಾಣಿಕರು ಮುಂದಾಗಿದ್ದಾರೆ. ಆದರೆ, ಇದನ್ನು ರವಿಕುಮಾರ್ ತಿರಸ್ಕರಿಸಿದ್ದಾರೆ. ತುಮಕೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ತುಮಕೂರು: ಲಂಚ ಕೇಳಿದ ಭ್ರಷ್ಟ ಅಧಿಕಾರಿಯ ಟೇಬಲ್ ಮೇಲೆ ಚಿಲ್ಲರೆ ಸುರಿದು ಪ್ರತಿಭಟಿಸಿದ ರೈತರು!