ಅನಾರೋಗ್ಯದ ನಡುವೆ ಸಭೆ ನಡೆಸಿದ ತುಮಕೂರು ಸಂಸದ ಜಿ.ಎಸ್.ಬಸವರಾಜು

Published : Sep 13, 2019, 11:53 AM IST
ಅನಾರೋಗ್ಯದ ನಡುವೆ ಸಭೆ ನಡೆಸಿದ ತುಮಕೂರು ಸಂಸದ ಜಿ.ಎಸ್.ಬಸವರಾಜು

ಸಾರಾಂಶ

ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿರುವ ಜಿ.ಎಸ್.ಬಸವರಾಜು ಅದರ ನಡುವೆಯೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. 

ತುಮಕೂರು [ಸೆ.13] :  ಅನಾರೋಗ್ಯದ ನಡುವೆಯೂ ಕುಡಿಯುವ ಹಾಗೂ ನೀರಾವರಿಗೆ ಸಂಬಂಧಿಸಿದಂತೆ ತುಮಕೂರು ಲೋಕಸಭಾ ಸದಸ್ಯ ಜಿ.ಎಸ್‌.ಬಸವರಾಜ್‌ ತಮ್ಮ ನಿವಾಸದಲ್ಲೇ ಸಭೆ ನಡೆಸಿದರು.

ಒಂದು ವಾರದಿಂದ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಅವರು, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಎತ್ತಿನಹೊಳೆಯಿಂದ ಬ್ರಹ್ಮಸಂದ್ರ ಕೆರೆ, ಕೋರಾ ಕೆರೆ, ಮಾವುಕೆರೆ, ಕೆಸ್ತೂರು ಕೆರೆ ಹಾಗೂ ಹೆಬ್ಬಾಕ ಕೆರೆಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ನೀರು ಹರಿಸುವ ಬಗ್ಗೆ ಚರ್ಚೆ ನಡೆಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗಂಗಸಂದ್ರ ಕೆರೆಯಿಂದ ಮರಳೂರು ಕೆರೆ ಹಾಗೂ ಶೆಟ್ಟಿಹಳ್ಳಿಯ ಉತ್ತರಕಟ್ಟೆಕೆರೆಗೆ ನೀರನ್ನು ಪಂಪು ಮಾಡುವ ಬಗ್ಗೆ ಹಾಗೂ ಕ್ಯಾತಸಂದ್ರದ ಗುಂಡ್ಲಮ್ಮ ಕೆರೆಯಲ್ಲಿ ಕೊಳಚೆ ನೀರನ್ನು ಸಂಸ್ಕರಿಸಿ, ಕೆರೆಯನ್ನು ಅಭಿವೃದ್ಧಿಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ನಡೆಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.

PREV
click me!

Recommended Stories

ಬೆಳಗಾವಿಯಲ್ಲಿ ಅಪ್ರಾಪ್ತೆಯ ಅತ್ಯಾ*ಚಾರವೆಸಗಿದಾತನಿಗೆ 30 ವರ್ಷ ಜೈಲು, ಮಂಡ್ಯದಲ್ಲಿ ಚಿಂದಿ ಆಯುತ್ತಿದ್ದ ಅತ್ಯಾ*ಚಾರಿಗಳಿಗೆ ಜೀವಾವಧಿ ಪ್ರಕಟ
Lakkundi Excavation: ಬಯೋಮೆಟ್ರಿಕ್ ಹಾಜರಾತಿಗೆ ಹೈರಾಣಾದ ಕಾರ್ಮಿಕರು, ಬೆನ್ನಲ್ಲೇ ಹಣತೆ ಆಕಾರದ ಲೋಹದ ತುಂಡು ಪತ್ತೆ