ತುಮಕೂರು ಅರಣ್ಯ ಇಲಾಖೆಗೆ ತಲೆ‌ ಬಿಸಿ ತಂದ ಹುಲಿ ಸಾವು ಪ್ರಕರಣ, ಸತ್ತಿರುವುದು ಹೊರ ರಾಜ್ಯದ ಹುಲಿ ಸಾಧ್ಯತೆ?

By Suvarna News  |  First Published Feb 17, 2023, 10:15 PM IST

ರಾಷ್ಟ್ರೀಯ ಪ್ರಾಣಿ ಹುಲಿ ಕರ್ನಾಟಕದ ಕೆಲವೇ ಜಿಲ್ಲೆಯಲ್ಲಿರುವ ಅಭಯಾರಣ್ಯದಲ್ಲಿ ಮಾತ್ರ ಕಾಣಸಿಗುತ್ತವೆ.. ಆದ್ರೆ ಕಲ್ಪತರು ನಾಡಲ್ಲಿ ಹುಲಿಯ ಮೃತ ಪಟ್ಟಿರುವ ಕಳೇಬರ ಪತ್ತೆ ಯಾಗಿದ್ದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.


ವರದಿ : ಮಹಂತೇಶ್ ಕುಮಾರ್ ಏಷ್ಯನೆಟ್ ಸುವರ್ಣ ನ್ಯೂಸ್  

ತುಮಕೂರು(ಫೆ.17): ರಾಷ್ಟ್ರೀಯ ಪ್ರಾಣಿ ಹುಲಿ ಕರ್ನಾಟಕದ ಕೆಲವೇ ಜಿಲ್ಲೆಯಲ್ಲಿರುವ ಅಭಯಾರಣ್ಯದಲ್ಲಿ ಮಾತ್ರ ಕಾಣಸಿಗುತ್ತವೆ.. ಆದ್ರೆ ಕಲ್ಪತರು ನಾಡಲ್ಲಿ ಹುಲಿಯ ಮೃತ ಪಟ್ಟಿರುವ ಕಳೇಬರ ಪತ್ತೆ ಯಾಗಿದ್ದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕಲ್ಪತರು ನಾಡಲ್ಲಿ ಮಾತ್ರ ಅಚ್ಚರಿ ಮನೆಮಾಡಿತ್ತು ಕಾರಣ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಅಂಕಸಂದ್ರ ಅರಣ್ಯ ಬಳಿಯ ಚಿಕ್ಕಹೆಡಿಗೆಹಳ್ಳಿ ಬಳಿ ಪತ್ತೆಯಾಗಿರುವ ಹುಲಿ ಕಳೇಬರ.ಆದರೆ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಹುಲಿ ಎಲ್ಲಿಯದು ಎಂಬ ಗೊಂದಲ ಇದೀಗ ಪ್ರಾಣಿಪ್ರಿಯರಲ್ಲಿ ಮಾತ್ರವಲ್ಲ ಜನಸಾಮಾನ್ಯರಲ್ಲಿಯೂ ಶುರುವಾಗಿದೆ.

Tap to resize

Latest Videos

ಕಳೇಬರ ಪತ್ತೆಯಾದ ಹುಲಿ ಕರ್ನಾಟಕ ಹುಲಿ ಸಂರಕ್ಷಿತ ತಾಣದ್ದಲ್ಲ ಎಂಬುದು ಪ್ರಾಥಮಿಕ ಪರಿಶೀಲನೆಯಿಂದ ದೃಢಪಟ್ಟಿದೇ ಎನ್ನಲಾಗಿದೆ. ಆದರೆ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸಂಬಂಸಿದಂತೆ ಪರಿಶೀಲನೆಗೆ ‘ಹುಲಿಪಟ್ಟೆ’ ಚಿತ್ರಣವನ್ನು ಕಳುಹಿಸಿ ಕೊಡಲಾಗಿದೆಯಂತೆ. ಆದರೆ ಆ ಹುಲಿ ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದ್ದು ಹೇಗೆ ಎಂಬುದು  ಅರಣ್ಯ ಇಲಾಖೆ ಅಧಿಕಾರಿಗಳಿಗೆ ನಿದ್ದೆಕೆಡಿಸಿದೆ. ಆದರೆ ಸುಮಾರು 6-7 ವರ್ಷದ ಗಂಡು ಹುಲಿ ಕಳೇಬರ ಪತ್ತೆಯಾಗಿದ್ದು ಜನರಲ್ಲಿ ಹಾಗೂ ಪ್ರಾಣಿ ಪ್ರಿಯರ ಆಶ್ಚರ್ಯಕ್ಕೆ ಸಾಕ್ಷಿಯಾಗಿದೆ.

ಇನ್ನು ಹುಲಿ ಎಲ್ಲಿಂದ ಬಂತು ಎಂದು ಅದರ ಜಾಡು ಹಿಡಿದು ಅರಣ್ಯ ಇಲಾಖೆ ಹೊರಟಿದ್ದು, ಸದ್ಯಕ್ಕೆ ಕರ್ನಾಟಕದ ಹುಲಿ ಸಂರಕ್ಷಿತ ತಾಣಗಳಲ್ಲಿರುವ ಹುಲಿಗಳ   ಪಟ್ಟೆ ಹೋಲಿಕೆ ಯಾಗದ ಕಾರಣ ಇದು ಕರ್ನಾಟಕದ  ಹುಲಿಯಲ್ಲವೆಂದು ದೃಢಪಟ್ಟಿದೆ.

ಚಿಕ್ಕಮಗಳೂರಿನಲ್ಲಿ ಕಾಡಾನೆ ಜೊತೆಗೆ ಹುಲಿ ಭೀತಿ, ಜಾನುವಾರುಗಳನ್ನು ಕಳೆದುಕೊಳ್ಳುತ್ತಿದೆ ರೈತಾಪಿ ವರ್ಗ

ಭದ್ರಾ ಅಭಯಾರಣ್ಯದಿಂದ ಬೀರೂರು - ಕಡೂರು - ಹೊಸದುರ್ಗ - ಚಿಕ್ಕನಾಯಕನಹಳ್ಳಿಯ ತೀರ್ಥರಾಂಪುರ ಮಾರ್ಗವಾಗಿ ಅಥವಾ ಬನ್ನೇರುಘಟ್ಟ ಉದ್ಯಾನವನದಿಂದ ರಾಮನಗರ, ಮಾಗಡಿ ಮಾರ್ಗವಾಗಿ ಗುಬ್ಬಿಗೆ ಬಂದಿರಬಹುದೆಂದು ಭಾವಿಸಲಾಗಿತ್ತು. ಸದ್ಯ ಸಾವನ್ನಪ್ಪಿರುವ ಹುಲಿಯ ‘ಪಟ್ಟೆ’ ಚಿತ್ರಣವನ್ನು ರಾಷ್ಟ್ರೀಯ ಹುಲಿ ಸಂರಕ್ಷಣೆ ಪ್ರಾಧಿಕಾರಕ್ಕೆ ಮಾಹಿತಿ ನೀಡಲಾಗಿದ್ದು ಹುಲಿಯ ಬಗ್ಗೆ ಮಾಹಿತಿ ಕಲೆ ಹಾಕಲು ಅರಣ್ಯ ಇಲಾಖೆ ಮುಂದಾಗಿದೆ. ರಾಜ್ಯದ ‘ಭದ್ರಾ, ಬಂಡೀಪುರ, ನಾಗರಹೊಳೆ, ಬಿ.ಆರ್.ಟಿ (ಬಿಳಿಗಿರಿ ರಂಗನಾಥ ಟೆಂಪಲ್) ಅಭಯಾರಣ್ಯದಲ್ಲೂ ಈ ಹುಲಿಯ ‘ಪಟ್ಟೆ’ ಹೋಲಿಕೆಯಾಗಿಲ್ಲ ಎಂಬುದು   ತಿಳಿದಿದೆ.

Tumakur : ಹುಲಿ ಜಾಡು ಪತ್ತೆಗೆ ಸಿಸಿ ಕ್ಯಾಮರಾ ಅಳವಡಿಕೆ

ಒಟ್ಟಾರೆ ಕಲ್ಪತರು ನಾಡು ತುಮಕೂರಿನಲ್ಲಿ ಪತ್ತೆಯಾದ ವ್ಯಾಘ್ರನ ಕಳೇಬರದ ಸ್ಯಾಂಪಲ್ ಅನ್ನು ಭಾರತೀಯ ವಿಧಿ ವಿಜ್ಞಾನ ಕೇಂದ್ರಕ್ಕೆ ಗುರುತು ಕಳುಹಿಸಿಕೊಡಲಾಗಿದ್ದು, ಹುಲಿ ಸಾವಿಗೆ ನಿಖರ ಕಾರಣ ತಿಳಿಯ ಬೇಕಿದೆ. 6-7ವರ್ಷದ ಗಂಡು ಹುಲಿ 2.6ಮೀ ದೃಢಕಾಯ ಹೊಂದಿತ್ತು. ದೇಹದ ಹೊರಭಾಗದಲ್ಲಿ ಯಾವುದೇ ಗಾಯದ ಗುರುತು, ರಕ್ತಸ್ರಾವ ಕಂಡುಬಂದಿಲ್ಲ. ವಿಷಪೂರಿತ ಆಹಾರ, ಜಮೀನಿನಲ್ಲಿ ವಿದ್ಯುತ್ ಸ್ಪರ್ಶ, ಹಾವು ಕಚ್ಚಿ, ವಾಹನ ಅಪಘಾತದಿಂದ ಸಾವನ್ನಪ್ಪಿರಬಹುದು ಎಂದು ಊಹಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕವಷ್ಟೇ ಸಾವಿನ ಸೀಕ್ರೆಟ್ ಗೊತ್ತಾಗಲಿದೆ.

click me!