46 ಸೆಕೆಂಡಲ್ಲಿ ಮಾನವನಲ್ಲಿನ 206 ಮೂಳೆ ಹೆಸರೇಳಿ ಮಾಚೇನಹಳ್ಳಿಯ 5 ವರ್ಷದ ಚಾರ್ವಿಕ್

Published : Jul 07, 2026, 07:19 AM IST
Tumakuru

ಸಾರಾಂಶ

ಚಾರ್ವಿಕ್‌, ಇತ್ತೀಚೆಗೆ ತನ್ನ ದೇಹವನ್ನೇ ತೋರಿಸಿಕೊಂಡು ದೇಹದಲ್ಲಿರುವ ಮೂಳೆಯ ಹೆಸರು ಮತ್ತು ಅಲ್ಲಿರುವ ಮೂಳೆಗಳ ಸಂಖ್ಯೆಯನ್ನು ಕೇವಲ 46 ಸೆಕೆಂಡ್‌ನಲ್ಲಿ ಹೇಳುವ ಮೂಲಕ ಈ ಸಾಧನೆ ಮಾಡಿದ್ದಾನೆ.

ತುಮಕೂರು: ಮಾನವನ ದೇಹದಲ್ಲಿರುವ 206 ಮೂಳೆಗಳ ಹೆಸರನ್ನು ಕೇವಲ 46 ಸೆಕೆಂಡ್‌ನಲ್ಲಿ ಹೇಳುವ ಮೂಲಕ ತುರುವೇಕೆರೆ ತಾಲೂಕಿನ ಮಾಚೇನಹಳ್ಳಿ ಗ್ರಾಮದ 5 ವರ್ಷದ ಬಾಲಕ ಚಾರ್ವಿಕ್‌ ಪತ್ರೆಮನೆ, ಇಂಡಿಯಾ ಬುಕ್‌ ಆಫ್ ರೆಕಾರ್ಡ್‌ಗೆ ಸೇರ್ಪಡೆಯಾಗಿದ್ದಾನೆ. ಅಶ್ವಿನ್‌ ಪತ್ರೆಮನೆ ಮತ್ತು ಪವಿತ್ರ ದಂಪತಿ ಪುತ್ರ ಚಾರ್ವಿಕ್‌, ಇತ್ತೀಚೆಗೆ ತನ್ನ ದೇಹವನ್ನೇ ತೋರಿಸಿಕೊಂಡು ದೇಹದಲ್ಲಿರುವ ಮೂಳೆಯ ಹೆಸರು ಮತ್ತು ಅಲ್ಲಿರುವ ಮೂಳೆಗಳ ಸಂಖ್ಯೆಯನ್ನು ಕೇವಲ 46 ಸೆಕೆಂಡ್‌ನಲ್ಲಿ ಹೇಳುವ ಮೂಲಕ ಈ ಸಾಧನೆ ಮಾಡಿದ್ದಾನೆ. 

ಇಲ್ಲಿಯ ಶ್ರೀ ಕೃಷ್ಣ ಪ್ರೀ ಸ್ಕೂಲ್‌ನ ಯುಕೆಜಿಯಲ್ಲಿ ಬಾಲಕ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಈ ಹಿಂದೆ 206 ಮೂಳೆಗಳ ಹೆಸರನ್ನು ಸುಮಾರು 11 ವರ್ಷದ ಬಾಲಕನೋರ್ವ 2.30 ನಿಮಿಷದಲ್ಲಿ ಹೇಳಿದ್ದನೆಂದು ತಿಳಿದುಬಂದಿದೆ.

ಈಗ ಚಾರ್ವಿಕ್‌ ಪತ್ರೆಮನೆ ಕೇವಲ 46 ಸೆಕೆಂಡ್‌ನಲ್ಲಿ ಹೇಳುವ ಮೂಲಕ ನೂತನ ದಾಖಲೆಯನ್ನು ಮಾಡಿದ್ದಾನೆ.

ದಿನಕರ ಕಲಾನಿಕೇತನ ವಿದ್ಯಾರ್ಥಿಗಳ ಸಾಧನೆ

ಕಾರವಾರ: ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮುಂಬಯಿ ಈಚೆಗೆ ನಡೆಸಿದ ಗಂಧರ್ವ ಪ್ರಾರಂಭಿಕ ಮತ್ತು ಪ್ರಾವೇಶಿಕ ಸಂಗೀತ ಪರೀಕ್ಷೆಯಲ್ಲಿ ದಿನಕರ ಕಲಾನಿಕೇತನದ ಕಾರವಾರ ಹಾಗೂ ಅಂಕೋಲಾ ಕೇಂದ್ರಗಳ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.

ಪರೀಕ್ಷೆಗೆ ಹಾಜರಾದ ಒಟ್ಟು 25 ವಿದ್ಯಾರ್ಥಿಗಳಲ್ಲಿ 20 ವಿದ್ಯಾರ್ಥಿಗಳು ಉನ್ನತ ಶ್ರೇಣಿ ಹಾಗೂ ಐದು ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಕಾರವಾರದ ಕಲ್ಪನಾ ರಶ್ಮಿ ಕಲಾ ಲೋಕದಲ್ಲಿ ನಡೆದ ಪ್ರಾರಂಭಿಕ ಪರೀಕ್ಷೆಯಲ್ಲಿ ಡಾ. ಅನುರಾಧ ಗೋವಿಂದರಾಜನ್ ಹಾಗೂ ಅವನಿ ನಾಯ್ಕ ಪ್ರಥಮ, ಮೋನಿಕಾ ಜೆ.ಕೆ. ಹಾಗೂ ಉನ್ನತಿ ನಾಯ್ಕ್ ದ್ವಿತೀಯ ಮತ್ತು ನವಿಕಾ ಭಟ್ ತೃತೀಯ ಸ್ಥಾನ ಗಳಿಸಿದ್ದಾರೆ. ಪ್ರಾವೇಶಿಕ ಪ್ರಥಮದಲ್ಲಿ ವಾತ್ಸಲ್ಯ ಭಂಡಾರಿ ಪ್ರಥಮ ಸ್ಥಾನ ಗಳಿಸಿದ್ದಾರೆ.

PREV
Read more Articles on
click me!

Recommended Stories

ಕೊನೆಗೂ ಶಿವಮೊಗ್ಗಕ್ಕೆ ವಂದೇ ಭಾರತ್ ರೈಲು; ಗುಡ್ ನ್ಯೂಸ್ ಹಂಚಿಕೊಂಡ ಸಂಸದ...!
ತಿರುಪತಿ ಬಳಿಕ ಮಂತ್ರಾಲಯ ಮಠದ ಮೇಲೆ ಸೈಬರ್ ವಂಚಕರ ಕಣ್ಣು! ಭಕ್ತರಿಗೆ ಖುದ್ದಾಗಿ ಶ್ರೀಗಳು ನೀಡಿದ ಎಚ್ಚರಿಕೆ ಏನು?