Tumakur : ಮನೆಯಿಂದಲೇ ಮತದಾನ ಕಾರ್ಯಕ್ಕೆ ಚಾಲನೆ

By Kannadaprabha News  |  First Published Apr 30, 2023, 5:50 AM IST

ರಾಜ್ಯದಲ್ಲಿ ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಇದೇ ಮೊದಲ ಬಾರಿಗೆ ಚುನಾವಣಾ ಆಯೋಗ 80 ವರ್ಷ ಮೇಲ್ಪಟ್ಟಮತದಾರರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಶನಿವಾರದಿಂದ 80 ವರ್ಷ ಮೇಲ್ಪಟ್ಟಮತದಾರರು ಮನೆಯಲ್ಲಿ ಮತದಾನ ಮಾಡುವ ಕಾರ್ಯಕ್ಕೆ ಚಾಲನೆ ದೊರೆಯಿತು.


  ತುಮಕೂರು :  ರಾಜ್ಯದಲ್ಲಿ ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಇದೇ ಮೊದಲ ಬಾರಿಗೆ ಚುನಾವಣಾ ಆಯೋಗ 80 ವರ್ಷ ಮೇಲ್ಪಟ್ಟ ಮತದಾರರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ಶನಿವಾರದಿಂದ 80 ವರ್ಷ ಮೇಲ್ಪಟ್ಟ ಮತದಾರರು ಮನೆಯಲ್ಲಿ ಮತದಾನ ಮಾಡುವ ಕಾರ್ಯಕ್ಕೆ ಚಾಲನೆ ದೊರೆಯಿತು.

80 ವರ್ಷ ಮೇಲ್ಪಟ್ಟಮತದಾರರಿಗೆ ಅನುಕೂಲವಾಗುವಂತೆ ಆಯೋಗ ನಮೂನೆ-12ಡಿ ಮೂಲಕ ಅರ್ಜಿ ಸಲ್ಲಿಸಿ ಅಂಚೆ ಮತಪತ್ರಗಳನ್ನು ಪಡೆದು ಮತದಾನ ಮಾಡಲು ಮೊದಲ ಬಾರಿಗೆ ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಬಿಎಲ್‌ಓಗಳು, ಪಿಡಬ್ಲ್ಯೂಡಿ ಮತ್ತು 80 ವರ್ಷ ಮೇಲ್ಪಟ್ಟಮತದಾರರ ಮನೆಗಳಿಗೆ ತೆರಳಿ ನಮೂನೆ-12 ಡಿ ಅರ್ಜಿಗಳನ್ನು ಹಂಚಿಕೆ ಮಾಡಿದ್ದು, ಮತಗಟ್ಟೆಗಳಿಗೆ ಬರಲು ಇಚ್ಛಿಸದ 80 ವರ್ಷ ಮೇಲ್ಪಟ್ಟಮತದಾರರು ಅಂಚೆ ಮತಪತ್ರಗಳ ಮೂಲಕ ಮನೆಯಲ್ಲೆ ಮತ ಚಲಾಯಿಸಿದರು. ನಗರದ ಚಿಕ್ಕಪೇಟೆಯಲ್ಲಿರುವ 80 ವರ್ಷ ಮೇಲ್ಪಟ್ಟಸುಗಂಧರಾಜು ಮತ್ತು ಅವರ ಪತ್ನಿ ವಸಂತಮ್ಮ ಅವರು ತಮ್ಮ ಮನೆಯಲ್ಲೇ ಅಧಿಕಾರಿಗಳು ಮತ್ತು ರಾಜಕೀಯ ಪಕ್ಷಗಳ ಏಜೆಂಟರ್‌ ಸಮ್ಮುಖದಲ್ಲೇ ಅಂಚೆ ಮತಪತ್ರದ ಮೂಲಕ ಮತದಾನ ಮಾಡಿದರು.

Latest Videos

undefined

ಇಂದಿನವರೆಗೆ 1.5 ಲಕ್ಷ ಕೋಟಿ ಹಣವನ್ನು ಬಿಜೆಪಿ ಸರ್ಕಾರ ಜನರಿಂದ ಲೂಟಿ ಮಾಡಿದೆ: ಪ್ರಿಯಾಂಕಾ ಗಾಂಧಿ

ಇಂದಿನಿಂದ 80 ವರ್ಷ ಮೇಲ್ಪಟ್ಟಮತದಾರರ ಅಂಚೆ ಮತಪತ್ರ ಮತದಾನ ಆರಂಭವಾಗಿದ್ದು, ಜಿಲ್ಲೆಯಾದ್ಯಂತ ಈ ಪ್ರಕ್ರಿಯೆ ನಡೆದಿದ್ದು, ಬಿಎಲ್‌ಓ, ಸೆಕ್ಟರ್‌ ಅಧಿಕಾರಿ, ಮತಗಟ್ಟೆಅಧಿಕಾರಿಗಳು, ಮೈಕ್ರೋ ಅಬ್ಸರ್ವರ್‌, ವಿಡಿಯೋ ಗ್ರಾಫರ್‌ಗಳು ಮತದಾರರ ಮನೆಗಳಿಗೆ ತೆರಳಿ ಅಂಚೆ ಮತಪತ್ರಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

22,18,055 ಮತದಾರರು ಮತ ಚಲಾಯಿಸಲು ಅರ್ಹತೆ

ಕಲಬುರಗಿ (ಏ.29): ವಿಧಾನಸಬೆ ಚುನಾವಣೆಗೆ ಇದೇ ಮೇ 10 ರಂದು ಮತದಾನ ನಡೆಯಲಿದ್ದು, ಜಿಲ್ಲೆಯಾದ್ಯಂತ 11,21,972 ಪುರುಷರು, 10,95,754 ಮಹಿಳೆಯರು ಹಾಗೂ ಇತರೆ 329 ಸೇರಿ 22,18,055 ಮತದಾರರು ಮತ ಚಲಾಯಿಸಲು ಅರ್ಹತೆ ಹೊಂದಿದ್ದಾರೆ ಎಂದು ಜಿಲ್ಲಾ‌ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ಹೇಳಿದ್ದಾರೆ. ಕಳೆದ ಜನವರಿಯಲ್ಲಿ ಪ್ರಕಟಗೊಂಡ ಅಂತಿಮ ಮತದಾರರ ಪಟ್ಟಿಯಲ್ಲಿ ಜಿಲ್ಲೆಯಾದ್ಯಂತ 21,71,211 ಮತದಾರರಿದ್ದರು. 

ವಿಧಾನಸಭೆ ಚುನಾವಣೆ ಘೋಷಣೆ ನಂತರ ಏಪ್ರಿಲ್ 10ರ ವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅವಕಾಶ ನೀಡಿದ್ದರಿಂದ  23,423 ಪುರುಷರು, 23,413 ಮಹಿಳೆಯರು ಹಾಗೂ 8 ಇತರೆ ಸೇರಿ 46,844 ಮತದಾರರು ಜಿಲ್ಲೆಯಲ್ಲಿ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು. ಪರಿಷ್ಕೃತ ಅಂತಿಮ‌ ಮತದಾರರ ಪಟ್ಟಿ ಪ್ರಕಾರ‌ ವಿಧಾನಸಭಾ ಕ್ಷೇತ್ರವಾರು ಮತದಾರರ ವಿವರ ಹೀಗಿದೆ. 

click me!