ಶಾಸಕ ವೆಂಕಟರಮಣಪ್ಪ, ತಾಲೂಕು ಕಾಂಗ್ರೆಸ್ ಅಭ್ಯರ್ಥಿ ಎಚ್.ವಿ.ವೆಂಕಟೇಶ್, ತಾಲೂಕು ಕಾಂಗ್ರೆಸ್ ನಗರಾಧ್ಯಕ್ಷ ಸುದೇಶ್‌ಬಾಬು, ಜಿಲ್ಲಾ ವಕೀಲರ ಸಂಘದ ಕಾರ್ಯಕಾರಿ ಮಂಡಳಿ ಸದಸ್ಯ ಬೊಮ್ಮತನಹಳ್ಳಿ ರಾಮಾಂಜಿನಪ್ಪ ಸಮ್ಮುಖದಲ್ಲಿ ಭಾನುವಾರ ಇಲ್ಲಿನ ವೆಂಕಟೇಶ್ವರ ಬಡಾವಣೆಯ ಮುಖಂಡರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.
ಪಾವಗಡ: ಶಾಸಕ ವೆಂಕಟರಮಣಪ್ಪ, ತಾಲೂಕು ಕಾಂಗ್ರೆಸ್ ಅಭ್ಯರ್ಥಿ ಎಚ್.ವಿ.ವೆಂಕಟೇಶ್, ತಾಲೂಕು ಕಾಂಗ್ರೆಸ್ ನಗರಾಧ್ಯಕ್ಷ ಸುದೇಶ್‌ಬಾಬು, ಜಿಲ್ಲಾ ವಕೀಲರ ಸಂಘದ ಕಾರ್ಯಕಾರಿ ಮಂಡಳಿ ಸದಸ್ಯ ಬೊಮ್ಮತನಹಳ್ಳಿ ರಾಮಾಂಜಿನಪ್ಪ ಸಮ್ಮುಖದಲ್ಲಿ ಭಾನುವಾರ ಇಲ್ಲಿನ ವೆಂಕಟೇಶ್ವರ ಬಡಾವಣೆಯ ಮುಖಂಡರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.
ಶಾಸಕ ವೆಂಕಟರಮಣಪ್ಪರಿಂದ ನ್ಯಾಯ ಸಿಗಲಿದೆ. ನಿವೇಶನ ಹಾಗೂ ವಸತಿ ಸೌಲಭ್ಯ ಸೇರಿದಂತೆ ಬಡವರ ಸಂಕಷ್ಟಕ್ಕೆ ನೆರವಾಗುವ ಸೇವಾ ಭಾವನೆವಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಅಭ್ಯರ್ಥಿ ಎಚ್.ವಿ.ವೆಂಕಟೇಶ್‌ರವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವುದಾಗಿ ನೂತನವಾಗಿ ಸೇರ್ಪಡೆಯಾದ ಅನೇಕ ಮುಖಂಡರು ತಿಳಿಸಿದ್ದಾರೆ.
ಕಾಂಗ್ರೆಸ್‌ಗೆ ಮತ ನೀಡಿದರೆ ಸಿದ್ದರಾಮಯ್ಯ ಸಿಎಂ ಖಚಿತ
ಗಂಗಾವತಿ(ಏ.06): ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದರೆ ರಾಜ್ಯದಲ್ಲಿ ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವುದು ಖಚಿತ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿದರು. ತಾಲೂಕಿನ ಹಂಪಸದುರ್ಗಾದಲ್ಲಿ ಜರುಗಿದ ಚುನಾವಣೆ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದ್ದು, ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ತಾವು ಸ್ಪರ್ಧಿಸುತ್ತಿದ್ದು, ನನಗೆ ಮತ ಹಾಕಿ ಬೆಂಬಲಿಸಿ ಸಿದ್ದರಾಮಯ್ಯ ಅವರ ಕೈ ಬಲಪಡಿಸಿದರೆ ಮುಖ್ಯಮಂತ್ರಿ ಆಗುವುದರಲ್ಲಿ ಸಂದೇಹ ಇಲ್ಲ ಎಂದರು.
ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭದಲ್ಲಿ ಹಲವಾರು ಯೋಜನೆ ಅನುಷ್ಟಾನಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಮತ್ತೇ ಮುಖ್ಯಮಂತ್ರಿ ಆದರೆ ಹಲವಾರು ಯೋಜನೆ ಕಾರ್ಯಗತಗೊಳಿಸುತ್ತಾರೆ ಎಂದರು.
ಈ ಭಾರಿ ಚುನಾವಣೆಗೆ ಬಳ್ಳಾರಿಯಿಂದ ಬಂದಿದ್ದಾರೆ, ಈಗಾಗಲೇ ಲೂಟಿ ಮಾಡಿ ಸಾಕಷ್ಟುಹೆಸರು ಪಡೆದಿದ್ದಾರೆ.ಇಂತವರು ಇಲ್ಲಿ ಇರಲಿಕ್ಕೆ ಸಾಧ್ಯಇಲ್ಲ. ಸರ್ಕಾರದ ಸಂಪತ್ತು ನಮ್ಮ ಸಂಪತ್ತು ಆಗಿದೆ.ಇಂತಹ ಸರ್ಕಾರದ ಲೂಟಿ ಮಾಡಿ ಈಗ ಗಂಗಾವತಿಗೆ ಬಂದಿದ್ದಾರೆ. ಇವರಿಂದ ಅಭಿವೃದ್ಧಿ ಹೇಗೆ ಸಾಧ್ಯ ಎಂದರು. ಈ ಸಂದರ್ಭದಲ್ಲಿ ಹಲವಾರು ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.
ಕಾಂಗ್ರೆಸ್ಸಿನವರಿಗೆ ಗುಂಡಿಗೆನೂ ಇಲ್ಲ, ಗಂಡಸ್ತನವೂ ಇಲ್ಲ: ಸಚಿವ ಆನಂದ್ ಸಿಂಗ್ ವಿವಾದಾತ್ಮಕ ಹೇಳಿಕೆ
ರೋಡ್ ಶೋ:
ಹಂಪಸ ದುರ್ಗಾದಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ರೋಡ್ ಶೋ ನಡೆಸಿದರು.ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಗ್ರಾಮದಲ್ಲಿ ಮತ ಯಾಚಿಸಿದರು. ಅಸಂಖ್ಯಾತ ಮಹಿಳೆಯರು,ಯುವಕರು ಜೈ ಘೋಷ ಹಾಕಿದರು.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.