ಏ,10. ಕಾಂಗ್ರೆಸ್ ನಿಂದ ಆರಿಸಿ ಬಂದಿದ್ದ ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿಯ ಮಾಜಿ ಸದಸ್ಯರು ತಮ್ಮ ಅಪಾರ ಬೆಂಬಲಿಗರೊಂದಿಗೆ ಬಿಜೆಪಿಯನ್ನು ಸೇರಿದರು.
ತುರುವೇಕೆರೆ : ಏ,10. ಕಾಂಗ್ರೆಸ್ ನಿಂದ ಆರಿಸಿ ಬಂದಿದ್ದ ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿಯ ಮಾಜಿ ಸದಸ್ಯರು ತಮ್ಮ ಅಪಾರ ಬೆಂಬಲಿಗರೊಂದಿಗೆ ಬಿಜೆಪಿಯನ್ನು ಸೇರಿದರು.
ಬಾಣಸಂದ್ರ ಜಿಲ್ಲಾ ಪಂಚಾಯ್ತಿಯಿಂದ ಸದಸ್ಯೆಯಾಗಿ ಆಯ್ಕೆಯಾಗಿದ್ದ ರೇಣುಕಾ ರವರ ಪತಿ ಕೃಷ್ಣಮೂರ್ತಿ, ಶೆಟ್ಟಿಗೊಂಡನಹಳ್ಳಿಯ ತಾಲೂಕು ಪಂಚಾಯ್ತಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಅರಳಹಳ್ಳಿ ಮಹಲಿಂಗಯ್ಯ, ಬಾಣಸಂದ್ರ ತಾಲೂಕು ಪಂಚಾಯ್ತಿ ಮಾಜಿ ಸದಸ್ಯೆ ಹಾಗೂ ಮಾಜಿ ತಾಲೂಕು ಪಂಚಾಯ್ತಿ ಅಧ್ಯಕ್ಷೆ ನಾಗರತ್ನ ರವರ ಪತಿ ರವೀಂದ್ರ ತಮ್ಮ ನೂರಾರು ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರ್ಪಡೆಗೊಂಡರು.
ವಿಧಾನಪರಿಷತ್‌ನ ಮಾಜಿ ಸದಸ್ಯರಾಗಿರುವ ಎಂ.ಡಿ.ಲಕ್ಷ್ಮೇನಾರಾಯಣ್, ಹಾಲಿ ಶಾಸಕ ಮಸಾಲಾ ಜಯರಾಮ್ ಹಾಗೂ ತಾಲೂಕು ಬಿಜೆಪಿ ಅಧ್ಯಕ್ಷ ಕಲ್ಕೆರೆ ಮೃತ್ಯುಂಜಯ ಪಕ್ಷಕ್ಕೆ ಬಂದ ಎಲ್ಲರನ್ನೂ ಪಕ್ಷದ ಶಾಲು ಹಾಕಿ ಬರಮಾಡಿಕೊಂಡರು.
ಮಾಜಿ ಸದಸ್ಯ ಎಂ.ಡಿ.ಲಕ್ಷ್ಮೇನಾರಾಯಣ್ ಮಾತನಾಡಿ, ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟಬಹುಮತವನ್ನು ಪಡೆದು ಸರ್ಕಾರ ರಚಿಸುವುದು ನೂರಕ್ಕೆ ನೂರು ಖಚಿತ. ಕಾಂಗ್ರೆಸ್ ನವರು ಅಧಿಕಾರಕ್ಕೆ ಬರುವುದಾಗಿ ಹಗಲುಗನಸು ಕಾಣುತ್ತಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಹುದ್ದೆಯ ಮೇಲೆ ಮೂರ್ನಾಲ್ಕು ಮಂದಿ ಕಣ್ಣಿಟ್ಟಿದ್ದಾರೆ. ಅವರಲ್ಲಿ ಕಿತ್ತಾಟವಿದೆ. ಪರಸ್ಪರ ದ್ವೇಷ ಸಾಧಿಸಿ ಗೆಲುವಿಗೆ ಕಲ್ಲು ಹಾಕಿಕೊಳ್ಳುತ್ತಾರೆ. ಉಳಿದಿರುವುದು ಬಿಜೆಪಿ ಒಂದೇ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಏನೇನು ತಯಾರಿ ಬೇಕೋ ಅವನ್ನೆಲ್ಲಾ ಮಾಡಿಕೊಳ್ಳಲಾಗಿದೆ. ಈಗಾಗಲೇ ರೂಪುರೇಷೆಗಳೂ ಸಹ ಸಿದ್ದವಾಗಿದೆ ಎಂದು ಹೇಳಿದರು.
ತುರುವೇಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಾಲಿ ಶಾಸಕ ಮಸಾಲಾ ಜಯರಾಮ್ ಮಾಡಿರುವ ಅಭಿವೃದ್ಧಿ ಕಾರ್ಯಗಳು ಅವರ ಗೆಲುವಿಗೆ ಸಹಕಾರಿಯಾಗಲಿದೆ. ಮುಂಬರುವ ಚುನಾವಣೆಯಲ್ಲಿ ಕನಿಷ್ಠ 20 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವುದರಲ್ಲಿ ಸಂದೇಹವೇ ಇಲ್ಲ ಎಂದು ಎಂ.ಡಿ.ಲಕ್ಷ್ಮೇನಾರಾಯಣ್ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕು ಕಾಂಗ್ರೆಸ್ ನಲ್ಲಿ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ನೇಮಕಗೊಂಡಿರುವ ಬೆಮಲ್ ಕಾಂತರಾಜ್ ರವರು ಕಾಂಗ್ರೆಸ್ ಕಾರ್ಯಕರ್ತರನ್ನು ಗುರುತಿಸುವ ಕಾರ್ಯ ಮಾಡಲಿಲ್ಲ. ಕಾರ್ಯಕರ್ತರನ್ನು ಹುರಿದುಂಬಿಸುವ ಕಾರ್ಯ ಮಾಡಲಿಲ್ಲ. ಸೋಲುವ ಪಕ್ಷದಲ್ಲಿ ಇದ್ದು ಕಾರ್ಯಕರ್ತರಿಗೆ ಮಾನಸಿಕವಾಗಿ ಹಿಂಸೆ ಕೊಡುವ ಬದಲು ಗೆಲ್ಲುವ ಪಕ್ಷಕ್ಕೆ ಸೇರಿ ಮುಂದಿನ ದಿನಗಳಲ್ಲಿ ತಮ್ಮನ್ನು ನಂಬಿರುವ ಕಾರ್ಯಕರ್ತರಿಗೆ ತಮ್ಮಿಂದಾಗುವ ಸೇವೆಯನ್ನು ಪ್ರಾಮಾಣಿಕವಾಗಿ ಮಾಡುವ ಮನಸ್ಸು ಮಾಡಿ ಕಾಂಗ್ರೆಸ್ ತ್ಯಜಿಸಿ ಬಿಜೆಪಿಗೆ ಸೇರ್ಪಡೆಯಾಗಿರುವುದಾಗಿ ಮುಖಂಡರಾದ ಬುಗುಡನಹಳ್ಳಿ ಕೃಷ್ಣಮೂರ್ತಿ ಮತ್ತು ಅರಳಹಳ್ಳಿ ಮಹಲಿಂಗಯ್ಯ ಹೇಳಿದರು.
ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಸರ್ಕಾರದ ವತಿಯಿಂದ ಮಾಡಿರುವ ಕೆಲಸಗಳು ಮಾತನಾಡುತ್ತಿವೆ. ಕಾರ್ಯಕರ್ತರು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡಿರುವ ತೃಪ್ತಿ ತಮಗಿದೆ. ಕಾರ್ಯಕರ್ತರೇ ನನಗೆ ಬೆನ್ನೆಲುಬು. ಅವರ ಶ್ರಮದಿಂದಾಗಿ ತಾವು ಶಾಸಕರಾಗಿದುದು. ಮುಂಬರುವ ದಿನಗಳಲ್ಲೂ ಸಹ ಅವರು ಹಾಕುವ ಶ್ರಮವೇ ನನಗೆ ಶ್ರೀರಕ್ಷೆ ಎಂದು ಶಾಸಕ ಮಸಾಲಾ ಜಯರಾಮ್ ರವರು ಭಾವುಕವಾಗಿ ಹೇಳಿದರು.
ಈ ಸಂಧರ್ಭದಲ್ಲಿ ಮುಖಂಡರಾದ ಅರಳೀಕೆರೆ ಶಿವಯ್ಯ, ಮಾಚೇನಹಳ್ಳಿ ರಾಮಣ್ಣ, ಕೊಂಡಜ್ಜಿ ವಿಶ್ವನಾಥ್, ದುಂಡ ರೇಣುಕಯ್ಯ, ಚೌಧಿ ಗಿರೀಶ್, ಕಡೇಹಳ್ಳಿ ಸಿದ್ದೇಗೌಡ, ಮುನಿಯೂರು ಮೂರ್ತಿ, ವಕೀಲ ನಾಗೇಶ್, ಬಡಗರಹಳ್ಳಿ ರಾಮೇಗೌಡ, ಡೊಂಕಿಹಳ್ಳಿ ಪ್ರಕಾಶ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು
..............................................
10 ಟಿವಿಕೆ 2 - ತುರುವೇಕೆರೆಯ ಬಿಜೆಪಿ ಕಛೇರಿಯಲ್ಲಿ ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿಯ ಮಾಜಿ ಸದಸ್ಯರು ತಮ್ಮ ಹಲವಾರು ಬೆಂಬಲಿಗರೊಂದಿಗೆ ಬಿಜೆಪಿ ಸೇರಿದರು.
10 ಟಿವಿಕೆ 3 - ತುರುವೇಕೆರೆಯ ಭಾರತೀಯ ಜನತಾ ಪಕ್ಷದ ಕಛೇರಿಯಲ್ಲಿ ಶಾಸಕ ಮಸಾಲಾ ಜಯರಾಮ್ ರವರ ಹುಟ್ಟುಹಬ್ಬವನ್ನು ಕಾರ್ಯಕರ್ತರ ಸಮ್ಮುಖ ಆಚರಿಸಲಾಯಿತು.